ಅಗರಬತ್ತಿಯಿಂದ ಹಿಡಿದು ಏರೋಸ್ಪೇಸ್‌ವರೆಗೂ ಹಲವಾರು ಕ್ಷೇತ್ರಗಳಲ್ಲಿ ತನ್ನ ಸ್ಥಾಪಿತ ಉಪಸ್ಥಿತಿಯನ್ನು ಹೊಂದಿರುವ ಮೈಸೂರು ಮೂಲದ ಎನ್‌ಆರ್ ಸಮೂಹದ ಅತಿದೊಡ್ಡ ಅಗರಬತ್ತಿ ತಯಾರಕರಾದ ಸೈಕಲ್ ಪ್ಯೂರ್ ಅಗರಬತ್ತಿಯು ಓಂ ಶಾಂತಿ ನೈವೇದ್ಯ ಕಪ್ ಸಾಂಬ್ರಾಣಿಯನ್ನು ಪರಿಚಯಿಸಿದೆ. ಸಾಂಪ್ರದಾಯಿಕ ಸಾಂಬ್ರಾಣಿ ಅನುಭವದ ಸಾರವನ್ನು ಇದರಲ್ಲಿ ಅಳವಡಿಸಲಾಗಿದೆ. ನೈವೇದ್ಯ ಕಪ್ ಸಾಂಬ್ರಾಣಿ ಒಂದು ಸಿದ್ಧವಾದ ಇದ್ದಿಲು ಕಪ್ ಆಗಿದ್ದು, ಶುದ್ಧ ಸಾಂಬ್ರಾಣಿ ಪದಾರ್ಥಗಳನ್ನು ಒಳಗೊಂಡಿದೆ.
ನಮ್ಮ ಅನೇಕ ಪದ್ಧತಿಗಳು ಮತ್ತು ಆಚರಣೆಗಳಲ್ಲಿ ವೈಜ್ಞಾನಿಕ ಅಂಶಗಳು ಅಡಕವಾಗಿದ್ದು, ತಲೆಮಾರುಗಳಿಂದ ಅನುಸರಿಸಲಾಗುತ್ತಿದೆ; ಅವುಗಳ ಪ್ರಸ್ತುತತೆ ಅಗತ್ಯವಾಗಿದ್ದು, ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಅನುಸರಿಸಲು ಕಷ್ಟವಾಗಿದೆ. ಅಂತಹ ಒಂದು ಅಭ್ಯಾಸವೆಂದರೆ ನಮ್ಮ ಮನೆಗಳಲ್ಲಿ ಸಾಂಬ್ರಾಣಿಯ ಬಳಕೆ, ಇದು ಇಂದಿನ ಅವಸರದ ಕಾಲದಲ್ಲಿ ಬೇಸರದ ಮತ್ತು ಅನಾನುಕೂಲಕರ ಸಂಗತಿಯಾಗಿದೆ. ಸಾಂಬ್ರಾಣಿಯ ಮಹತ್ವ ಗೊತ್ತಿದ್ದರೂ ಅನುಸರಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ನೈವೇದ್ಯ ಕಪ್ ಸಾಂಬ್ರಾಣಿಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಬಳಸಲು ಸುಲಭವಾಗಿದೆ ಮತ್ತು ಸುಗಂಧವು ದೀರ್ಘಕಾಲದವರೆಗೆ ತಾಜಾ ಆಗಿ ಉಳಿಯುತ್ತದೆ.
ಉತ್ಪನ್ನದ ಹಿಂದಿನ ಉದ್ದೇಶದ ಬಗ್ಗೆ ಪ್ರತಿಕ್ರಿಯಿಸಿದ ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಅರ್ಜುನ್ ರಂಗಾ, “ನಮ್ಮ ಸಾಂಪ್ರದಾಯಿಕ ಅಭ್ಯಾಸಗಳು ಮತ್ತು ಪದ್ಧತಿಗಳನ್ನು ನಮ್ಮ ಮುಂದಿನ ಪೀಳಿಗೆಗೆ ಸಾಗಿಸುವುದರಲ್ಲಿ ನಾವು ಬಲವಾದ ನಂಬಿಕೆಯನ್ನು ಹೊಂದಿದ್ದೇವೆ.
ಅದರದೇ ಆದ ಅನಾನುಕೂಲತೆಯ ಕಾರಣದಿಂದಾಗಿ ನಮ್ಮ ಪ್ರಸ್ತುತ ಪೀಳಿಗೆಗೆ ಸಾಂಬ್ರಾಣಿಯ ಪ್ರಯೋಜನಗಳನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಸಾಂಪ್ರದಾಯಿಕ ಸಾಂಬ್ರಾಣಿ ಅನುಭವದ ಪ್ರಯೋಜನಗಳನ್ನು ಬಳಸಲು ಸಿದ್ಧ ರೂಪದಲ್ಲಿ ನೀಡಲು ನೈವೇದ್ಯ ಕಪ್ ಸಾಂಬ್ರಾಣಿಯನ್ನು ಪರಿಚಯಿಸಿದ್ದೇವೆ’’ ಎಂದರು.
ಉತ್ತಮ ಶಕ್ತಿ ಶುದ್ಧೀಕರಣ, ನೈವೇದ್ಯ ಕಪ್ ಸಾಂಬ್ರಾಣಿ ಸೈಕಲ್ ಪ್ಯೂರ್ ಅಗರಬತ್ತಿಯ ವಿಶಿಷ್ಟ ಕೊಡುಗೆಗಳಲ್ಲಿ ಒಂದಾಗಿದೆ. ಇದು ವಿಶಿಷ್ಟವಾದ, ಸುವಾಸನೆಯಿರುವ, ಚೈತನ್ಯದಾಯಕ ಸುಗಂಧವನ್ನು ಹೊಂದಿದೆ.