ಲೋಕೇಶ್ ರಾಥೋಡ್ ಅಥ್ಲೆಟಿಕ್ ನ ‘ಡೆಕೆತ್ಲಾನ್’ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದ ಪದಕ ವಿಜೇತರಾಗಿದ್ದು ಮುಂದಿನ ಹಂತಕ್ಕೆ ಮೈಸೂರು ವಿ.ವಿಯಲ್ಲಿ ತಯಾರಿ ನಡೆಸುತ್ತಿದ್ದಾರೆ.”
ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ ಕುಗ್ರಾಮದಿಂದ ಬಂದಂತಹ ಕ್ರೀಡಾ ಪ್ರತಿಭೆ ಲೋಕೇಶ್ ರಾಥೋಡ್ ಈಗಾಗಲೇ ಇಪ್ಪತ್ತು ವರ್ಷ ವಯೋಮಿತಿಯೊಳಗಿನ ಅಥ್ಲೆಟಿಕ್ ನ ಡೆಕೆತ್ಲಾನ್ ಕ್ರೀಡಾ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದ ಚಿನ್ನದ ಪದಕ ವಿಜೇತರಾಗಿದ್ದಾರೆ. ಇಪ್ಪತ್ತು ವರ್ಷದ ಮೇಲ್ಪಟ್ಟ ವಯೋಮಿತಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಈ ಅಥ್ಲೆಟಿಕ್ ನ ಡೆಕೆತ್ಲಾನ್ ಆಟವನ್ನು ಆಡಲು ಮೈಸೂರಿಗೆ ಬಂದು ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಅಥ್ಲೆಟಿಕ್ ತರಬೇತುದಾರರ ಮಾರ್ಗದರ್ಶನದಲ್ಲಿ ತಯಾರಿ ನಡೆಸುತ್ತಿದ್ದಾರೆ. ಮೊದಲು ಬೆಂಗಳೂರಿನ ಕ್ರೀಡಾ ವಸತಿ ನಿಲಯದಲ್ಲಿ ಇದ್ದುಕೊಂಡು ಸಾಧನೆ ಮಾಡಿರುವ ಲೋಕೇಶ್ ರಾಥೋಡ್ ವ್ಯಾಸಂಗದ ದೃಷ್ಟಿಯಿಂದ ಸೋಮಾನಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯಲು ಬಂದಿದ್ದಾರೆ. ಜೊತೆಗೆ ತಮ್ಮ ಕ್ರೀಡಾ ಸಾಧನೆಯ ಕನಸ್ಸನ್ನು ನನಸಾಗಿಸಲು ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದಲ್ಲಿ ನಿತ್ಯ ತರಬೇತಿ ನಡೆಸುತ್ತಿದ್ದಾರೆ. ಡೆಕೆತ್ಲಾನ್ ಆಟದ ವಿಶೇಷ ಎಂದರೆ ಈ ಆಟದಲ್ಲಿ ಹತ್ತು ಬಗೆಯ ಆಟಗಳನ್ನು ಒಬ್ಬ ಕ್ರೀಡಾಪಟು ಆಟ ಆಡಬೇಕಾಗಿರುತ್ತದೆ. ಆ ಹತ್ತು ಬಗೆಯ ಆಟಗಳೆಂದರೆ ಗುಂಡು ಎಸೆತ, ತಟ್ಟೆ ಎಸೆತ, ಎತ್ತರ ಜಿಗಿತ, ಉದ್ದ ಜಿಗಿತ, ಜಾವ್ಲೀನ್ ಎಸೆತ, 100 ಮತ್ತು 400 ಮೀಟರ್ ಓಟ , 110ಮೀ ಹರ್ಡ್ ಲೆಸ್, ಹೆಪೆತ್ಲಾನ್, ಪೋಲ್ ವ್ಯಾಲ್ಟ್, ಹರ್ಡ ಲಿಂಗ್, ಹೀಗೆ ಈ ಹತ್ತು ಬಗೆಯ ಆಟಗಳಲ್ಲಿ ಉತ್ತಮ ತರಬೇತಿ ಪಡೆದು ಈ ಎಲ್ಲಾ ವಿಭಾಗಗಳಲ್ಲಿ ಕ್ರೀಡಾಪಟು ಗಳಿಸಿದ ಅಂಕಶ್ರೇಷ್ಟದ ಆಧಾರದ ಮೇಲೆ ಪದಕ ವಿತರಣೆಯಾಗುತ್ತದೆ. ಈ ರೀತಿಯಾಗಿ ತರಬೇತಿ ಪಡೆದು ಯಶಸ್ವಿ ಕಾಣಲು ಹೊರಟಿರುವ ಲೋಕೇಶ್ ರಾಥೋಡ್ ಬಡಕುಟುಂಬದಿಂದ ಬಂದಿದ್ದು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದಲ್ಲಿ ತರಬೇತಿ ಪಡೆಯುತ್ತಿರುವ ಇವರಿಗೆ ಸಹಾಯ ಮತ್ತು ಪ್ರೋತ್ಸಾಹದ ನಿಟ್ಟಿನಲ್ಲಿ ಶ್ರೀಮತಿ ಗೀತಾ ಸಹಾಯಕ ನಿರ್ದೇಶಕರು, ದೈಹಿಕ ಶಿಕ್ಷಣ ವಿಭಾಗ ಮೈಸೂರು ವಿ.ವಿ. ಇವರು ಉಚಿತ ಸೈಕಲ್ ನ್ನು ತರಬೇತಿಗೆ ಉಪಯೋಗವಾಗಲಿ ಎಂದು ನೀಡಿದ್ದಾರೆ. ಹಾಗೂ ರವಿ ಟಿ.ಸ್ ಸಹಾಯಕ ನಿರ್ದೇಶಕರು ದೈಹಿಕ ಶಿಕ್ಷಣ ವಿಭಾಗ ಮೈಸೂರು ವಿ.ವಿ. ಇವರು ಲೋಕೇಶ್ ಅವರ ದೈಹಿಕ ಸಧೃಢತೆಗಾಗಿ ಪೋಷಕಾಂಶ ಆಹಾರವನ್ನು ಪ್ರತಿದಿನ ನೀಡುತ್ತಿದ್ದಾರೆ. ಜೊತೆಗೆ ಅವರಿಗೆ ದೈಹಿಕ ಧಾರ್ಡ್ಯ ತರಬೇತಿಯನ್ನು ಸಹಾಯಕ ನಿರ್ದೇಶಕರಾದ ಕಾರ್ತಿಕ್ ಅವರು ನೀಡುತ್ತಿದ್ದಾರೆ. ಅಥ್ಲೆಟಿಕ್ ತರಬೇತಿಯನ್ನು ಪುನೀತ್ ಎಂ,ಅಥ್ಲೆಟಿಕ್ ಕೋಚ್ ಸಹಾಯಕ ನಿರ್ದೇಶಕರು ದೈಹಿಕ ಶಿಕ್ಷಣ ವಿಭಾಗ ಮೈಸೂರು. ವಿ.ವಿ. ಇವರು ನೀಡುತ್ತಿದ್ದಾರೆ.
(ರವಿ.ಟಿ.ಎಸ್ ಅಭಿಪ್ರಾಯ)
ಲೋಕೇಶ್ ರಾಥೋಡ್ ಮೈಸೂರು ವಿ.ವಿ ಗೆ ಕ್ರೀಡೆ ಮತ್ತು ಉತ್ತಮ ವ್ಯಾಸಂಗಕ್ಕಾಗಿ ಬಂದಿದ್ದಾರೆ. ಅವರು ಉತ್ತಮ ಕ್ರೀಡಾತರಬೇತಿಯನ್ನು ಈ ಮೊದಲೇ ಹೊಂದಿದ್ದು ಮತ್ತಷ್ಟು ಶ್ರಮಪಡುತ್ತಿದ್ದಾರೆ.ಮುಂದೆ ಆಡಲಿರುವ ಕ್ರೀಡೆಯಲ್ಲಿ ಖಂಡಿತವಾಗಿ ಪದಕ ವಿಜೇತರಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಗೌರವ ತಂದುಕೊಡುತ್ತಾರೆ ಎಂಬ ನಂಬಿಕೆ ಅವರ ಶ್ರಮ ಮತ್ತು ಕ್ರೀಡಾ ಸಾಧನೆಯಿಂದ ನಮಗೆಲ್ಲರಿಗೂ ಧೃಡವಾಗಿದೆ. ಇಂತಹ ಪ್ರತಿಭೆಗಳನ್ನು ಗುರುತಿಸಿ ಒಳ್ಳೆಯ ಹಂತಕ್ಕೆ ಕೊಂಡೊಯ್ಯುವುದು ಪ್ರತಿಯೊಬ್ಬ ಜವಬ್ದಾರಿಯುತ ವ್ಯಕ್ತಿಯ ಕರ್ತವ್ಯ. ನಾವುಗಳು ಈ ನಿಟ್ಟಿನಲ್ಲಿ ಸಹಕರಿಸುತ್ತಿದ್ದೇವೆ. ಸರ್ಕಾರವು ಕೂಡ ಇಂತಹ ಕ್ರೀಡಾಪಟುಗಳುಗಳಿಗೆ ಮತ್ತಷ್ಟು ಪ್ರೋತ್ಸಾಹದ ದೃಷ್ಟಿಯಲ್ಲಿ ಸರ್ಕಾರಿ ಹುದ್ದೆಗಳನ್ನು ನೀಡಿ ಬದುಕಿಗೆ ಒಂದು ಉತ್ತಮ ದಾರಿಮಾಡಿಕೊಡಬೇಕೆಂದು ರವಿ.ಟಿ.ಎಸ್ ಸಹಾಯಕ ನಿರ್ದೇಶರು ದೈಹಿಕ ಶಿಕ್ಷಣ ವಿಭಾಗ ಇವರು ಈ ಮೂಲಕ ತಿಳಿಸಿದರು.