ಮೈಸೂರಿನ ಪಶ್ಚಿಮ ಆರ್.ಟಿ.ಓ. ಅಧಿಕಾರಿಗಳ ಚಿಲ್ಲರೆ ಕೆಲಸ ಭ್ರಷ್ಟಚಾರವು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ ಸಿಬ್ಬಂದಿಗಳ ಚಿಲ್ಲರೆ ಕೆಲಸ ಹೆಚ್ಚಾಗಿದೆ. ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನ ನೊಂದಣಿ ಹಾಗೂ ವಾಹನಗಳ ವರ್ಗವಣೆ ಎಲ್.ಎಲ್.ಆರ್. ಡಿ.ಎಲ್. ಎಫ್.ಸಿ ಸೇರಿದಂತೆ ಸಾರಿಗೆ ಇಲಾಖೆಯ ಪ್ರತಿಯೊಂದು ದಾಖಲೆಯ ವಿತರಣೆ ಮತ್ತು ಅರ್ಜಿ ಸಲ್ಲಿಕೆಗೆ ದಿನ ನಿತ್ಯ ಸಾವಿರಾರು ಮಂದಿ ಬರುವ ಕಛೇರಿಯ ಸ್ಥಳವಾಗಿದ್ದು ದಿನಾಂಕ 08-02-24 ರಂದು ಬಿಲ್ ಕೌಂಟರ್ 1 ರಲ್ಲಿ ಸಾರಿಗೆ ಸಂಬಂಧ ಪಟ್ಟ ಕೆಲಸದ ಮೊತ್ತವನ್ನು ಕಟ್ಟಲು ಬಂದ ಮಹೇಶ್ ಎಂಬುವವರು ಕಾರ್ ಟ್ರಾನ್ಸ್ಫರ್ ಮಾಡಿಸಲು ಬಂದಿದ್ದ ಆರ್.ಟಿ.ಓ ನಲ್ಲಿ
ಸಂಬಂಧ ಪಟ್ಟ ದಾಖಲೆಯನ್ನು ನೀಡಿದರು. ಬಿಲ್ ಕಟ್ಟಲು ಬಂದಾಗ ಬಿಲ್’ ನ ಮೊತ್ತ 562/- ರೂ ಆಗಿದ್ದು ಸಿಬ್ಬಂದಿ 570 ಎಂದು ಕೇಳಿ ಪಡೆಯುತ್ತಾರೆ.ಎಂದು ಹೇಳುತ್ತಾ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ವಾಹನ ಸವಾರರು ಕೆಲವರು ವಿದ್ಯಾವಂತರು ರಸೀದಿ ನೋಡಿ ಚಿಲ್ಲರೆ ಕೇಳುತ್ತಾರೆ. ಕೇಳಿದರೆ ಚಿಲ್ಲರೆ ಇಲ್ಲ ಎಂದು ಹೇಳುತ್ತಾರೆ.ಇನ್ನೂ ಕೆಲವರು ಅವರು ಹೇಳಿದಷ್ಟು ಕೊಟ್ಟು ಬಿಡುತ್ತಾರೆ.ಒಂದು ಕಡೆ ಮಧ್ಯವರ್ತಿಗಳ ಮೋಸ ಇನ್ನೋಂದು ಕಡೆ ಸಾರಿಗೆ ಅಧಿಕಾರಿಗಳ ಕಛೇರಿಯ ಸಿಬ್ಬಂದಿಗಳ ವಂಚನೆ.
ಅದ್ದರಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ರಸೀದಿ ಕೂಡುವ ಸ್ಥಳದಲ್ಲಿ ಪೋಸ್ಟರ್ ಹಾಗೂ ಧ್ವನಿ ವರ್ಧಕದ ಮೂಲಕ ಮಾಹಿತಿಯನ್ನು ಸಾರ್ವಜನಿಕರಿಗೆ ಸವಾರಾರಿಗೆ ಅನೂಕೂಲ ಮಾಡಿಕೂಡಬೇಕೆಂದು ಸವಾರರ ಒತ್ತಾಯವಾಗಿದೆ.ಸುವರ್ಣ ಬೆಳಕು ಫೌಂಡೇಷನ್ ಮಹೇಶ್ ರವರು ಸಂಜೆ ಸಮಾಚಾರ್ ದಿನ ಪತ್ರಿಕೆ ಮಾಹಿತಿಯನ್ನು ಹಂಚಿಕೊಂಡರು.