ಮೈಸೂರು-ಹುಣಸೂರು ಮುಖ್ಯ ರಸ್ತೆಯ ಕೂರ್ಗಳ್ಳಿ ಕೈಗಾರಿಕಾ ಪ್ರದೇಶಕ್ಕೆ ತಿರುಗುವ ಜಾಗದಲ್ಲಿ ಒಂದು ವೃತ್ತ ನಿರ್ಮಾಣ ಮಾಡುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಜಗದೀಶ್ ಮತ್ತು ಜಕ್ಷನ್ ಆಫೀಸರ್ ರವರನ್ನು ಕರೆದು ಸ್ಥಳದಲ್ಲೇ ಚರ್ಚಿಸಿ ವಾಹನ ದಟ್ಟಣೆ ಹೆಚ್ಚಾಗಿದ್ದು ವಾಹನವು ಸರಾಗವಾಗಿ ಸಲಿಸಲು ವೃತ್ತ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಂಸದ ಪ್ರತಾಪ್ ಸಿಂಹರವರು ಚರ್ಚಿಸಿದರು, ಸ್ಥಳೀಯ ಉದ್ಯಮಿಯಾದ ಸಂದೀಪ್ ನಾಯಕ್ ರವರು ವೃತ್ತ ನಿರ್ಮಾಣದ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಸಭೆಯನ್ನು ಕರೆಯಲಾಗಿದ್ದು ಸಭೆಯಲ್ಲಿ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು