ಮೈಸೂರು: ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ಪ್ರಾಯೋಜಕತ್ವದ ಕೆಪಿಎಲ್‌ನ ಮೈಸೂರು ವಾರಿಯರ್ಸ್ ತಂಡದ ಸದಸ್ಯರ ಪಟ್ಟಿ ಪ್ರಕಟಗೊಳಿಸಲಾಯಿತು.ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಸೈಕಲ್ ಪ್ಯೂರ್ ಅಗರ್‌ಬತ್ತಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ಮೈಸೂರು ವಾರಿಯರ್ ತಂಡದ ಸದಸ್ಯರ ಹೆಸರು ಪ್ರಕಟಿಸಿದರು.ಬಳಿಕ ಮಾತನಾಡಿ, “ಸಾಂಕ್ರಾಮಿಕದ ಕಾರಣವಾಗಿ ಎರಡು ವರ್ಷಗಳ ಬಿಡುವಿನ ನಂತರ ನಮ್ಮ ತಂಡದ ಸದಸ್ಯರಲ್ಲಿ ಆಸಕ್ತಿ ಮತ್ತು ಉತ್ಸಾಹಗಳನ್ನು ಕಾಣುವುದು ಬಹಳ ಪ್ರೇರಣಾತ್ಮಕವಾಗಿದೆ. ಕರುಣ್ ಅವರ ಸಮರ್ಥ ನಾಯಕತ್ವದ ಅಡಿಯಲ್ಲಿ ಮೈಸೂರು ವಾರಿಯರ್ ತಂಡ ಅದ್ಭುತ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸ ನನಗಿದೆ. ಕೆ.ಎಲ್. ಅಶ್ವಥ್ ಅವರು ಅಚ್ಚರಿಮೂಡಿಸುವಂತಹ ಆಯ್ಕೆ ಮಾಡಿದ್ದಾರೆ. ಪಿ.ವಿ.ಶಶಿಕಾಂತ್ ಮತ್ತು ಅಕ್ಷಯ್ ಅವರಂಥವರು ತಮ್ಮೊಂದಿಗೆ ಹಲವಾರು ವರ್ಷಗಳ ಅನುಭವವನ್ನು ತಂಡಕ್ಕೆ ತರುವುದರೊಂದಿಗೆ, ಟೂರ್ನಿಯಲ್ಲಿ ತಂಡ ಆಟಗಾರರಿಗೆ ಮಾರ್ಗದರ್ಶನ ನೀಡಲು ವಿಶ್ವಾಸವುಳ್ಳ ಮತ್ತು ಸಮರ್ಥ ತರಬೇತುದಾರರಿರುತ್ತಾರೆ. ಈ ಪಂದ್ಯಗಳನ್ನು ಕುರಿತು ನಾನು ಬಹಳ ಉತ್ಸಾಹಿತನಾಗಿದ್ದೇನೆ” ಎಂದು ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮೈಸೂರು ವಾರಿಯ ತ೦ಡದ ಮಾಲೀಕರಾದ ಅರ್ಜುನ್ ರಂಗ ಅವರುಹೇಳಿದರು.
ಮೈಸೂರು ವಾರಿಯರ್ ತಂಡದ ನಾಯಕರಾದ ಕರುಣ್ ನಾಯರ್ ಅವರು ನಾಯಕ ಸ್ಥಾನಕ್ಕೆ ತಮ್ಮ ಆಯ್ಕೆ ಕುರಿತು ಮಾತನಾಡಿ, “ಮಹಾರಾಜ ಟಿ೨೦ ಟೂರ್ನಿಗಾಗಿ ತಂವನ್ನು ಮುನ್ನಡೆಸುವುದು. ದೊಡ್ಡ ಗೌರವ ಮತ್ತು ಸುಯೋಗವಾಗಿರುತ್ತದ. ನಮ್ಮ ಅಭಿಮಾನಿಗಳು ಮತ್ತು ಎಲ್ಲ ಪಾಲುದಾರರಿಗಾಗಿ ನಾವು ಅದ್ಭುತ ಪ್ರದರ್ಶನ ನೀಡಲಿದ್ದೇವೆ ಎಂಬ ವಿಶ್ವಾಸ ನನಗಿದೆ. ಈ ಜವಾಬ್ದಾರಿ ನನಗೆ ನೀಡುವಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿರುವ ತಂಡಕ್ಕೆ ನಾನು ಕೃತಜ್ಞನಾಗಿದ್ದೇನೆ” ಎಂದರು.
ಮೈಸೂರು ವಾರಿಯರ್ಸ್ ತಂಡದ ಮುಖ್ಯ ತರಬೇತುದಾರರಾಗಿ ಪಿ.ವಿ, ಶಶಿಕಾಂತ್ ಅವರನ್ನು ನೇಮಿಸಲಾಗಿದೆ. ಅವರು ಭಾರತದ ಮಾಜಿ ಮೊದಲ ದರ್ಜೆ ಕ್ರಿಕೆಟ್ ಆಟಗಾರರಾಗಿದ್ದು, ೧೯೮೭/೮೮ ರಿಂದ ೧೯೯೬/೯೭ರವರೆಗೆ ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಆಟವಾಡಿರುತ್ತಾರೆ. ೧೯೯೪ರಲ್ಲಿ ಮೊಯಿನ್‌ವುದಲ ಗೋಲ್ಡ್ ಕಪ್ ಟೂರ್ನಮೆಂಟ್‌ನಲ್ಲಿ ಕರ್ನಾಟಕ ತಂಡದ ನಾಯಕರಾಗಿ ಅವರು ತಂಡ ಪ್ರಶಸ್ತಿ ಪಡೆಯುವಲ್ಲಿ ಮುನ್ನಡೆಸಿದ್ದರು. ೧೯೯೬-೧೯೯೭ರಲ್ಲಿ ಇತರೆ: ಭಾರತ ತಂಡದ ವಿರುದ್ಧ ಕರ್ನಾಟಕ’ ತಂಡ ಇರಾನಿ ಟ್ರೋಫಿ ಗೆಲ್ಲುವಲ್ಲಿ ನಾಯಕರಾಗಿ ಅವರು ಪ್ರಮುಖ ಪಾತ್ರವಹಿಸಿದ್ದರು. ೨೦೧೭ರ ಏಪ್ರಿಲ್‌ನಲ್ಲಿ, ಅವರನ್ನು ಕರ್ನಾಟಕ ಸೀನಿಯರ್ ತಂಡದ ಮುಖ್ಯ ತರಬೇತುದಾರರಾಗಿ ನೇಮಿಸಲಾಗಿತ್ತು. ೨೦೧೮ರಲ್ಲಿ ಬಿಸಿಸಿಐನಿಂದ ಇವರನ್ನು ಮಿಜೋರಾಂ ಕ್ರಿಕೆಟ್ ತಂಡದ ತರಬೇತುದಾರರಾಗಿ ನೇಮಿಸಲಾಗಿತ್ತು.
ಮೈಸೂರು ವಾರಿಯರ್ಸ್‌ನ ಮುಖ್ಯ ಕೋಚ್ ಪಿ.ವಿ.ಶಶಿಕಾಂತ್ ಅವರು ತರಬೇತಿ ಕ್ಷೇತ್ರದಲ್ಲಿ ತಂಡದೊಂದಿಗೆ ಇರುವುದನ್ನು ಎದುರು ನೋಡುವ ಬಗ್ಗೆ ಮಾತನಾಡಿ, “ತಂಡವು ನನಗೆ ದೊಡ್ಡ ಜವಾಬ್ದಾರಿ ವಹಿಸಿದೆ ಮತ್ತು ನಾನು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ’ ಎಂಬ ವಿಶ್ವಾಸವಿದೆ. ಮೈಸೂರು ವಾರಿಯರ್ಸ್‌ನ೦ತಹ ತಂಡದೊಂದಿಗೆ ಸಹಭಾಗಿತ್ವ ಹೊಂದಿರುವುದು ಎರಡು ಉದ್ದೇಶಗಳನ್ನು ಪೂರೈಸುತ್ತದೆ, ಮೊದಲನೆಯದು ಕೆಲವು ಪ್ರತಿಭಾವಂತ ಆಟಗಾರರನ್ನು ಉತ್ತಮವಾಗಿ ರೂಪುಗೊಳಿಸಲು ಮತ್ತು ತರಬೇತುಗೊಳಿಸಲು ಅಲ್ಲದೇ ಕ್ರಿಕೆಟ್ ಮೇಲಿನ ಪ್ರೀತಿಗಾಗಿ ಎಲ್ಲರನ್ನು ಒಂದುಗೂಡಿಸುವ ಕಾರಣದೊಂದಿಗೆ ಸಹಯೋಗ ಹೊಂದಲು ಸಾಧ್ಯವಾಗುತ್ತದೆ’ ಎಂದರು.
“ಅವರು ಪ್ರತಿದಿನ ಸುಧಾರಣೆ ಹೊಂದುವ ಭಾವೋತ್ಸಾಹ ಮತ್ತು ಬಯಕೆಯನ್ನು ಹೊಂದಿದ್ದಾರೆಂದು ನನಗೆ ತಿಳಿದಿದೆ. ನಮ್ಮ ಸಾಮರ್ಥ್ಯವನ್ನು ಸಾಧಿಸುವುದಕ್ಕೆ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಕೆಲಸ ಮಾಡುವುದನ್ನು ನಾನು ಎದುರು ನೋಡುತ್ತಿದ್ದೇನೆ” ಎಂದರುಟೂರ್ನಮೆಂಟ್‌ಗೆ ಸಹಾಯಕ ತರಬೇತುದಾರರಾಗಿ ಕೆ.ಎಲ್, ಅಕ್ಷಯ್, ಆಯ್ಕೆದಾರರಾಗಿ ಕೆ.ಎಲ್. ಅಶ್ವತ್, ಫಿಜಿಯೋಥೆರಪಿಸ್ಟ್ ಆಗಿ ಟಿ. ಮಂಜುನಾಥ್, ಟ್ರೇನರ್ ಆಗಿ ಇರ್ಫಾನ್ ಉಲ್ಲಾ ಖಾನ್ ಮತ್ತು ವಿಡಿಯೋ ವಿಶ್ಲೇಷಕರಾಗಿ ಕಿರಣ್ ಕೆ, ಕಾರ್ಯ ನಿರ್ವಹಿಸಲಿದ್ದಾರೆ.ಮೈಸೂರು: ವಾರಿಯರ್ ತಂಡದ ಅಧಿಕೃತ ಪ್ರಾಯೋಜಕರಲ್ಲಿ ಸೈಕಲ್ ಸ್ಕೂಲ್ ಅಗರಬತ್ತಿ, ಬೂಮರ್, ಐಐಎಫ್‌ಎಲ್ ವೆಲ್ತ್, ಸಂಕಲ್ಸ್, ಅಡುಕಲೆ, ಫಂಡರ್‌ಮ್ಯಾಕ್ಸ್, ಮೀನಾಕ್ಷಿ, ಟಿಎಂಟಿ, ಬಾಂಬೆ ಶೇವಿಂಗ್ ಕಂಪನಿ, ತೊಳಸಿ ಟ್ಯೂವಲ್ಸ್, ಕ್ರಿಕೆಟ್ ಸೆಂಟ್ರಲ್, ಕೊವೀಸ್, ಐಡಿಬಿಐ ಬ್ಯಾಂಕ್, ಬೈಕ್, ಸ್ಟಾರ್ ಆಫ್ ಮೈಸೂರು, ಗ್ಲೋಬಲ್ ಬಜ್, ರೆಡ್ ಎಫ್‌ಎಂ ೯೩.೫, ಡಿಆರ್‌ಸಿಗಳು ಸೇರಿವೆ.ತಂಡದ ಸಾಮಾಜಿಕ ಉದ್ದೇಶದ ಅಧಿಕೃತ ಪಾಲುದಾರರಲ್ಲಿ ರೀಫಾರೆಸ್ಟ್ ಇಂಡಿಯಾ, ಕಲಿಸು ಫೌಂಡೇಷನ್, ಉಷಾಕಿರಣ್ ಐ ಹಾಸ್ಪಿಟಲ್ ಮತ್ತು ಡಾಯಿ ಕೃಫ್ ಕಿಂಡರ್‌ಫ್ ಸೇರಿವೆ.ಮೈಸೂರು ವಾರಿಯರ್ಸ್ ತಂಡ: ನಾಯಕ್ ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಪವನ್ ದೇಶ್ ಪಾಂಡೆ, ವಿದ್ಯಾಧರ ಪಾಟೀಲ್,ನಿಹಾಲ್ ಉಳಾಲ್ಲ,ಪ್ರತೀಕ್ ಜೈನ್, ಭರತ್ ಧೋರಿ, ಚಿರಂಜೀವಿ, ವಿಕೆಟ್ ಕೀಪರ್ ಶುಬಂಘ ಹೆಗ್ಗಡೆ, ಲೋಚನ್ನ ಅಪ್ಪಣ್ಣ, ಶಿವರಾಜ್, ಮೋನಿಷ್ ರೆಡ್ಡಿ,ವರುಣ್ ರಾವ್,ರಾಹುಲ್ ಪ್ರಸನ್ನ,ನಿತಿನ್ ಬಿಲ್ಲೆ,ಆದಿತ್ಯ ಗೋಯಲ್,ಅಭಿಷೇಕ್‌ಅಲ್ವತ್, ನಾಗ ಭರತ್,ಅರುಣ್, ತುಷಾರ್ ಎಚ್,ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು