ಭಾರತವು ಸೌಹಾರ್ದದ ಬದುಕುವ ಮಾದರಿಯನ್ನು ಯಾವಾಗಲೂ ಉಳಿಸಿಕೊಂಡಿದೆ. ಸೌಹಾರ್ದತೆಯು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಾಶ್ವತವಾಗಿ ನೆಲೆಸಿದೆ ಎಂಬುದನ್ನು ಎಲ್ಲರು ಬಲ್ಲರು. ಶಾಲಾ-ಕಾಲೇಜುಗಳು ಜೀವಂತಿಕೆಯಿಂದ ಕೂಡಿರುವ ಸಹಿಷ್ಣು ಕೇಂದ್ರಗಳಾಗಿವೆ. ಇಲ್ಲಿರುವಂತಹ ವಾತಾವಾರಣವನ್ನು ಕಲುಷಿತಗೊಳಿಸುವಂತಹ, ಯಾವುದೇ ಮತಧರ್ಮಗಳ ಆಚಾರ-ವಿಚಾರಗಳನ್ನು ಶಾಲಾ-ಕಾಲೇಜುಗಳ ಅಂಗಳಕ್ಕೆ ಎಳೆದುತರಬಾರದು. ಇದಕ್ಕೆ ಸಂಬಂಧಿಸಿದಂತೆ ಕುಂದಾಪುರ ಸರ್ಕಾರಿ ಕಾಲೇಜಿನ ಮುಸ್ಲಿಂ ಹೆಣ್ಣು ಮಕ್ಕಳು ‘ಹಿಜಾಬ್’ ಧರಿಸದಂತೆ ಒತ್ತಾಯಿಸಿದಂತಹ ಪ್ರಾಂಶುಪಾಲರ ನಡೆ ಖಂಡನೀಯ.

ಇದು ಒಂದು ಅಸಹನೀಯ ನಡೆ.ಇದರಿಂದ ಸ್ವಷ್ಟವಾಗುವುದೆನೆಂದರೆ, ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚಾಗುವುದರತ್ತ ಯುವಸಮೂಹವನ್ನು ಸೆಳೆದು, ದಿಕ್ಕುತಪ್ಪಿಸಲಾಗುತ್ತಿದೆ. ಇದು ತಪ್ಪು. ಕಾನೂನಗಳ ವ್ಯಾಪ್ತಿ ಹಾಗೂ ಪರಿಮಿತಿಗಳ ಅರಿವಿಲ್ಲದೆ, ಯಾವುದೊ ಅಹಿತಕರ (ರಾಜಕೀಯ) ಉದ್ದೇಶಕ್ಕಾಗಿ ಕಾನೂನುಗಳ ರಚನೆಗೆ ಒತ್ತಾಯ ತರುವ ಕೆಟ್ಟ ಸಂಪ್ರದಾಯ ಆರಂಭವಾಗಬಾರದು. ಸಮಾಜದಲ್ಲಿ ಅಧಿಕಾರ ರಹಿತವಾಗಿ ಕಾನೂನುಗಳನ್ನು ಕೈಗೆ ತೆಗೆದುಕೊಳ್ಳುವುದು ಅತ್ಯಂತ ಅಪಾಯಕಾರಿಯಾದುದು ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಷಯ. ಇಂತಹ ವಾತಾವರಣದಿಂದ ಯಾವ ಬೆಳವಣಿಗೆ ಮತ್ತು ಬದಲಾವಣೆಗಳು ಸಾಧ್ಯವಾಗುವುದಿಲ್ಲ.

ಪ್ರತಾಪ್. ಎಂ ಕಂದಹಳ್ಳಿ
ಸಂಶೋಧಕರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ, ಮೈಸೂರು-೦೬