ಮೈಸೂರು ನವೆಂಬರ್- ನೂತನ ಅರ್ನಾಲ್ಡ್ ಫಿಟ್ನೆಸ್ ಕ್ಲಬ್ ಫಿಟ್ ನೆಸ್ ಪ್ರಮುಖ ಸೆಂಟರ್ ಅದ ಅರ್ನಾಲ್ಡ್ ಫಿಟ್ನೆಸ್ ನಲ್ಲಿ ಹೊಚ್ಚ ಹೊಸ ಅಪ್ ನ್ನು ಸಿನಿಮಾ ನಟ ಧನಂಜಯ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು ಈಗಿನ ಪರಿಸ್ಥಿತಿ ಎಲ್ಲರಿಗೂ ಗೊತ್ತಿರುವಂತಹ ವಿಚಾರವಾಗಿದೆ, ನನ್ನ ಗೆಳೆಯ ಹರ್ಷ ಅವರು ನನ್ನ ಫಿಟ್ ನೆಸ್ ಉದ್ಘಾಟನೆಗೆ ಕರೆದಾಗ ಬಹಳ ಸಂತೋಷವಾಗಿ ಒಪ್ಪಿಕೊಂಡೆ. ಈಗಿನ ಪರಿಸ್ಥಿತಿಯಲ್ಲಿ ಆರೋಗ್ಯಕರ ಜೀವನವನ್ನು ಕಾಪಾಡಿಕೊಳ್ಳುವುದು ಮತ್ತು ಆರೋಗ್ಯಕರ ಜೀವನ ರೂಢೀಸಿಕೊಳ್ಳುವುದು ಬಹಳ ಮುಖ್ಯದ ಕೆಲಸವಾಗಿದೆ. ಇದರ ಬಗ್ಗೆ ಒಂದು ಸಂದೇಶವನ್ನು ನೀಡಬಹುದೆಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮಕ್ಕೆ ಬರಲು ಒಪ್ಪಿದೆ ಮತ್ತು ಮೈಸೂರಿನಲ್ಲೇ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು ಹಾಗಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶವೂ ಸಿಕ್ಕಿದ್ದು ತುಂಬಾ ಸಂತೋಷವಾಗಿದೆ ಎಂದರು.
ಕೋವಿಡ್-19 ಸಾಂಕ್ರಾಮಿಕ ದಿಂದಾಗಿ ಎಲ್ಲಾ ಜಿಮ್ ಸೆÉಂಟರ್ ಯೋಗಸೆಂಟರ್ ಗಳು ಮುಚ್ಚಿದ್ದರಿಂದ ಕೆಲವರಿಗೆ ಕಷ್ಟವಾಯಿತಾದರೂ, ಮನೆಯಲ್ಲೇ ಸಣ್ಣಪುಟ್ಟ ವ್ಯಾಯಾಮ ಮಾಡುತ್ತಾ ಕಾಲಕಳೆಯುತ್ತಿದ್ದರು. ಮನೆಯಲ್ಲೆ ಜಿಮ್ ಮಾಡಲು ಸಾಧ್ಯವಿಲ್ಲ ಏಕೆಂದರೆ ಜಿಮ್ ಪರಿಕರಗಳು ಮನೆಯಲ್ಲಿಟ್ಟಿಕೊಳ್ಳಲು ಸಾಧ್ಯವಿರುವುದಿಲ್ಲ ಆದ್ದರಿಂದ ಮನೆಯಲ್ಲೇ ಯೋಗ ಮಾಡಿಕೊಂಡು ಕಾಲಕಳೆಯುತ್ತಾ ಕೋವಿಡ್-19 ಸಮಯವನ್ನು ಸರಿದೂಗಿಸಿಕೊಂಡರಾದರೂ ಜಿಮ್ ಹೋಗಿ ದೇಹದಾಡ್ರ್ಯವನ್ನು ಇನ್ನಷ್ಟು ಹೆಚ್ಚಿಕೊಳ್ಳುವಲ್ಲಿ ಸ್ವಲ್ಪ ಸಮಯ ಕಾಯಬೇಕಾಯಿತು. ಈಗ ಎಲ್ಲೆಡೆ ಎಲ್ಲಾ ಜಿಮ್ ಸೆಂಟರ್ ಗಳು ತೆರೆದಿರುವುದರಿಂದ ಎಲ್ಲರೂ ಜಿಮ್ ಹೋಗಿ ತಮ್ಮ ಫಿಟ್‍ಸೆನ್‍ನ್ನು ಕಾಯ್ದುಕೊಳ್ಳಬಹುದು ಎಂದು ತಿಳಿಸಿದರು.

ಕೋವಿಡ್-19 ಸಮಯದಲ್ಲಿ ಆರೋಗ್ಯ ದಲ್ಲೀ ಏರು ಪೇರು ಆಗದಂತೆ ತಡೆಯುವುದು ಬಹಳ ಮುಖ್ಯವಾಗಿತ್ತು. ಸಾಮಾನ್ಯವಾಗಿ ಕೋವಿಡ್-19 ಸಮಯದಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನಹರಿಸುವುದು ಮುಖ್ಯವಾಗಿತ್ತು. ಅರೋಗ್ಯ ಅಂಥ ಬಂದಾಗ ನಮ್ಮ ಜೀವನ ಶ್ಯಲಿ ಬದಲಾಗುತ್ತೆ ಅದರಿಂದ ನಾವು ಮಾನಸಿಕ ಮತ್ತು ದೈಹಿಕವಾಗಿ ಬಹಳಷ್ಟು ಸದೃಢವಾಗಿ ಇರಬೇಕಾಗುತ್ತದೆ. ಆದ್ದರಿಂದ ಎಲ್ಲರೂ ಕ್ರೀಡಾ ಚಟುವಟಿಕೆ ಭಾಗವಹಿಸಬೇಕು. ಆಗ ನಮಗೆ ಮಾನಸಿಕ ಹಾಗೂ ದೈಹಿಕ ಸ್ಥಿತಿ ಉತ್ತವಾಗಿರುತ್ತದೆ ಎಂದ ಅವರು ಪ್ರತಿಯೊಬ್ಬರೂ ಯೋಗ ಜಿಮ್ ಸ್ವಿಮ್ಮಿಂಗ್, ವಾಕಿಂಗ್, ರನ್ನಿಂಗ್, ಅಥವಾ ಯೋಗ ಇನ್ನೀತರೇ ಆರೋಗ್ಯಕರ ಚಟುವಟಿಯ ಕಾರ್ಯದಲ್ಲಿ ತಮ್ಮನ್ನು ತಾವು ಪೂರ್ಣ ಪ್ರಮಾಣ ತೊಡಿಗಿಸಿ ಕೊಳ್ಳಬೇಕು ಎಂದರು.

ನನ್ನ ಗೆಳೆಯ ಹರ್ಷ ಅವರ ಅರ್ನಾಲ್ಡ್ ಫಿಟ್ನೆಸ್ ಕ್ಲಬ್ ಜಿಮ್ ಸೆಂಟರ್ ನಲ್ಲಿ ನುರಿತ ತರಬೇತು ದಾರರ ಇದ್ದು ಮಾರ್ಗ ದರ್ಶ ನ ಸಲಹೆ ಸೂಚನೆ ಗಳಿಂದ ಉತ್ತಮ ಆರೋಗ್ಯ ಗಳಿಸಲು ಸಹಾಯವಾಗಿದೆ ಎಂದು ಸಲಹೆ ನೀಡಿದರು. ಇದೆ ಸಮಯದಲ್ಲಿ ಜಿಮ್ ನ ಅರ್ನಾಲ್ಡ್ ಫಿಟ್ನೆಸ್ ಕ್ಲಬ್ ಹೊಸ ಅಪ್ ಅಪ್ಲಿಕೇಶನ್ ಬಗ್ಗೆ ಮಾಹಿತಿನೀಡಿದರು.
ಕಾರ್ಯಕ್ರಮದಲ್ಲಿ ನಾಯಕ ನಟ ಧನಂಜಯ್, ಪ್ರಮೋದ ಕುಮಾರ್ ಎಂ.ವಿ.ಮೋಹಿತ್ ಗೌಡ ಎಂ.ಎನ್ ಮತ್ತು ಇತರರು ಹಾಜರಿದ್ದರು.

ವರದಿ ಮಹೇಶ್ ನಾಯಕ

By admin