ಮೈಸೂರು,ಜ- ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎ ನಿವೇಶನ ಪಡೆಯುವ ಸಂಬಂಧ ಇಂದು ಸ್ಥಳ ಪರಿಶೀಲನೆ ನಡೆಸಲಾಯಿತು.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಲಾರಿ ಟರ್ಮಿನಲ್ ಸನಿಹದ ವಸತಿ ಬಡಾವಣೆಯಲ್ಲಿ ಲಭ್ಯವಿರುವ 9 ಗುಂಟೆ ಅಳತೆಯ ಸಿಎ ನಿವೇಶವನ್ನು ತೋರಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳೊಂದಿಗೆ ಮುಡಾ ನಗರ ಯೋಜನಾ ಶಾಖೆಯ ಸಹಾಯಕ ನಿರ್ದೇಶಕರಾದ ಯಜ್ಞೇಂದ್ರ ಹಾಗೂ ಅಸಿಸ್ಟೆಂಟ್ ಇಂಜಿನಿಯರ್ ಪ್ರಶಾಂತ್ ಅವರು ಸ್ಥಳ ಪರಿಶೀಲನೆ ನಡೆಸಿದರು.
ಈ ಜಾಗ ಪತ್ರಕರ್ತರ ಸಂಘದ ಕಚೇರಿಗೆ ಸೂಕ್ತವಾಗಿದ್ದು, 80 ಅಡಿ ಅಗಲದ ರಸ್ತೆಗೆ ಹೊಂದಿಕೊಂಡಂತಿದೆ. ಜೊತೆಗೆ ಸಕಲ ರೀತಿಯಲ್ಲೂ ಪ್ರಶಸ್ತವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸಿಎ ನಿವೇಶನ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್. ಟಿ. ರವಿಕುಮಾರ್, ಉಪಾಧ್ಯಕ್ಷರಾದ ಅನುರಾಗ್ ಬಸವರಾಜ್, ಖಜಾಂಚಿ ನಾಗೇಶ್ ಪಾಣತ್ತಲೆ, ನಗರ ಕಾರ್ಯದರ್ಶಿ ಪಿ. ರಂಗಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್ ಕೃಷ್ಣ, ಶಿವಮೂರ್ತಿ ಜಪ್ತಿಮಠ, ಬೀರೇಶ್ ಅವರುಗಳು ಹಾಜರಿದ್ದರು.