-ಕಾರ್ಪೊರೇಟ್ ಸಾಮಾಜಿಕ ಉಪಕ್ರಮದ ಭಾಗವಾಗಿ ಎನ್‌ಆರ್ ಸಮುದಾಯ ಅಭಿವೃದ್ಧಿ ಕೇಂದ್ರದಿಂದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿಗೆ ಟ್ಯಾಲಿ ಸಾಫ್ಟ್‌ವೇರ್ ಮತ್ತು ಪಾರ್ಕ್ ಬೆಂಚುಗಳ ವಿತರಣೆ
ಮೈಸೂರು: ಎನ್‌ಆರ್ ಫೌಂಡೇಶನ್‌ನ ಒಂದು ಉಪಕ್ರಮವಾಗಿರುವ ಎನ್‌ಆರ್ ಸಮುದಾಯ ಅಭಿವೃದ್ಧಿ ಕೇಂದ್ರ (ಸೆಂಟರ್ ಫಾರ್ ಕಮ್ಯುನಿಟಿ ಡೆವಲಪ್‌ಮೆಂಟ್ -nccd) ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ೨ ತಿಂಗಳ ಉದ್ಯೋಗ ಕೌಶಲ್ಯ ತರಬೇತಿಯನ್ನು ಹಮ್ಮಿಕೊಂಡಿತ್ತು. ಕುರುಬರಹಳ್ಳಿಯಲ್ಲಿ ಚಿಂದಿ ಆಯುವ ಮಹಿಳೆಯರಿಗಾಗಿ ೩ ತಿಂಗಳ ಟೈಲರಿಂಗ್ ತರಬೇತಿ ಹಾಗೂ ಅಂಧ ವಿದ್ಯಾರ್ಥಿಗಳಿಗಾಗಿ ೧೦ ದಿನಗಳ ಪೇಪರ್ ಬ್ಯಾಗ್ ತಯಾರಿಕಾ ತರಬೇತಿಯನ್ನು ಆಯೋಜಿಸಲಾಗಿತ್ತು. ಉದ್ಯೋಗಾವಕಾಶ ಕೌಶಲ್ಯ-೬೩, ಟೈಲರಿಂಗ್ ತರಬೇತಿ-೧೫ ಮತ್ತು ಪೇಪರ್ ಬ್ಯಾಗ್ ತಯಾರಿಕೆ-೭ ಸೇರಿ ಒಟ್ಟು ೮೫ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು. ಈ ಉಪಕ್ರಮದ ಅಡಿಯಲ್ಲಿ ಉದ್ಯೋಗ ಕೌಶಲ್ಯ ಮತ್ತು ವೃತ್ತಿಪರ ಕೌಶಲ್ಯ ತರಬೇತಿಯನ್ನು ಪೂರ್ಣಗೊಳಿಸಿದ ಎಲ್ಲಾ ೬೩ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಕಾರ್ಪೊರೇಟ್ ಸಾಮಾಜಿಕ ಉಪಕ್ರಮದ ಭಾಗವಾಗಿ ಎನ್‌ಆರ್ ಫೌಂಡೇಶನ್‌ನಿಂದ ಟ್ಯಾಲಿ ಸಾಫ್ಟ್‌ವೇರ್ ಮತ್ತು ೩೦ ಪಾರ್ಕ್ ಬೆಂಚುಗಳನ್ನು ಕಾಲೇಜಿಗೆ ನೀಡಲಾಯಿತು.
ಎನ್‌ಆರ್ ಸಮೂಹದ ಅಧ್ಯಕ್ಷರಾದ ಶ್ರೀ ಗುರು ಮತ್ತು ಕಾರ್ಯಕ್ರಮದ ಕುರಿತು ಮಾತನಾಡಿದ ರಿಪ್ಪಲ್ ಫ್ರಾಗ್ರೆನ್ಸಸ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕಿರಣ್ ರಂಗ, ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹಾದೇವ ಸ್ವಾಮಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಲ್ಲಿ ಉದ್ಯೋಗ ಕೌಶಲ್ಯವನ್ನು ಬೆಳೆಸುವ ಮೂಲಕ ಅವರ ಉದ್ಯೋಗಾವಕಾಶವನ್ನು ಹೆಚ್ಚಿಸಲು ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಯಿತು. ೭ ಜನ ಅಂಧ ವಿದ್ಯಾರ್ಥಿಗಳಿಗೆ ಪೇಪರ್ ಬ್ಯಾಗ್‌ಗಳನ್ನು ತಯಾರಿಸಲು ವೃತ್ತಿಪರ ತರಬೇತಿಯನ್ನು ನೀಡುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸ್ವಯಂ ಉದ್ಯಮಶೀಲತೆಯನ್ನು ಪ್ರಾರಂಭಿಸಲು ಪ್ರೇರೇಪಿಸಲಾಯಿತು. ಕುಟುಂಬದ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಕುರುಬರಹಳ್ಳಿಯಲ್ಲಿನ ೧೫ ಚಿಂದಿ ಆಯುವ ಮಹಿಳೆಯರಿಗೆ ಟೈಲರಿಂಗ್ ಕೌಶಲವನ್ನು ಸಹ ನೀಡಲಾಯಿತು.
ಕಾರ್ಯಕ್ರಮದ ಕುರಿತು ಮಾತನಾಡಿದ ಎನ್‌ಆರ್ ಸಮೂಹದ ಅಧ್ಯಕ್ಷರಾದ ಶ್ರೀ ಆರ್.ಗುರು ಅವರು, ?ಶಕ್ತಿಗಿಂತ ಕೌಶಲ್ಯ ಮುಖ್ಯ ಎನ್ನುವುದು ನಮ್ಮ ನಂಬಿಕೆಯಾಗಿದೆ. ಮತ್ತು ಇದೇ ಕಾರಣಕ್ಕೆ ಸಮಾಜದ ದುರ್ಬಲ ವರ್ಗದವರಿಗೆ ಉದ್ಯೋಗ ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ಅವರ ಜೀವನವನ್ನು ಮೇಲ್ದರ್ಜೆಗೇರಿಸಲು ನಾವು ಬದ್ಧರಾಗಿದ್ದೇವೆ. ಈ ತರಬೇತಿಯ ಮೂಲಕ, ಸ್ವಂತ ಕಾಲ ಮೇಲೆ ನಿಲ್ಲಲು ಮತ್ತು ತಮ್ಮ ಕುಟುಂಬವನ್ನು ಮುನ್ನಡೆಸಲು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಬಯಸುತ್ತೇವೆ. ಎನ್‌ಆರ್ ಫೌಂಡೇಶನ್ ವಿದ್ಯಾರ್ಥಿಗಳ ಜೀವನವನ್ನು ಉನ್ನತೀಕರಿಸಲು ಬಹು ವೃತ್ತಿಪರ ತರಬೇತಿಯನ್ನು ನೀಡುತ್ತದೆ. ಒಂದು ಮೌಲ್ಯಾಧಾರಿತ ಸಂಸ್ಥೆಯಾಗಿ, ನಾವು ನಮ್ಮ ಸಮಾಜಕ್ಕೆ ಸೇವೆ ಸಲ್ಲಿಸಲು ಪ್ರತಿಜ್ಞೆ ಮಾಡುತ್ತೇವೆ” ಎಂದು ಹೇಳಿದರು.
ಕಾರ್ಯಕ್ರಮದ ಕುರಿತು ಮಾತನಾಡಿದ ರಿಪ್ಪಲ್ ಫ್ರಾಗ್ರೆನ್ಸಸ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕಿರಣ್ ರಂಗ, ?ಯುವ ವಿದ್ಯಾರ್ಥಿಗಳಿಗೆ ತಮ್ಮ ಮೇಲೆ ತಾವು ನಂಬಿಕೆಯಿಡಲು ಪ್ರೇರೇಪಿಸುವುದು ನಮ್ಮ ಗುರಿಯಾಗಿದೆ. ಕಾಲೇಜು ವಿದ್ಯಾರ್ಥಿಗಳು ಭಾರತದ ಉಜ್ವಲ ಭವಿಷ್ಯ. ಸಮಾಜದ ದುರ್ಬಲ ವರ್ಗಗಳನ್ನು ಬೆಂಬಲಿಸುವ ಜೊತೆಗೆ ಅವರ ಜೀವನಮಟ್ಟವನ್ನು ಸುಧಾರಿಸಲು ನಾವು ಅವರನ್ನು ಪ್ರೋತ್ಸಾಹಿಸುತ್ತೇವೆ” ಎಂದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಮಹಾರಾಣಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹದೇವ ಸ್ವಾಮಿ, ?ಕಾಲೇಜಿಗೆ ಟ್ಯಾಲಿ ಸಾಫ್ಟ್‌ವೇರ್ ಮತ್ತು ೩೦ ಪಾರ್ಕ್ ಬೆಂಚುಗಳನ್ನು ಸ್ವೀಕರಿಸಲು ನಮಗೆ ನಿಜವಾಗಿಯೂ ಸಂತಸವೆನಿಸಿದೆ. ಇದು ನಮ್ಮ ಮೂಲಸೌಕರ್ಯಕ್ಕೆ ಹೆಚ್ಚಿನ ಸೇರ್ಪಡೆಯಾಗಿದೆ. ಅಂಧ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುವತ್ತ ಎನ್‌ಆರ್ ಫೌಂಡೇಶನ್ ಗಮನಹರಿಸಿದೆ ಎನ್ನುವುದನ್ನು ತಿಳಿದು ನಮಗೆ ಹೃದಯ ತುಂಬಿ ಬಂದಿದೆ. ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ಅವರ ಕುಟುಂಬದಲ್ಲಿ ಸ್ಥಿರವಾದ ಆದಾಯವನ್ನು ತರಲು ಸಹಾಯ ಮಾಡುವುದು ಮತ್ತು ಆರ್ಥಿಕವಾಗಿ ಹಿಂದುಳಿದ ಜನರನ್ನು ಮೇಲಕ್ಕೆತ್ತುವುದು ಈ ಸಂಸ್ಥೆಯ ಉದ್ದೇಶವಾಗಿದೆ. ಈ ತರಬೇತಿ ಕಾರ್ಯಕ್ರಮವು ನಮ್ಮ ಕಾಲೇಜಿನ ಒಂದು ಮಹತ್ವದ ಹೆಜ್ಜೆಯಾಗಿದೆ” ಎಂದು ಅಭಿಪ್ರಾಯಪಟ್ಟರು.


ಕಾಲೇಜಿನ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಟ್ಯಾಲಿ ಸಾಫ್ಟ್‌ವೇರ್ ಮತ್ತು ೩೦ ಪಾರ್ಕ್ ಬೆಂಚುಗಳನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಮಹದೇವ ಸ್ವಾಮಿ, ಕನ್ನಡ ವಿಭಾಗದ ಪ್ರೊ.ಕೃಷ್ಣಮೂರ್ತಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಸೋಮಣ್ಣ ಉಪಸ್ಥಿತರಿದ್ದರು. ಎಂ.ಕಾಂ. ವಿಭಾಗದ ಮುಖ್ಯಸ್ಥ ಡಾ.ಮಂಜು, ಮತ್ತು ಎಂಬಿಎ ಮುಖ್ಯಸ್ಥ ಡಾ.ಪ್ರೊ, ರವಿಶಂಕರ್ ಅತಿಥಿಗಳಾಗಿ ಭಾಗವಹಿಸಿದ್ದರು.
