ಚಾಮರಾಜನಗರ: ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ ಸಂಬಂಧ ಆ.೨೨ ರಂದು ಜಿಲ್ಲಾಮಟ್ಟದಲ್ಲಿ ಬೃಹತ್ ಕಾಲ್ನಡಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಮನವಿ ಮಾಡಿದರು.
ನಗರದ ಜಿಲ್ಲಾಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ ಕಾಲ್ನಡಿಗೆ ಪಾದಯಾತ್ರೆ ಕಾರ್ಯಕ್ರಮ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ಪ್ರತಿಪಕ್ಷ ನಾಯಕರು ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ಆದೇಶದ ಮೇರೆಗೆ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ ಕಾಲ್ನಡಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಆ. ೨೨ ರಂದು ಚಾಮರಾಜನಗರ ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿರುವ ಬಣ್ಣಾರಿಅಮ್ಮನ್ ದೇವಾಲಯದ ಆವರಣದಲ್ಲಿ ಅಂದು ಬೆಳಗ್ಗೆ ಬೃಹತ್ ಕಾಲ್ನಡಿಗೆ ಪಾದಯಾತ್ರೆಗೆ ಚಾಲನೆ ನೀಡಲಾಗುವುದು, ಮಾರ್ಗಮದ್ಯದ ಗ್ರಾಮಗಳಾದ ಶಿವಪುರ, ಉತ್ತವಳ್ಳಿ, ಮೂಡ್ಲುಪುರ ಮೂಲಕ ಚಾಮರಾಜನಗರ ತಲುಪಲಾಗುವುದು. ಸಂತೇಮರಹಳ್ಳಿ ವೃತ್ತದಿಂದ ಮಸಗಾಪುರ, ಮಾದಾಪುರ, ಮಂಗಲ, ಮಹಂತಾಳಪುರ ತಲುಪಿ ಪಾದಯಾತ್ರೆ ಮುಕ್ತಾಯ ಮಾಡಲಾಗುವುದು, ಕಾರ್ಯಕರ್ತರಿಗೆ ಕುಡಿಯುವನೀರು, ತಿಂಡಿತಿನಿಸು, ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.
ಪಾದಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಿ ಪಾದಯಾತ್ರೆ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ಪಕ್ಷ ಸಂಘಟನೆ ದೃಷ್ಟಿಯಿಂದ ಈಗಾಗಲೇ ಗುಂಡ್ಲುಪೇಟೆಯಲ್ಲಿ ನಡೆದ ಪಾದಯಾತ್ರೆ ಯಶಸ್ವಿಯಾಗಿದೆ. ಮಳೆಹೆಚ್ಚಾದ ಕಾರಣ ಆ.೧೦ ರಂದು ನಡೆಯಬೇಕಿದ್ದ ಕಾಲ್ನಡಿಗೆ ಪಾದಯಾತ್ರೆಯನ್ನು ರದ್ದುಪಡಿಸಲಾಗಿತ್ತು.
ಆ.೨೨ರಂದು ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿರುವ ಬಣ್ಣಾರಿಅಮ್ಮನ್ ದೇವಾಲಯದ ಆವರಣದಲ್ಲಿ ಕಾಲ್ನಡಿಗೆ ಪಾದಯಾತ್ರೆಗೆ ಚಾಲನೆ ದೊರೆಯಲಿದ್ದು, ಕಾರ್ಯಕರ್ತರು ಅಂದು ಬೆಳಗ್ಗೆ ೧೦ ಕ್ಕೆ ಹಾಜರಾಗಬೇಕು ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಎ.ಎಸ್.ಗುರುಸ್ವಾಮಿ, ಎಸ್ಟಿ ಮೋರ್ಚಾ ರಾಜ್ಯ ಪ್ರದಾನ ಕಾರ್ಯದರ್ಶಿ ಪು.ಶ್ರೀನಿವಾಸನಾಯಕ, ಜಿಪಂ ಮಾಜಿಸದಸ್ಯರಾದ ರಮೇಶ್, ಕೆ.ಪಿ.ಸದಾಶಿವಮೂರ್ತಿ, ಕೆಪಿಸಿಸಿ ಒಬಿಸಿ ವಿಭಾಗದ ರಾಜ್ಯ ಪ್ರದಾನ ಕಾರ್ಯದರ್ಶಿ ಮಹದೇವಶೆಟ್ಟಿ, ಅಲ್ಪಸಂಖ್ಯಾತರ ವಿಭಾಗದ ಪ್ರದಾನಕಾರ್ಯದರ್ಶಿ ಅಬ್ಜಲ್ ಷರೀಪ್, ಕಾನೂನು ಸಲಹೆ ಗಾರ ಪೃಥಿ, ನಗರ ಸದಸ್ಯ ಭಾಗ್ಯಮ್ನ ಎಪಿಎಂಸಿ ಸದಸ್ಯ ಸೋಮೇಶ್, ಮುಖಂಡರಾದ ಬಾಲಚಂದ್ರಮೂರ್ತಿ, ಕಾಗಲವಾಡಿ ಶಿವಸ್ವಾಮಿ, ಚಂದ್ರು, ಮಹೇಶ್ ಕುದರ್, ಪಿ.ಲಿಂಗರಾಜು, ವಕೀಲ ಅರುಣ್ ಕುಮಾರ್. ಶಿವಮೂರ್ತಿ, ನಾಗಬಸವಣ್ಣ, ಶಿವಮೂರ್ತಿ, ಮಹದೇವಸ್ವಾಮಿ, ವೀರಭದ್ರಸ್ವಾಮಿ, ನಾಗಯ್ಯ, ಬಿಸಲವಾಡಿ ಉಮೇಶ್, ಕುಮಾರ್, ಕಾರ್ಯಕರ್ತರು, ಹಾಜರಿದ್ದರು.