ಪಿರಿಯಾಪಟ್ಟಣ ತಾಲ್ಲೂಕಿನ  ಎಲ್ಲಾ ಪತ್ರಕರ್ತರಿಗು  ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ಮತ್ತು ಪತ್ರಿಕಾ ವಿತರಕರಿಗೆ ಇ-ಶ್ರಮದಾನ್ ಕಾರ್ಡ್ ಕೊಡಿಸುವುದುಕ್ಕೆ ಒದಗುವ ಖರ್ಚುನ್ನು  ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವತಿಯಿಂದ ಭರಿಸಿ ಕೊಡಲಾಗುವುದು ಎಂದು ನೂತನ ಕಸಾಪ ತಾಲೂಕು ಅಧ್ಯಕ್ಷ  ನವೀನ್‌ಕುಮಾರ್ ತಿಳಿಸಿದರು.  

ಪಿರಿಯಾಪಟ್ಟಣದ ಪತ್ರಿಕಾ ವಿತರಕರ ಸಂಘದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ತಾಲೂಕಿನಲ್ಲಿ ಕಸಾಪ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದ್ದು ಅನೇಕ ಸವಾಲುಗಳು ಮುಂದಿದೆ ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣ ಮಾಡುವುದು, ರಸ್ತೆ ವೃತ್ತಗಳಿಗೆ ನಾಮಕರಣ ಮಾಡುವುದರ ಜೊತೆಗೆ ಮೊದಲಿಗೆ ಆಸಕ್ತರೆಲ್ಲರಿಗೂ ಕಸಾಪ ಸದಸ್ಯತ್ವ ಮಾಡಿಸುವ ಕೆಲಸ ಮಾಡಲಾಗುವುದು, ಇದೇ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಕಸಾಪವತಿಯಿಂದ ಪತ್ರಿಕಾ ವಿತರಕರಿಗೆ ಇ-ಶ್ರಮದಾನ್ ಕಾರ್ಡ್ ಖರ್ಚುವೆಚ್ಚವನ್ನು ಭರಿಸುವ ಕೆಲಸ ಮಾಡಲಾಗುವುದು ತಿಳಿಸಿ, ಎಲ್ಲಾ ಕಸಾಪ ಕಾರ್ಯಕ್ರಮಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.  ಕಾರ್ಯದರ್ಶಿ ಪ್ರಸನ್ನ ಮಾತನಾಡಿ ತಾಲೂಕಿನಲ್ಲಿ ಪತ್ರಿಕಾ ವಿತರಕರು ವರದಿಗಾರರಾಗಿ ಸೇವೆಸಲ್ಲಿಸಿದ ನವೀನ್‌ಕುಮಾರ್‌ಗೆ ಕಸಾಪ ಅಧ್ಯಕ್ಷ ಸ್ಥಾನ ದೊರಕಿರುವುದು ಎಲ್ಲರಿಗೂ ಸಂತೋಷ ವಿಚಾರವಾಗಿದೆ.

ಕನ್ನಡ ಸಾಹಿತ್ಯಪರಿಷತ್ತು ಮತ್ತಷ್ಟು ಉತ್ತಮ ಕೆಲಸ ಮಾಡುವಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಮುಂದಿನ ದಿನಗಳಲ್ಲಿ ಪತ್ರಿಕಾ ವಿತರಕರ ಸಂಘವನ್ನು ತಾಲೂಕಿನಾದ್ಯಂತ ಸಂಘಟನೆ ಮಾಡಿ ಅಗತ್ಯ ಸವಲತ್ತುಗಳನ್ನು ನೀಡಲಾಗುವುದು ಎಂದು ತಿಳಿಸಿದರು. ತಾಲೂಕು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಕೆ.ಆರ್.ಮಹೇಶ್ ಮಾತನಾಡಿ ಪತ್ರಿಕಾ ರಂಗದಲ್ಲಿ ಸೇವೆಸಲ್ಲಿಸಿದ ನವೀನ್‌ಕುಮಾರ್ ಕಸಾಪದಲ್ಲಿ ಉನ್ನತ ಹುದ್ದೆ ಅಲಂಕರಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಘತಿಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಕೆಲಸ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಬೇಕಿದೆ, ಪತ್ರಿಕಾ ವಿತರಕರ ಸಂಘದ ಮೂಲಕ ತಾಲೂಕಿನಾದ್ಯಂತ ಇರುವ ಪತ್ರಿಕಾ ವಿತರಕರನ್ನು ಗುರುತಿಸಿ ಸದಸ್ಯತ್ವ ನೀಡಿ ಅವರಿಗೆ ಅಗತ್ಯ ಸೌಲಭ್ಯಗಳ ಜೊತೆಗೆ ಎಲ್ಲಾ ರೀತಿಯ  ಸಹಕಾರ ಸಹಾಯಾಸ್ತವನ್ನು ಸಂಘದ ಮೂಲಕ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನೂತನ ಕಸಾಪ ಅಧ್ಯಕ್ಷ ನವೀನ್‌ಕುಮಾರ್‌ರನ್ನು ಸನ್ಮಾನಿಸಲಾಯಿತು, ಕಾರ್ಯಕ್ರಮದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ರವಿಚಂದ್ರ, ಗ್ರಾ.ಪಂ.ಸದಸ್ಯ ಹರೀಶ್, ಪುರಸಭಾ ಸದಸ್ಯ ಶಿವರಾಮೇಗೌಡ,ಪತ್ರಿಕಾ ವಿತರಕರ ಸಂಘದ ಖಜಾಂಚಿ .ಕೆ ಪಿ ,ವೆಂಕಟೇಶ್,  ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ದೇವೇಗೌಡ, ಉಪಾಧ್ಯಕ್ಷ ತಮ್ಮಣ್ಣೇಗೌಡ, ಸದಸ್ಯರಾದ ಪವನ್, ಮುಕುಂದ, ಸದಾಶಿವ, ಸುಬ್ರಹ್ಮಣ್ಯ, ಲೋಕೇಶ್, ಮಂಜುನಾಥ್,, ಹರೀಶ್,ನವೀನ್, ಗೋವಿಂದರಾಜು, ಸೇರಿದಂತೆ ಮತ್ತಿತರರು ಹಾಜರಿದ್ದರು.