ಮೈಸೂರು: ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಎರಡು ಸಾರ್ವಜನಿಕರಿಗೆ ಮೈಸೂರು ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಆಹಾರ ಕಿಟ್‍ನ್ನು ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಶ್ರೀ ಪರಮ ಪೂಜ್ಯ ಶ್ರೀ ಭಾಷ್ಯಂ ಸ್ವಾಮೀಜಿ ಅವರು ದೇವಸ್ಥಾನಕ್ಕೆ ಜಾತಿ ಧರ್ಮ ಪಂಗಡ ಎನ್ನದೇ ಎಲ್ಲರೂ ದೇಗುಲಕ್ಕೆ ಆಗಮಿಸಿ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಿದ್ದು, ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಹಾಯ ಮಾಡಬೇಕೆಂದು ಯೋಗ ನರಸಿಂಹ ಸ್ವಾಮಿಯ ಅನುಗ್ರಹದ ಮುಖೇನ ಸರ್ಕಾರದದ ನಿಯಮಗಳಿಗೆ ಬದ್ಧವಾಗಿ ದಾನಿಗಳಾದ ವೈಟ್ ಹೌಸ್ ಕುಮಾರ್ ಉದ್ಯಮಿ ಅವರ ಸಹಾಯ ಹಸ್ತದಲ್ಲಿ ಆಹಾರದ ಕಿಟ್ ಗಳನ್ನು ವಿತರಿಸಲಾಗುತ್ತಿರುವುದಾಗಿ ಹೇಳಿದ ಅವರು ಬಾರಿ ಸುಮಾರು 2500 ಸಾರ್ವಜನಿಕರಿಗೆ ಆಹಾರ ಕಿಟ್ ನ್ನು ವಿತರಿಸಲು ನಿರ್ಧರಿಸಿರುವುದಾಗಿ ಹೇಳಿದರು.

By admin