ಭಾರತೀಯ ಜನತಾ ಪಾರ್ಟಿ ವ್ಯಾಪಾರಿ ಪ್ರಕೋಷ್ಠ ವತಿಯಿಂದ ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಯನ್ನು 20 ವರ್ಷಗಳಿಂದ ಬೀದಿ ಬದಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿರುವ ಬೀದಿ ಬದಿ ವ್ಯಾಪಾರಸ್ಥರಿಗೆ ಗೌರವಿಸುವ ಮೂಲಕ ಆಚರಿಸಲಾಯಿತು.
ಚಾಮರಾಜಪುರಂನಲ್ಲಿರುವ ಸಚಿನ್ ರಾಜೇಂದ್ರ ಭವನ ಬಿಜೆಪಿ ಕಚೇರಿಯ ಯಲ್ಲಿ ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಆಚರಿಸಲಾಯಿತು 20 ಕ್ಕೂ ಹೆಚ್ಚು ವರ್ಷದಿಂದ ಬೀದಿ ಬದಿ ವ್ಯಾಪಾರ ಮಾಡಿಕೊಂಡು ಬರುತ್ತಿರುವ ವ್ಯಾಪಾರಸ್ಥರಿಗೆ ಗೌರವ ಸ್ವೀಕರಿಸಿದ ರಸ್ತೆ ಬದಿ ಬೀದಿ ವ್ಯಾಪಾರಿಗಳದ ಅನಂತ್ ಕುಮಾರ್ (ಹೂವಿನ ವ್ಯಾಪಾರಿ ), ನಾಗರಾಜ್ (ನಿಂಬೆಹಣ್ಣು ವ್ಯಾಪಾರಿ )
ರಾಘವೇಂದ್ರ (ಹೋಟೆಲ್ ವ್ಯಾಪಾರ ), ಭಾರತಿ (ತರಕಾರಿ ವ್ಯಾಪಾರ ), ವೆಂಕಟ್ರಮಣ (ಚುರುಮುರಿ ವ್ಯಾಪಾರ ), ಪುಟ್ಟಮ್ಮ ( ವೀಳ್ಯದೆಲೆ ವ್ಯಾಪಾರ )
ಸನ್ಮಾನಿಸಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷರಾದ ಟಿ ಎಸ್ ಶ್ರೀವತ್ಸ ಮಾತನಾಡಿ ರಸ್ತೆ ಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಆರ್ಥಿಕ ಸಹಾಯ ಮಾಡಲಾಗಿದೆ.ತಳ ಹಂತದ ಜನರ ಪರವಾಗಿ ಬಿಜೆಪಿ ಸರ್ಕಾರ ಇದೆ . ಬೀದಿ ಬದಿ ವ್ಯಾಪಾರಸ್ಥರಿಗೆ ಕೈಗೆಟುಕುವ ದರದಲ್ಲಿ 10 ಸಾವಿರದ ವರೆಗೆ ಸಾಲ ಸೌಲಭ್ಯವನ್ನು ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿಯಡಿ ನೀಡಲಾಗಿದೆ ಎಂದರು .ಪ್ರತಿದಿನದ ತಮ್ಮ ವ್ಯಾಪಾರ ವ್ಯವಹಾರಕ್ಕೆ ಬಂಡವಾಳವನ್ನು ತೊಡಗಿಸಲು ಸಾಲದ ರೂಪದಲ್ಲಿ ಖಾಸಗಿ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿ ದರಕ್ಕೆ ತೆಗೆದುಕೊಂಡು ವ್ಯಾಪಾರ ನಡೆಸಿ ಬರುವ ಅಲ್ಪಸ್ವಲ್ಪ ಲಾಭಾಂಶದಲ್ಲಿಯೆೇ ಬಡ್ಡಿಯನ್ನು ಕಟ್ಟಿಕೊಂಡು ಜೀವನವನ್ನು ನಡೆಸಬೇಕಾದ ಅನಿವಾರ್ಯತೆ ಬೀದಿಬದಿ ವ್ಯಾಪಾರಿಗಳಿಗೆ ಇತ್ತು .ಮಹಾಮಾರಿ ಕರೂನಾ ಸಂದರ್ಭದಲ್ಲಿ ಆ 1ವ್ಯಾಪಾರಕ್ಕೂ ಹೊಡೆತ ಬಿದ್ದು ,ತಮ್ಮ ಜೀವನೋಪಾಯಕ್ಕೂ ಹಣವಿಲ್ಲದೆ ,ವ್ಯಾಪಾರ ವ್ಯವಹಾರವನ್ನು ನಡೆಸಲು ಬಂಡವಾಳವಿಲ್ಲದೆ ಪರಿತಪಿಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳ ಕಷ್ಟವನ್ನು ಗಮನದಲ್ಲಿಟ್ಟುಕೊಂಡು .ಪ್ರಧಾನ ಮಂತ್ರಿಗಳು ಆತ್ಮ ನಿರ್ಭರ್ ಭರತ್ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಿಯೂ ಸಾಲದಿಂದ ಮುಕ್ತನಾಗಿ ಸ್ವಂತ ಬಂಡವಾಳದಿಂದ ವ್ಯಾಪಾರ ವ್ಯವಹಾರವನ್ನು ವೃದ್ಧಿಸಿಕೊಳ್ಳಬೇಕು ಎಂಬ ಉದ್ದೇಶದಿಂದ 10.000ರೂ ಗಳ ಬಡ್ಡಿ ರಹಿತ ಬಂಡವಾಳ ರೂಪದ ಸಾಲ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ ಸಾಕಷ್ಟು ಮಂದಿ ಅದರ ಸದುಪಯೋಗವನ್ನು ಪಡೆದು ಕೊಂಡಿದ್ದಾರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸಹಾಯಕ್ಕಾಗಿ ಸಹಾಯವಾಣಿ ಪಕ್ಷದ ಕಚೇರಿಯಲ್ಲಿ ಪ್ರಾರಂಭವಾಗುವುದು ಅದರಲ್ಲಿ ಸಣ್ಣ ಸಣ್ಣವಿಷಯಗಳನ್ನು ಪಕ್ಷದ ಕಚೇರಿಯಲ್ಲಿ ಬಗೆಹರಿಸವ ಮೂಲಕ ಸಾರ್ವಜನಿಕರ ಸ್ನೇಹಿ ಜನತಾ ಪಾರ್ಟಿ ಕಚೇರಿ ಆಗಬೇಕು ಎನ್ನುವ ನಿಟ್ಟಿನಲ್ಲಿಜನಸ್ನೇಹಿ ಭಾರತೀಯ ಜನತಾ ಪಾರ್ಟಿ ಸಾರ್ವಜನಿಕರಿಗೆ ಪ್ರತಿ 1ಸಣ್ಣ ಸಣ್ಣ ವಿಚಾರವನ್ನು ಬಗೆಹರಿಸಲು ಮುಂದಾಗುತ್ತೇವೆ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಪ್ರಕೋಷ್ಠ ಗಳಿಗೂ ಮಾದರಿಯಾಗಿರುವ ವ್ಯಾಪಾರ ಪ್ರಕೋಷ್ಠ ಎಂದರು.
ಬಿಜೆಪಿ ನಗರಾಧ್ಯಕ್ಷರಾದ ಟಿಎಸ್ ಶ್ರೀವತ್ಸ ,ವ್ಯಾಪಾರಿ ಪ್ರಕೋಷ್ಟ ಸಂಚಾಲಕರುಗಳಾದ ರಾ. ಪರಮೇಶ್ ಗೌಡ, ಮಹಾನಗರ ಪಾಲಿಕೆ ಸದಸ್ಯರಾದ ವೇದಾವತಿ , ಪ್ರಧಾನ ಕಾರ್ಯದರ್ಶಿ ವಾಣೀಶ್,ಶ್ರೀನಿವಾಸ್, ಪ್ರದೀಪ್, ಸ್ಟೀಫನ್ ಸುಜೀತ್,ಸಿಂಧೇ,ಗೋಕುಲ್ ಗೋವರ್ಧನ, ವ್ಯಾಪಾರಿ ಪ್ರಕೋಷ್ಟ ಸಂಚಾಲಕರುಗಳಾದ ,ಸಹ ಸಂಚಾಲಕರು ಸೋಮಶೇಖರ್ ,ಸದಸ್ಯರಾದ ಅನಂತರಾಮ, ಶ್ಅನಿತಾ , ಸುರೇಂದ್ರ ,ಲೋಹಿತ್ ,ಶರವಣ ,ಕೃಷ್ಣ ,ಶಿವು ಹಾಗೂ ಇನ್ನಿತರರು