ಸರಗೂರು: ಕರ್ನಾಟಕ ಭೀಮ ಸೇನೆ ಮೈಸೂರು ಜಿಲ್ಲೆ ಅಧ್ಯಕ್ಷರಾಗಿ ಅಶೋಕ್‌ಕುಮಾರ್, ಉಪಾಧ್ಯಕ್ಷರಾಗಿ ಮಂಜು ಮಾಗುಡಿಲು ನೇಮಕಗೊಂಡಿದ್ದಾರೆ.
ಸೇನೆಯ ಗೌರವಾಧ್ಯಕ್ಷರಾಗಿ ಮುರುಡಗಳ್ಳಿ ಮಹದೇವು, ಎಚ್.ಡಿ.ಕೋಟೆ ತಾಲೂಕು ಅಧ್ಯಕ್ಷರಾಗಿ ಪ್ರಕಾಶ್‌ಬುದ್ಧ, ಉಪಾಧ್ಯಕ್ಷರಾಗಿ ಮೂರ್ತಿ, ಸರಗೂರು ತಾಲೂಕು ಅಧ್ಯಕ್ಷರಾಗಿ ಮಹೇಂದ್ರ, ಉಪಾಧ್ಯಕ್ಷರಾಗಿ ಲಂಕೆ ಶಿವರಾಜು ಅವರನ್ನು ಸೇನೆಯ ರಾಜ್ಯಾಧ್ಯಕ್ಷ ಶಂಕರ್ ರಾಮಲಿಂಗಯ್ಯ ನೇಮಕ ಮಾಡಿದ್ದಾರೆ ಎಂದು ಉಪಾಧ್ಯಕ್ಷರಾಗಿ ಮಂಜು ಮಾಗುಡಿಲು ತಿಳಿಸಿದ್ದಾರೆ.
ಇದೇ ಸಂದರ್ಭ ಮಾತನಾಡಿರುವ ಜಿಲ್ಲೆ ಅಧ್ಯಕ್ಷ ಅಶೋಕ್‌ಕುಮಾರ್ ಉಪಾಧ್ಯಕ್ಷ ಮಂಜು ಮಾಗುಡಿಲು ಅವರು, ನಮ್ಮನ್ನು ಜಿಲ್ಲೆ ಸೇನೆಗೆ ಪದಾಧಿಕಾರಿಗಳಾಗಿ ನೇಮಕ ಮಾಡಿರುವುದು ತುಂಬಾ ಸಂತಸದ ವಿಚಾರ. ರಾಜ್ಯಾಧ್ಯಕ್ಷರ ಮಾತಿನಂತೆ ನಡೆದುಕೊಂಡು ಸಂಘದ ಏಳಿಗೆಗೆ ದುಡಿಯಲು ಶ್ರಮಿಸುತ್ತೇವೆ. ಇದರೊಂದಿಗೆ ಎಲ್ಲ ಕಡೆ ಭೀಮ ಸೇನೆಯಿಂದ ಅಂಬೇಡ್ಕರ್ ಅವರ ಆದರ್ಶಗಳನ್ನು ಉಳಿಸಿ, ಬೆಳೆಸುವುದರೊಂದಿಗೆ ಸಂವಿಧಾನ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತೇವೆ. ಇದಕ್ಕೆ ನಾವು ಸದಾ ಬದ್ಧರಾಗಿರುತ್ತೇವೆ ಎಂದು ತಿಳಿಸಿದ್ದಾರೆ.

ರಾಜ್ಯಾಧ್ಯಕ್ಷರಾದ ಶಂಕರ್ ರಾಮಲಿಂಗಯ್ಯ ಅವರಿಗೆ ಚಿರಋಣಿಯಾಗಿದ್ದು, ರಾಜ್ಯದೆಲ್ಲೆಡೆ ಇವರು ತುಂಬಾ ಹೆಸರು ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಡೆಯಲು ಮುಂದಾಗುತ್ತೇವೆ. ಶಂಕರ್ ಸರ್ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಸಂವಿಧಾನದ ಬಗ್ಗೆ ಯಾರೇ ಅಪಸ್ವರ ಎತ್ತಿದ್ದರೂ ಅವರ ವಿರುದ್ಧ ನಿರಂತರವಾಗಿ ಹೋರಾಟ ಮಾಡಲು ಮುಂದಾಗುತ್ತೇವೆ. ಇದರೊಂದಿಗೆ ಸಂವಿಧಾನದ ಆಶಯದಂತೆ ಶೋಷಿತರು, ದಲಿತರು, ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಶಕ್ತಿಮೀರಿ ಶ್ರಮಿಸುತ್ತೇವೆ ಎಂದು ಅವರು ಹೇಳಿದ್ದಾರೆ