ಗ್ಯಾಸ್ ದರ ಏರಿಕೆ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಖಂಡನೆ

ಕೇಂದ್ರ ಸರ್ಕಾರವು ಪದೇ ಪದೇ ಗ್ಯಾಸ್ ಸಿಲಿಂಡರ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಸುತ್ತಿರುವುದನ್ನು ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ

2 ದಿನದ ಹಿಂದೆ ಗ್ಯಾಸ್ ಸಿಲಿಂಡರ್ ದರವನ್ನು 50 ರೂ ಏರಿಸಲಾಗಿದೆ 2ತಿಂಗಳಲ್ಲಿ 100 ರೂ ಏರಿಸಲಾಗಿದೆ ಸಬ್ಸಿಡಿ ಹಣ ಬ್ಯಾಂಕ್ ಖಾತೆಗೆ ಜಮಾ ಮಾಡುವುದನ್ನು ನಿಲ್ಲಿಸಲಾಗಿದೆ.ಪೆಟ್ರೋಲ್ ಡೀಸೆಲ್ ದರಗಳು ದಿನಾಲೂ ಏರಿಕೆ ಕಂಡು ವಿಶ್ವದಲ್ಲೇ ಅತಿ ಹೆಚ್ಚು ಬೆಲೆಗೆ ಭಾರತದಲ್ಲಿ ಮಾರಾಟವಾಗುತ್ತಿದೆ.ಕೇಂದ್ರ ಸರ್ಕಾರವೇ ಜನರ ಪಾಲಿಗೆ ಲೂಟಿಕೋರರ ಸರ್ಕಾರವಾಗಿದ್ದು .ಇದರಿಂದ ಸಾಮಾನ್ಯ ಜನತೆ ರೈತರು ಕಾರ್ಮಿಕರು ಕೂಲಿಕಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಈ ಕೂಡಲೇ ಗ್ಯಾಸ್ ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕಡಿಮೆ ಮಾಡಬೇಕು ಇಲ್ಲವಾದಲ್ಲಿ ಕೇಂದ್ರ ಸರ್ಕಾರ ಜನ ವಿರೋಧಿ ನೀತಿ ಖಂಡಿಸಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ

By admin