ಮೈಸೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಲು ಶುಶ್ರೂಷಕರ ಖಾಲಿ ಹುದ್ದೆಗಳಿಗಾಗಿ ಜೂನ್ 4 ರಂದು ಗುತ್ತಿಗೆ ಆಧಾರದಲ್ಲಿ ನೇರ ಸಂದರ್ಶನದ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಬೆಳಗ್ಗೆ 10 ಗಂಟೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಾಜರಾಗಬಹುದು.
ಹುದ್ದೆಗಳ ವಿವರ ಇಂತಿವೆ: ನರ್ಸಿಂಗ್ ಅಧಿಕಾರಿ ಹುದ್ದೆಯಲ್ಲಿ 13 ಖಾಲಿ ಹುದ್ದೆಗಳಿದ್ದು, ಬಿ.ಎಸ್.ಸಿ ವಿದ್ಯಾರ್ಹತೆ ಹೊಂದಿರುವ  ಸಾಮಾನ್ಯ ಅಭ್ಯರ್ಥಿಗಳು 35 ವರ್ಷ, ಓಬಿಸಿ ಅಭ್ಯರ್ಥಿಗಳು 38 ವರ್ಷ ಹಾಗೂ ಪರಿಶಿಷ್ಟ  ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳು 40 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ಶುಶ್ರೂಷಣಾಧಿಕಾರಿ ಖಾಲಿ ಹುದ್ದೆಗಳ ವಿವರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಇಲಾಖೆಯಲ್ಲಿ 1, ವಿ.ವಿ ಪುರಂ ಹೆರಿಗೆ ಆಸ್ಪತ್ರೆ- 1, ಹುಣುಸೂರಿನ ಸಾರ್ವಜನಿಕ ಆಸ್ಪತ್ರೆ-1, ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆ-2, ದಾಸನೂರಿನ ಪ್ರಾಥಾಮಿಕ ಆರೋಗ್ಯ ಕೇಂದ್ರ-1, ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆ-2, ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆ-1, ಟಿ. ನರಸೀಪುರ ಸಾರ್ವಜನಿಕ ಆಸ್ಪತ್ರೆ-1, ಬನ್ನೂರಿನ ಸಮುದಾಯ ಆರೋಗ್ಯ ಕೇಂದ್ರ-1, ತಲಕಾಡಿನ ಸಮುದಾಯ ಆರೋಗ್ಯ ಕೇಂದದಲ್ಲಿ-2 ಖಾಲಿ ಹುದ್ದೆಗಳಿವೆ.
ಆಸಕ್ತರು ನೇರ ಸಂದರ್ಶನಕ್ಕೆ ತಮ್ಮ ಮೂಲ ಅಂಕಪಟ್ಟಿಗಳು ಮತ್ತು ಎಲ್ಲಾ ಪ್ರಮಾಣ ಪತ್ರಗಳೊಂದಿಗೆ ವಿಳಾಸ ಮತ್ತು ಐಡಿ ಪ್ರೂಫ್‍ಗಳ ಜೆರಾಕ್ಸ್‍ಗಳೊಂದಿಗೆ ನಿಗದಿತ ದಿನಾಂಕ ಮತ್ತು ಸಮಯಕ್ಕೆ ಹಾಜರಾಗಬಹುದು. ಈ ಹುದ್ದೆಗಳು ತಾತ್ಕಾಲಿಕವಾಗಿದ್ದು, ಸೆಪ್ಟೆಂಬರ್ 30ರವರೆಗೆ ಅಥವಾ ನೇರ ನೇಮಕಾತಿ ಹುದ್ದೆಗಳು ಭರ್ತಿಯಾಗುವವರೆಗೆ ಮಾತ್ರ ನೇಮಕಾತಿ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ. ಸಂ:0821-2529205 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

By admin