ಮಿಲೇನಿಯಲ್‌ಗಳಿಗೆ ಗೀತಾ ಪರಿಚಯ: 18 ಅಧ್ಯಾಯಗಳ ಬೋಧನೆ 18 ವಾಕ್ಯಗಳಲ್ಲಿ
–––––––––––––––––––––––––––––––––––––––––––––––––––––––––––––––––
14 ಡಿಸೆಂಬರ್‌ 2021: ಭಾರತದ ಅತಿ ಹೆಚ್ಚು ಮಾರಾಟವಾಗುವ ನೆಚ್ಚಿನ ಪೂಜಾ ಬ್ರಾಂಡ್ ಆಗಿರುವ ಸೈಕಲ್ ಪ್ಯೂರ್ ಅಗರಬತ್ತಿ ಗೀತಾ ಜಯಂತಿಯ ಈ ಶುಭ ಸಂದರ್ಭದಲ್ಲಿ, ಯುವ ಮಿಲೇನಿಯಲ್‌ಗಳಿಗೆ ಜೀವನದ ದೈನಂದಿನ ಸಮಸ್ಯೆಗಳನ್ನು ನಿಭಾಯಿಸಲು ಸಹಾಯವಾಗುವಂತೆ ‘3 ನಿಮಿಷದಲ್ಲಿ ಭಗವದ್ಗೀತೆ’ (ಭಗವದ್ಗೀತಾ ಇನ್ 3 ಮಿನಿಟ್ಸ್) ಎನ್ನುವ ಡಿಜಿಟಲ್‌ ಪುಸ್ತಕವನ್ನು ಪರಿಚಯಿಸುತ್ತಿದೆ.

ಭಗವದ್ಗೀತೆಯು ಡಿಜಿಟಲ್ ಯುಗದಲ್ಲಿ ಬೆಳೆಯುತ್ತಿರುವ ಮಿಲೇನಿಯಲ್‌ ಮತ್ತು Z ಪೀಳಿಗೆಗೆ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ. ಗೀತೆಯಲ್ಲಿನ ಆಳವಾದ ಮತ್ತು ಪ್ರಾಯೋಗಿಕ ಬೋಧನೆಗಳು ಒತ್ತಡ, ಗೊಂದಲ, ಪ್ರೇರಣೆ ಮತ್ತು ಏಕಾಗ್ರತೆಯ ಕೊರತೆಯಂತಹ ಪ್ರಾಥಮಿಕ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಸಹಾಯಕವಾಗಲಿವೆ. ‘3 ನಿಮಿಷಗಳಲ್ಲಿ ಭಗವದ್ಗೀತೆ’ಯು 8 ಭಾರತೀಯ ಭಾಷೆಗಳಲ್ಲಿ ಮತ್ತು 6 ವಿದೇಶಿ ಭಾಷೆಗಳಲ್ಲಿ ಲಭ್ಯವಿದ್ದು, ಆಸಕ್ತರು hಣಣಠಿs://ಟ.ಛಿಥಿಛಿಟe.iಟಿ/giಣಚಿ ವೆಬ್‌ಸೈಟ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಈ ಡಿಜಿಟಲ್‌ ಪುಸ್ತಕದ ಬಗ್ಗೆ ಮಾತನಾಡಿದ ಸೈಕಲ್‌ ಪ್ಯೂರ್‌ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಅರ್ಜುನ್‌ ರಂಗ, ‘ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ನಮ್ಮ ಧ್ಯೇಯಕ್ಕೆ ಅನುಗುಣವಾಗಿ, ನಾವು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಗೀತೆಯನ್ನು ಪರಿಚಯಿಸಲು ಬಯಸಿದ್ದೇವೆ. ನಮ್ಮ ಮಿಲೇನಿಯಲ್‌ಗಳಿಗೆ ಈ ಪ್ರಾಯೋಗಿಕ ಡಿಜಿಟಲ್‌ ಪುಸ್ತಕದ ಪ್ರತಿಯನ್ನು ಪರಿಚಯಿಸಲು ಮತ್ತು ಉಡುಗೊರೆಯಾಗಿ ನೀಡಲು ಗೀತಾ ಜಯಂತಿಯು ಸೂಕ್ತ ಸಂದರ್ಭವಾಗಿದೆ. ಗೀತೆಯ ಪ್ರತಿಯೊಂದು ಅಧ್ಯಾಯವನ್ನು ಸುಮಾರು 8-10 ಸೆಕೆಂಡುಗಳಲ್ಲಿ ಓದಬಹುದು. ಎಲ್ಲಾ 18 ಅಧ್ಯಾಯಗಳ ಪ್ರಮುಖ ಪಾಠಗಳನ್ನು ಕೇವಲ 3 ನಿಮಿಷಗಳಲ್ಲಿ ಕಲಿಯಬಹುದು. ಪ್ರತಿ ಅಧ್ಯಾಯದ ಸಾರಾಂಶವನ್ನು ವಿದ್ವಾಂಸರು ಮೌಲ್ಯೀಕರಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘ನಾವು ನಮ್ಮ ಉದ್ದೇಶಕ್ಕೆ ನಿಷ್ಠರಾಗಿರಲು ಬಯಸುತ್ತೇವೆ. ನಮ್ಮ ಮುಂದಿನ ಪೀಳಿಗೆಗಳು ನಮ್ಮ ಸನಾತನ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕೆಂದು ನಾವು ಬಯಸುತ್ತೇವೆ. ನಮ್ಮ ಶ್ರೀಮಂತ ಪರಂಪರೆಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅಧ್ಯಯನ ಮಾಡಲು ಅವರಿಗೆ ಅನುವಾಗುವಂತೆ ನಾವು ಈ ಪುಸ್ತಕವನ್ನು ಸಿದ್ಧಪಡಿಸಿದ್ದೇವೆ’ ಎಂದು ಶ್ರೀ ರಂಗ ಅಭಿಪ್ರಾಯಪಟ್ಟರು.

ಪುಸ್ತಕದ ಕಥೆಯನ್ನು ವಿವರಿಸಲು ತಂಜೋರ್, ಕಲಾಂಕರಿ, ಪಿಚ್ವಾಯಿ, ಕೇರಳ ಮೂರಲ್, ಮಧುಬನಿ, ಮಿಥಿಲಾ, ರಾಜಸ್ಥಾನಿ ಮಿನಿಯೇಚರ್, ಕೈಘಾಟ್ ಮತ್ತು ಪಾಧ್ ಸೇರಿದಂತೆ 10 ವಿಭಿನ್ನ ಶಾಸ್ತ್ರೀಯ ಭಾರತೀಯ ಕಲಾ ಪ್ರಕಾರಗಳನ್ನು ಬಳಸಲಾಗಿದೆ. ಸಾಂಪ್ರದಾಯಿಕವಾಗಿ ಶ್ರೀಕೃಷ್ಣನನ್ನು ವಿವಿಧ ರೀತಿಯಲ್ಲಿ ಚಿತ್ರಿಸಲು ಈ ಕಲಾ ಪ್ರಕಾರಗಳನ್ನು ಬಳಸಲಾಗುತ್ತದೆ. ಈ ವೈವಿಧ್ಯಮಯ ನಿರೂಪಣೆಯು ಗೀತೆಯನ್ನು ದೃಷ್ಟಿಗೋಚರವಾಗಿ ಆಕರ್ಷಿಸಲು ಮತ್ತು ಆಧ್ಯಾತ್ಮಿಕವಾಗಿ ಶ್ರೀಮಂತಗೊಳಿಸಲು ಸಹಾಯ ಮಾಡುತ್ತದೆ.

ಈ ಡಿಜಿಟಲ್‌ ಪುಸ್ತಕವನ್ನು ಡೌನ್‌ಲೋಡ್ ಮಾಡಿ ಮತ್ತು ಹಂಚಿಕೊಳ್ಳಿ. ಪುಸ್ತಕವನ್ನು 8 ಭಾರತೀಯ ಭಾಷೆಗಳಲ್ಲಿ ಮತ್ತು 6 ವಿದೇಶಿ ಭಾಷೆಗಳಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಲು https://l.cycle.in/gita ವೆಬ್‌ಸೈಟ್‌ಗೆ ಭೇಟಿ ಕೊಡಿ.