ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ದಿನಾಂಕ : ೧೯-೦೨-೨೦೨೨ ರಂದು ಶನಿವಾರ ಆಯೋಜಿಸಲಾಗಿದ್ದ ಒಂದು ದಿನದ ಬಹುಶಿಸ್ತೀಯ ರಾಷ್ಟ್ರೀಯ ವೆಬನಾರ್ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವು   ಕುಲಪತಿಗಳ ಒಳಾಂಗಣ ಸಭಾ ಕೊಠಡಿಯಲ್ಲಿ ಆನ್‌ಲೈನ್‌ನಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಪ್ರಾರಂಭಿಸಲಾಯಿತು.

ಕಾರ್ಯಕ್ರಮದ ಸ್ವಾಗತವನ್ನು ಡಾ.ಆರ್.ಹೆಚ್.ಪವಿತ್ರ ನೆರವೇರಿಸಿದರು. ಅಧ್ಯಕ್ಷತೆಯನ್ನು ಕರಾಮುವಿಯ ಕುಲಪತಿಗಳಾದ ಪ್ರೊ.ಎಸ್.ವಿದ್ಯಾಶಂಕರ್‌ರವರು ಆನ್‌ಲೈನ್‌ನಲ್ಲಿ ವಹಿಸಿದ್ದರು.ಪ್ರೊ.ದಯಾನಂದಅಗ್ಸರ್, ಮಾನ್ಯ ಕುಲಪತಿಗಳು, ಗುಲ್ಬರ್ಗಾ ವಿಶ್ವವಿದ್ಯಾನಿಲಯ, ಕಲ್ಬುರ್ಗಿಇವರುಉದ್ಘಾಟನಾ ಭಾಷಣವನ್ನು ಮಾಡಿದರು. ಸಾಮಾಜಿಕ-ಆರ್ಥಿಕ ಸಮಸ್ಯೆಗಳು ಮತ್ತು ಸವಾಲುಗಳು-ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ತಂತ್ರಗಳು ಬಗ್ಗೆ ವಿವರಿಸಿದರು.

ಪ್ರೊ.ಕೆ.ಶಿವಚಿತ್ತಪ್ಪ, ಮಾನ್ಯ ಕುಲಸಚಿವರು, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಇವರು ಮುಖ್ಯ ಭಾಷಣ ಮಾಡಿದರು. ಸಾಮಾಜಿಕ-ಆರ್ಥಿಕ ಸಮಸ್ಯೆಗಳು ಮತ್ತು ಸವಾಲುಗಳು-ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ತಂತ್ರಗಳು ಬಗ್ಗೆ ವಿಸ್ತಾರವಾಗಿ ತಿಳಿಸಿದರು.

ಅಧ್ಯಕ್ಷೀಯ ಭಾಷಣವನ್ನು ಕರಾಮುವಿ ಕುಲಸಚಿವರಾದ ಪ್ರೊ.ಆರ್.ರಾಜಣ್ಣ ಮಾಡಿದರು. ಕುಲಪತಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಶಾಸನಬದ್ಧ ಅಧಿಕಾರಿಗಳು ಪುಸ್ತಕ ಬಿಡುಗಡೆ ಮಾಡಿದರು.

ಕಾರ್‍ಯಕ್ರಮದಲ್ಲಿ ಹಣಕಾಸು ಅಧಿಕಾರಿಗಳಾದ ಖಾದರ್ ಪಾಷ, ಡೀನ್(ಶೈಕ್ಷಣಿಕ)-ಪ್ರೊ.ಕಾಂಬ್ಳೆಅಶೋಕ್, ಡೀನ್(ಅಧ್ಯಯನಕೇಂದ್ರ)-ಪ್ರೊ.ಷಣ್ಮುಖ, ಡಾ.ಶಿವಕುಮಾರಸ್ವಾಮಿ, ಡಾ.ಆರ್.ಹೆಚ್.ಪವಿತ್ರ, ಸಂಘಟನಾ ಕಾರ್ಯದರ್ಶಿ-ವೆಬನಾರ್ ಹಾಗೂ ಅಧ್ಯಕ್ಷರು, ಅರ್ಥಶಾಸ್ತ್ರಅಧ್ಯಯನ ಮತ್ತು ಸಂಶೋಧನಾ ವಿಭಾಗ, ಹಾಗು ಬೋಧಕ-ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.