ಮೈಸೂರು, ಏ.೧೩:- ಯೋಗಾ ನರಸಿಂಹ ಸ್ವಾಮಿ ದೇವಸ್ಥಾನದ ಸಂಸ್ಥಾಪಕರಾದ ಪ್ರೊ. ಭಾಷ್ಯಂ ಸ್ವಾಮೀಜಿ ಅವರಿಗೆ ಹೊಸಕೋಟೆಯ ಕ ವಿಶ್ವವಿದ್ಯಾನಿಲಯದಿಂದ ನಾಡೋಜ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.ನಿನ್ನೆ ಹಮ್ಮಿಕೊಳ್ಳಲಾಗಿದ್ದ ನುಡಿ ಹಬ್ಬ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ .ಥಾವರ ಚಂದ್ ಗೆಹಲೋಟ್ ಅವರು ಭಾಷ್ಯಂ ಸ್ವಾಮೀಜಿ ಅವರಿಗೆ ಪ್ರಶಸ್ತಿ ಪ್ರದಾನಿಸಿದರು.ಭಾಷ್ಯಂ ಸ್ವಾಮೀಜಿ ಅವರ ಜೊತೆಗೆ ಸಾಹಿತಿಗಳಾದ ಗೊ.ರು.ಚೆನ್ನಬಸಪ್ಪ ಹಾಗೂ ಟಿ.ವಿ.ವೆಂಕಟಾಚಲಶಾಸ್ತ್ರಿ ಅವರಿಗೂ ಸಹ ನಾಡೋಜಪ್ರಶಸ್ತಿ ಪ್ರದಾನಿಸಲಾಯಿತು.ಕಾರ್ಯಕ್ರಮದಲ್ಲಿ ಹಂಪಿ ವಿವಿಯ ಕುಲಪತಿ ಪ್ರೊ.ಸುಬ್ಬಣ್ಣ ರೈ, ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿವಿ ಯ ಕುಲಪತಿ ತೇಜಸ್ವಿ ವಿ.ಕಟ್ಟಿಮನಿ, ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು