ಚಾಮರಾಜನಗರ: ರಾಜ್ಯ ಕಾರ್ಮಿಕರ ಹಾಗೂ ಅಸಂಘಟಿತ ಕಾರ್ಮಿಕಸಂಘದ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಸಿ.ಬಿ.ನಾಗರಾಜು ಅವರನ್ನು ತಾಲೂಕು ಉಪ್ಪಾರಸಂಘ, ಜೈಭಗೀರಥ ಪುರುಷರ ಸ್ವಸಹಾಯಸಂಘದ ವತಿಯಿಂದ ನಗರದಲ್ಲಿ ಸನ್ಮಾನಿಸಲಾಯಿತು.
ಸನ್ಮಾನಿಸಿದ ತಾಲೂಕು ಉಪ್ಪಾರಸಂಘದ ಅಧ್ಯಕ್ಷ ಪಿ.ಲಿಂಗರಾಜು ಮಾತನಾಡಿ, ಜಿಲ್ಲೆಯಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸುವುದು, ಅದನ್ನು ಪಡೆವ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು, ಅಸಂಘಟಿತ ಕಾರ್ಮಿಕರ ನೋಂದಣಿಗೆ ಒತ್ತು ನೀಡಲು ನೂತನ ಅಧ್ಯಕ್ಷರು ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ಜೈಭಗೀರಥಸ್ವಸಹಾಯಸಂಘದ ಅಧ್ಯಕ್ಷ ಮಹದೇವಶೆಟ್ಟಿ,
ಗೋವಿಂದರಾಜು, ಬಂಡಿಗೆರೆ, ಕೆಂಪನಪುರ ಗ್ರಾಮದ ಮಹದೇವಶೆಟ್ಟಿ, ವಕೀಲರಾದ ರಂಗಸ್ವಾಮಿ, ಪಿ.ಲೋಕೇಶ್, ಅತೀಕ್‌ವುಲ್ಲಾ, ಸಮೀಉಲ್ಲಾ, ಸೈಬುಲ್ಲಾ ಹಾಜರಿದ್ದರು.
