ಅಪ್ಪಅಮ್ಮ ಅಕ್ಕಅಣ್ಣಂದಿರ ಅಕ್ಕರೆಕಂದ
ಅಪೂರ್ವ ಅದ್ಭುತ ಅತಿಶಯದಾನಂದ
ಅಮೋಘ ಕನ್ನಡಕುಲಕೋಟಿ ಮಿತ್ರವೃಂದ
ಅರಳಿತ್ತುಮೊಗ್ಗು ನಿನ್ನತಿಶಯದ ನಗುವಿಂದ
ಅನೇಕರಿಗೆ ಆಗಿದ್ದಿರಿ ನೀವು ಆಲದಮರ
ಆಶ್ರಯದಾತ ನೀವೆಂದೂ ಅಜರಾಮರ
ಅಸಾಧಾರಣ ಚಿರಸ್ಮರಣೀಯ ಧೀರವೀರ
ಆ-ಚಂದ್ರಾರ್ಕ ಚಂದನವನದ ಚಂದಿರ
ನಿರ್ಮಲ ನಿಗರ್ವಿ ರಾಜಕುವರ ಅಪ್ಪು
ನೀ ದಾನಿ ನಿಧಾನಿ ಮಾಡಲಿಲ್ಲ ತಪ್ಪು
ನಿಸ್ವಾರ್ಥಸಂತ ಯುವಶ್ರೇಷ್ಠ ಪುನೀತ
ನಿರಂತರ ಮಿನುಗುತ್ತಿರುವೆ, ನೀ ಅನಂತ
ಕನ್ನಡ ಬೆಳ್ಳಿತೆರೆಯ ಚಿನ್ನದರಥ


ಕುಮಾರಕವಿ ಬಿ.ಎನ್.ನಟರಾಜ
9036976471
ಬೆಂಗಳೂರು-560072