ಮೈಸೂರು ೨೨, ೨೦೨೧ :- ತಮ್ಮ ಎಡಕಾಲಿನ ಹಿಮ್ಮಡಿ ಕಪ್ಪಾಗಿರುವ ತೊಂದರೆಯೊಂದಿಗೆ ೮೮ ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ (ಎಂಎಚ್‌ಎಂ) ಬಂದಿದ್ದರು. ಅವರು ಮಧುಮೇಹ ರೋಗಿಯಾಗಿದ್ದು, ಇದಕ್ಕಾಗಿ ನಿಗದಿತ ಚಿಕಿತ್ಸೆ ಪಡೆಯುತ್ತಿದ್ದರು. ಪ್ರಸ್ತುತ ಸಮಸ್ಯೆಗಾಗಿ ಅವರು ಹಲವಾರು ಔಷಧಗಳನ್ನು ಸ್ವೀಕರಿಸಿದ್ದು, ಇದರಲ್ಲಿ ಇಂಟ್ರಾವೀನಸ್ ಆಂಟಿಬಯಾಟಿಕ್ಸ್ ಸೇರಿದ್ದರೂ ಬಹಳ ಕಡಿಮೆ ಸುಧಾರಣೆ ಕಂಡುಬಂದಿತ್ತು.
ಪರೀಕ್ಷೆ ನಡೆಸಿದಾಗ ಈ ವ್ಯಕ್ತಿಗೆ ಕ್ರಿಟಿಕಲ್ ಲಿಂಬ್ ಇಷೇಮಿಯಾ(ಸಿಎಲ್‌ಐ) ಜೊತೆಗೆ ಎಡಕಾಲಿನ ಹಿಮ್ಮಡಿಯಲ್ಲಿ ಗ್ಯಾಂಗ್ರೀನ್ ಉಂಟಾಗಿರುವುದು ಕಂಡುಬಂದಿತ್ತು. ಈ ರೀತಿಯ ರೋಗಿಗಳಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಕಾಲು ಕತ್ತರಿಸಲಾಗುತ್ತದೆ. ಮೊದಲು ಕಾಲನ್ನು ಉಳಿಸಲು ಪ್ರಯತ್ನ ಕೈಗೊಳ್ಳುವುದು ಇಂತಹ ಪರಿಸ್ಥಿತಿಯಲ್ಲಿ ನಮ್ಮ ಗುರಿಯಾಗಿತ್ತು. ಬೇರೆ ಎಲ್ಲಾ ಚಿಕಿತ್ಸೆಗಳು ವಿಫಲವಾದಾಗ ಕಾಲು ಕತ್ತರಿಸುವುದು, ಕೊನೆಯ ಅನಿವಾರ್ಯ ಕ್ರಮವಾಗಿರಬೇಕು? ಎಂದು ಮೈಸೂರು ಮಣಿಪಾಲ್ ಆಸ್ಪತ್ರೆಯ ಹೃದಯ ಎದೆಭಾಗ ಮತ್ತು ರಕ್ತನಾಳಗಳ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಉಪೇಂದ್ರ ಶೆಣೈ ಅವರು ರೋಗಿಯ ವಿವರಗಳನ್ನು ನೀಡುವಾಗ ಹೇಳಿದರು
ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಮೈಸೂರು ಮಣಿಪಾಲ್ ಆಸ್ಪತ್ರೆಯ ಹೃದಯ ರೋಗಶಾಸ್ತ್ರ ಸಲಹಾತಜ್ಞರಾದ(ಕಾರ್ಡಿಯೊಲಜಿಸ್ಟ್) ಡಾ. ಸಿ.ಬಿ. ಕೇಶವಮೂರ್ತಿ ಅವರು ಮಾತನಾಡಿ, ?ರೋಗಿಯ ಕಾಲಿನ ಎಲ್ಲಾ ರಕ್ತನಾಳಗಳಲ್ಲಿ ಡಿಕ್ಯೂಸ್ ಡಿಸೀಸ್ (ರಕ್ತನಾಳಗಳು ಕಿರಿದಾಗುವ ರೋಗ) ಜೊತೆಗೆ ಹಲವಾರು ಪ್ರದೇಶಗಳಲ್ಲಿ ರಕ್ತ ಪರಿಚಲನೆಗೆ ಗಂಭೀರವಾದ ಅಡ್ಡಿ ಉಂಟಾಗಿರುವುದು ರೋಗಿಯ ಆಂಜಿಯೋಗ್ರಾಮ್ನಲ್ಲಿ ಕಂಡುಬಂದಿತ್ತು. ಕಾಲಿನ ಅಂಜಿಯೋಪ್ಲಾಸಿ ಕ್ರಮವನ್ನು ನಾವು ನಡೆಸಿದ್ದೆವು. ಈ ಕ್ರಮ ಕಾಲಿಗೆ ರಕ್ತ ಪರಿಚಲನೆಯನ್ನು ಸುಧಾರಿಸಿತ್ತು. ಆದರೆ, ಪಾದ ಮತ್ತು ಕಾಲಿನ ಬೆರಳುಗಳಿಗೆ ರಕ್ತ ಪರಿಚಲನೆಯನ್ನು ಪುನರ್ ಸ್ಥಾಪಿಸಲು ಹೆಚ್ಚುವರಿಯ ಚಿಕಿತ್ಸೆ ಅಗತ್ಯವಿತ್ತು? ಎಂದರು.
ಡಾ. ಶೆಣೈ ಮತ್ತು ಅವರ ತಂಡ ಸ್ಟೆಮ್ ಸೆಲ್ ಥೆರಪಿ(ಕಾಂಡಕೋಶ ಚಿಕಿತ್ಸೆ), ಪೆರಿಫೆರಲ್ ಆಂಜಿಯೋಪ್ಲಾಸಿ ಮಾಡುವ ನಿರ್ಧಾರವನ್ನು ಮಾಡಿದರು. ಜೊತೆಗೆ ಸ್ಟೆಮ್ ಸೆಲ್ ಇಂಜೆಕ್ಷನ್ ನೀಡಲು ನಿರ್ಧರಿಸಿತ್ತು(ಹೈಬ್ರಿಡ್ ಕ್ರಮ). ಇದು ಮೈಸೂರಿನಲ್ಲಿ ತನ್ನ ರೀತಿಯ ಮೊದಲ ಕ್ರಮವಾಗಿದೆ. ?ಸ್ಟೆಮ್ ಸೆಲ್ ಚಿಕಿತ್ಸೆಯಲ್ಲಿ ಆರೋಗ್ಯಪೂರ್ಣ ವ್ಯಕ್ತಿಗಳ ಮೂಳೆ ಕೊಬ್ಬಿನಿಂದ ಪಡೆಯಲಾದ ಸ್ಟೆಮ್ ಸೆಲ್ಗಳನ್ನು ಚುಚ್ಚುಮದ್ದಿನ ಮೂಲಕ ರೋಗಿಗೆ ನೀಡುವ ಕ್ರಮ ಸೇರಿರುತ್ತದೆ. ಈ ಸ್ಟೆಮ್ ಸೆಲ್ಗಳು ಅಗತ್ಯಕ್ಕೆ ತಕ್ಕಂತೆ ತಮ್ಮನ್ನು ತಾವು ವಿವಿಧ ಅಂಗಾಂಶಗಳಾಗಿ ಪರಿವರ್ತಿಸಿಕೊಳ್ಳುತ್ತವೆ. ಈ ಪ್ರಕರಣದಲ್ಲಿ ಸ್ಟೆಮ್ ಸೆಲ್ಗಳು ನೂತನ ರಕ್ತನಾಳಗಳ ರಚನೆಯನ್ನು ಉತ್ತೇಜಿಸುತ್ತವೆ? ಎಂದು ಡಾ. ಉಪೇಂದ್ರ ಶೆಣೈ ಅವರು ಚಿಕಿತ್ಸೆ ಕುರಿತು ವಿವರಿಸುತ್ತಾ ಹೇಳಿದರು. ?ಆಂಜಿಯೋಪ್ಲಾಸ್ಪಿ ನಡೆಸಿದ ಒಂದು ದಿನದ ನಂತರ, ನಾವು ರೋಗಿಯ ಕಾಲಿನ ಮೀನುಖಂಡ ಪ್ರದೇಶದೊಳಗೆ ಸ್ಟೆಮ್ ಸೆಲ್ಗಳನ್ನು ಚುಚ್ಚುಮದ್ದಿನ ಮೂಲಕ ನೀಡಿದ್ದೆವು. ಇದರ ಪ್ರಮಾಣ ರೋಗಿಯ ತೂಕವನ್ನು ಅವಲಂಬಿಸಿರುತ್ತದೆ. ರೋಗಿಯ ತೂಕ ೬೦ಕೆಜಿ ಒಳಗೆ ಇದ್ದರೆ, ವೈದ್ಯರು ಸುಮಾರು ೧೫೦ ದಶಲಕ್ಷ ಸ್ಟೆಮ್ ಸೆಲ್ಗಳನ್ನು ಚುಚ್ಚುಮದ್ದಿನ ಮೂಲಕ ನೀಡುತ್ತಾರೆ. ರೋಗಿಯ ತೂಕ ೬೦ಕೆಜಿಗಿಂತಲೂ ಹೆಚ್ಚಾಗಿದ್ದರೆ ಈ ಪ್ರಮಾಣ ಸುಮಾರು ೨೦೦ ದಶಲಕ್ಷದಷ್ಟಿರುತ್ತದೆ. ಈ ಪ್ರಕರಣದಲ್ಲಿ ರೋಗಿ ೪೫ ಕಿಲೋ ತೂಕದವರಾಗಿದ್ದರಿಂದ ನಾವು ಅವರ ಕಾಲಿನ ಮೀನುಖಂಡಕ್ಕೆ ೧೫೦ ದಶಲಕ್ಷ ಸ್ಟೆಮ್ ಸೆಲ್ಗಳನ್ನು ಚುಚ್ಚುಮದ್ದಿನ ಮೂಲಕ ನೀಡಲಾಗಿತ್ತು? ಎಂದು ಡಾ. ಶೆಣೈ ಅವರು ಹೇಳಿದರು.

ಈ ಸ್ಟೆಮ್ ಸೆಲ್ಗಳನ್ನು ಬಾಹ್ಯ ಸಂಸ್ಥೆಯೊಂದು ಆಸ್ಪತ್ರೆಗೆ ಪೂರೈಸಿತ್ತು. ಸ್ಟೆಮ್ ಸೆಲ್ಸ್ಗಳನ್ನು ದ್ರವ ಜಲಜನಕದಲ್ಲಿ -೧೯೬ ಡಿಗ್ರಿ ತಾಪಮಾನದಲ್ಲಿ ದಾಸ್ತಾನು ಮಾಡಲಾಗಿರುತ್ತದೆ.
ಡಾ. ಶೆಣೈ ಅವರು ಮಾತನಾಡಿ, ?ಕಾಲಿನಲ್ಲಿ ಹಲವು ಚುಚ್ಚುಮದ್ದನ್ನು ನೀಡುವ ಅವಶ್ಯಕತೆ ಇರುವ ಕಾರಣ, ಈ ಕ್ರಮವನ್ನು ಸ್ಥಳೀಯ ಅನಸ್ಥಿಷಿಯ ನೀಡುವ ಮೂಲಕ ಶಸ್ತ್ರಚಿಕಿತ್ಸೆ ನಡೆಸಿದೆವು. ಇದರಿಂದ ಶಸ್ತ್ರಕ್ರಿಯೆ ಮತ್ತು ಅದರ ಕೆಲವು ಗಂಟೆಗಳವರೆಗೆ ಅನಾನುಕೂಲದ ಭಾವನೆ ರೋಗಿಗೆ ಉಂಟಾಗುವುದನ್ನು ಈ ಕ್ರಮ ತಡೆಯುತ್ತದೆ. ಆಂಜಿಯೋಜೆನಿಸಿಸ್’ ಎಂದು ಕರೆಯಲಾಗುವ ನೂತನ ರಕ್ತನಾಳಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಸ್ಟೆಮ್ ಸೆಲ್ಸ್ಗಳನ್ನು ಪೀಡಿತ ಕಾಲಿಗೆ ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ. ಕಾಲುಗಳನ್ನು ಕತ್ತರಿಸಬೇಕಾದ ಪ್ರಮೇಯವನ್ನು ತಪ್ಪಿಸಲು ಇದು ನೆರವಾಗುತ್ತದೆ? ಎಂದರು.
ಶಸ್ತ್ರಚಿಕಿತ್ಸೆಯ ಫಲಿತಾಂಶ ತೃಪ್ತಿಕರವಾಗಿತ್ತು. ಕ್ರಮ ನಡೆಸಿದ ಮಾರನೇ ದಿನವೇ ರೋಗಿಯು ಆಸ್ಪತ್ರೆಯಿಂದ ಮನೆಗೆ ಹಿಂತಿರುಗಿದರು. ಈ ಕ್ರಮ ನಡೆಸಿದ ಒಂದು ವಾರದ ಒಳಗೆ ರೋಗಿಯ ಅನಾನುಕೂಲ ಕಡಿಮೆಯಾಗಿ ಕಾಲಿನ ಚಲನೆಯಲ್ಲಿ ಸುಧಾರಣೆ ಕಂಡುಬಂದಿತ್ತು. ಒಂದು ತಿಂಗಳ ಒಳಗೆ ಗ್ಯಾಂಗ್ರೀನ್ ಉಂಟಾಗಿದ್ದ ಪ್ರದೇಶದ ಗಾತ್ರ ಗಮನಾರ್ಹ ರೀತಿಯಲ್ಲಿ ಕಡಿಮೆಯಾಗಿದ್ದನ್ನು ವೈದ್ಯರು ಗಮನಿಸಿದ್ದರು. ರೋಗಿಯ ಸ್ಥಿತಿಯಲ್ಲಿ ಒಟ್ಟಾರೆಯಾಗಿ ಸುಧಾರಣೆ ಕಂಡುಬಂದಿತ್ತು. ಕಾಲು ಕತ್ತರಿಸುವುದನ್ನು ತಪ್ಪಿಸಲಾಗಿತ್ತಲ್ಲದೆ, ಕಾಲಿನ ಚಲನೆಯಲ್ಲಿ ಸುಧಾರಣೆ ಉಂಟಾಗುವಂತೆ ಕೂಡ ಮಾಡಲಾಗಿತ್ತು? ಎಂದರು. ಚುಚ್ಚುಮದ್ದನ್ನು ಗಂಭೀರವಾದ ಕಾಲಿನ ಇಷ್ಟೆಮಿಯಾ ತೊಂದರೆಯಲ್ಲಿ ಮತ್ತು ಕಾಲು ಕತ್ತರಿಸಲೇಬೇಕಾದ ಅನಿವಾರ ಪರಿಸ್ಥಿತಿಗಳಲ್ಲಿ “ಸ್ಟೆಮ್ ಸೆಲ್ ನೀಡಲಾಗುತ್ತದೆ. ಈ ಪ್ರಕರಣದಲ್ಲಿ ನಾವು ಆಂಜಿಯೋಪ್ಲಾಸ್ಟಿ ನಡೆಸಿ ರೋಗಿಗೆ ಆತನ ಕಾಲನ್ನು ಉಳಿಸಲು ಉನ್ನತಮಟ್ಟದ ವೈದ್ಯಕೀಯ ಹಸ್ತಕ್ಷೇಪದ ಅಗತ್ಯವಿದ್ದುದ್ದನ್ನು ಕಂಡುಕೊಂಡೆವು. ಅವರ ಕಾಲುಗಳ ಡಿಸ್ಟೆಲ್ ರಕ್ತನಾಳಗಳಲ್ಲಿ ಗಮನಾರ್ಹ ಹಾನಿ ಉಂಟಾಗಿತ್ತು.
ಆದ್ದರಿಂದ ನಾವು ಆಂಜಿಯೋಪ್ಲಾಸ್ಟಿ ಮತ್ತು ಸ್ಟೆಮ್ ಸೆಲ್ ಚಿಕಿತ್ಸೆಗಳೆರಡನ್ನು ಒಂದುಗೂಡಿಸಿದ್ದೆವು. ಆದರೆ, ಆಂಜಿಯೋಪ್ಲಾಸ್ಟಿ ಅಥವಾ ಬೈಪಾಸ್ ಶಸ್ತ್ರಚಿಕಿತ್ಸೆಗಳನ್ನು ಪರಿಣಾಮಕಾರಿಯಾಗಿ ಮಾಡಬಹುದಾದರೆ ಇಂತಹ ಪ್ರಕರಣಗಳಲ್ಲಿ ಅದು ನೆಚ್ಚಿನ ಆದ್ಯತೆಯ ಚಿಕಿತ್ಸೆಯಾಗಿರುತ್ತದೆ. ಇದು ಹೋಲಿಕೆಯಲ್ಲಿ ಸಾಕಷ್ಟು ಹೊಸ ಚಿಕಿತ್ಸೆಯಾಗಿದೆ. ಭಾರತದಲ್ಲಿ ಇನ್ನು ಆರಂಭದ ಹಂತದಲ್ಲಿದೆ. ಇಂತಹ ಚಿಕಿತ್ಸೆಯನ್ನು ಪಡೆದುಕೊಂಡ ೧೦ಕ್ಕೂ ಕಡಿಮೆ ರೋಗಿಗಳು ದೇಶದಲ್ಲಿದ್ದಾರೆ? ಎಂದು ಮೈಸೂರು ಮಣಿಪಾಲ್ ಹಾಸ್ಪಿಟಲ್ನ ಆಸ್ಪತ್ರೆ ನಿರ್ದೇಶಕರಾದ ಡಾ. ಗೌತಮ್ ದಾಸ್ ಹೇಳಿದರು.