ಪಾಂಡವಪುರ: ಎಕ್ಸ್‌ಫೈರಿಡೇಟ್ ಮುಗಿದು ಹಾಳಾಗುವ ಭಯಕ್ಕೆ ವ್ಯಾಕ್ಸಿನ್ ವಿದೇಶಗಳಿಗೆ ನೀಡಲಾಯಿತು ವಿದೇಶಗಳಿಗೆ ವ್ಯಾಕ್ಸಿನ್ ನೀಡಿದ್ದರಲ್ಲಿ ತಪ್ಪೇನಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಪ್ರಶ್ನಿಸಿದ್ದಾರೆ.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಹಾಗೂ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿ ಅವರು ಮಾತನಾಡಿ, ಈಗಿನ ಪರಿಸ್ಥಿತಿ ಇನ್ನೊಂದು ತಿಂಗಳಲ್ಲಿ ಇರುವುದಿಲ್ಲ. ಆಕ್ಸಿಜನ್ ಕೊರತೆಯಿಂದ ೧೫೦ ಬೆಡ್‌ಗಳು ಬಳಕೆಯಾಗಿರಲಿಲ್ಲ. ಈಗ ಆಕ್ಸಿಜನ್ ಕೊರತೆಯಿಲ್ಲ. ಜನರ ಆರೋಗ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲು ಸಿದ್ದವಿದೆ.
ಒಂದು ವ್ಯಾಕ್ಸಿನ್ ಬಾಟಲ್ ತೆರೆದರೆ ೧೦ ಡೋಸ್ ಕೊಡಬೇಕು. ಆದರೆ ವಿರೋಧ ಪಕ್ಷದವರು ನಡೆಸಿದ ಅಪಪ್ರಚಾರದಿಂದ ಜನ ಲಸಿಕೆ ಹಾಕಿಸಿಕೊಳ್ಳಲು ಹಿಂದೆ ಸರಿದರು. ಈಗ ಲಸಿಕೆ ಹಾಕುತ್ತಿಲ್ಲ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಸರ್ಕಾರ ಕೋವಿಡ್ ವಿಚಾರದಲ್ಲಿ ಜನರಿಗೆ ತ್ವರಿತವಾಗಿ ಒದಗಿಸುತ್ತಿರುವ ಸೇವೆಯನ್ನು ವಿರೋಧ ಪಕ್ಷದವರಿಗೆ ಸಹಿಸಿಕೊಳ್ಳಲು ಸಾಧ್ಯವಾಗದೆ ಅಪಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಹಣದ ಕೊರತೆಯಾಗಲೀ, ಆಕ್ಸಿಜನ್ ಕೊರತೆಯಾಗಿಲ್ಲ ಇಲ್ಲ ಎಂದರು. ಇದಕ್ಕೂ ಮೊದಲು ತಾಲೂಕು ಅಧಿಕಾರಿಗಳಿಂದ ಕೊರೋನಾ ಮತ್ತು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಉಪವಿಭಾಗಾಧಿಕಾರಿ ಬಿ.ಸಿ.ಶಿವನಂದಮೂರ್ತಿ, ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ಪ್ರೊಬೇಷನರಿ ತಹಸೀಲ್ದಾರ್ ನಯನಾ, ಟಿಎಚ್‌ಓ ಡಾ.ಸಿ.ಎ.ಅರವಿಂದ, ತಾ.ಪಂ ಇಓ ಆರ್.ಪಿ.ಮಹೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ವಿಜಯಕುಮಾರ್, ತಾಲೂಕು ಅಧ್ಯಕ್ಷ ಎಲ್.ಅಶೋಕ್, ಕಿಯೋನಿಕ್ಸ್ ನಿರ್ದೇಶಕ ಎಚ್.ಎನ್.ಮಂಜುನಾಥ್, ತಾ.ಪಂ ಸದಸ್ಯೆ ಮಂಗಳಾ ನವೀನಕುಮಾರ್, ಬಿಂಡಹಳ್ಳಿ ಉದಯ್ ಇತರರು ಇದ್ದರು.