ಪುರಾಣೇತಿಹಾಸ

ಶ್ರೀಚಾಮುಂಡೇಶ್ವರಿಯು ಮಹಿಷಾಸುರನನ್ನು ಮರ್ಧಿಸಿದ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ.  ಮಹಿಷಊರು/ ಮೈಸೂರು ಪ್ರಪಂಚದ ಪರಂಪರೆ ನಗರಗಳಲ್ಲೊಂದು ಎಂದು ವಿಶ್ವಸಂಸ್ಥೆಯೂ, ದೇಶದ ಸಾಂಸ್ಕೃತಿಕ ನಗರಗಳಲ್ಲೊಂದು ಎಂದು ಭಾರತ ಸರ್ಕಾರವೂ ಘೋಷಿಸಿದೆ!  ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಗತ್ತಿನ ಐದನೆ ಮತ್ತು ಭಾರತದ ಎರಡನೆ ಸ್ಥಳ ಮೈಸೂರು/ಅರಮನೆ! ಯದುವಂಶವು ಇಲ್ಲಿ ಉಗಮಿಸಿದ್ದೆ ಒಂದು ಆಕಸ್ಮಿಕ:- ೧೩೯೯ರಲ್ಲಿ ದ್ವಾರಕ ನಗರದಿಂದ ಯದುರಾಯ-ಕೃಷ್ಣರಾಯ ಸೋದರರು ಮೈಸೂರಿಗೆ ಆಗಮಿಸಿದ್ದಾಗ ಕನಸಲ್ಲಿ ಬಂದ ಚಾಮುಂಡೇಶ್ವರಿ ನಗರದ ಪೂರ್ವದಿಕ್ಕಿನಲ್ಲಿರುವ ಕೋಡಿಭೈರವನ ದೇವಾಲಯಕ್ಕೆ ಹೋಗಲು ಆಜ್ಞಾಪಿಸುವಳು. ಎಚ್ಚರಗೊಂಡ ಅವರು ಸ್ಥಳೀಯ ಸನ್ಯಾಸಿಯಿಂದ ಅಲ್ಲಿನ ರಾಜಕೀಯ ಸ್ಥಿತಿಗತಿ ತಿಳಿದುಕೊಳ್ಳುವರು.  ಮಹಾರಾಜ ಶೂರದೇವನ ವಂಶಜ ಚಾಮರಾಜನು ಗಂಡುಮಕ್ಕಳಿಲ್ಲದೆ ಮರಣಹೊಂದಿದ್ದು, ರಾಜಕುಮಾರಿಯನ್ನು ವಿವಾಹವಾಗಲು ದಳಪತಿ ಮಾರನಾಯಕನು ಚಿತ್ರಹಿಂಸೆ ನೀಡುತ್ತಿದ್ದಾನೆ ಎಂಬ ವಿಷಯ ತಿಳಿದಾಕ್ಷಣ ಸೋದರರು, ಉಪಾಯದಿಂದ ಅಲ್ಲಿನ ರಾಜಸಿಬ್ಬಂದಿ ಮತ್ತು ಸೈನಿಕರ ಬೆಂಬಲ ಪಡೆದು ಮಾರನಾಯಕನನ್ನು ಕೊಂದು, ರಾಜಕುಮಾರಿ ದೇವರಾಜಮ್ಮಣ್ಣಿಯನ್ನು ಯದುರಾಯನು ವಿವಾಹವಾಗಿ ಮೈಸೂರಿನ ರಾಜ್ಯಭಾರ ವಹಿಸಿಕೊಳ್ಳುತ್ತಾನೆ!

Mysuru Dasara Celebrations 2021 Live Streaming: Watch Live Telecast of  Inauguration Function at Chamundi Hill | 🙏🏻 LatestLY

ವಿಜಯನಗರ ಸಾಮ್ರಾಜ್ಯದಿಂದ ಮೈಸೂರು ರಾಜ್ಯಕ್ಕೆ ಬಳುವಳಿಯಾದ ಕ್ಷತ್ರಿಯ ಸಂಪ್ರದಾಯ ಉತ್ಸವ:- ೧೫೬೫ರ ತಾಳಿಕೋಟೆ ಯುದ್ಧದ ನಂತರ ವಿಜಯನಗರದ ಶ್ರೀರಂಗರಾಯರು ಮೈಸೂರಿನ ರಾಜಒಡೆಯರ್‌ಗೆ ಸಿಂಹಾಸನ ಅರ್ಪಿಸಿ, ಪ್ರತಿವರ್ಷ ‘ದಸರಾ’ ನಡೆಸುವಂತೆ ಸೂಚಿಸಿದರು.  ೧೬೧೦ರಲ್ಲಿ ಪ್ರಪ್ರಥಮ ಮೈಸೂರು ದಸರ ಶ್ರೀರಂಗಪಟ್ಟಣದಲ್ಲಿ ಪ್ರಾರಂಭವಾಯ್ತು.  ೧೬೬೫ರಲ್ಲಿ ಚಾಮುಂಡಿಬೆಟ್ಟಕ್ಕೆ ೧೦೦೧ಮೆಟ್ಟಿಲು ನಿರ್ಮಾಣ, ೭೦೦ನೇ ಮೆಟ್ಟಿಲುಬಳಿ ನಂದಿ ಪ್ರತಿಷ್ಠಾಪನೆ ಕಾರ್ಯವನ್ನು ದೊಡ್ಡ ದೇವರಾಜ ಒಡೆಯರ್ ಕೈಗೊಂಡರು. ಸುಮಾರು ೬೦೦ವರ್ಷ ಆಳಿದ ಮೈಸೂರುದೊರೆಗಳ ಮನೆದೇವತೆ ಚಾಮುಂಡೇಶ್ವರಿ! ೧೭೯೯-೧೯೪೭ ಬ್ರಿಟಿಷ್‌ಅಧೀನದಲ್ಲೂ ದಸರಹಬ್ಬವು ಮುಮ್ಮಡಿಕೃಷ್ಣರಾಜಒಡೆಯರ್ ಮೂಲಕ ಮುಂದುವರೆದು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ವಿಖ್ಯಾತಿ ಗಳಿಸಿ ಜಯಚಾಮರಾಜ ಒಡೆಯರ್ ಕಾಲದಲ್ಲಿ [ಸ್ವಾತಂತ್ರ್ಯಾನಂತರ] ಜನಪ್ರಿಯತೆ ತಗ್ಗಿತು! ೧೮೯೭ರಲ್ಲಿ ರಾಜಕುಮಾರಿ ಜಯಲಕ್ಷಮ್ಮಣ್ಣಿ ಮತ್ತು ಸರ್ದಾರ್ ಕಾಂತರಾಜಅರಸು ವಿವಾಹ ಸಂದರ್ಭದಲ್ಲಿ ಮರದಅರಮನೆ ಸುಟ್ಟುಭಸ್ಮವಾದ ನಂತರ ಈಗಿನ ಅಂಬಾವಿಲಾಸ ಅರಮನೆ ಅಂದಾಜು ೪೫ಲಕ್ಷ ರೂಪಾಯಿ ವೆಚ್ಚದಲ್ಲಿ ಬ್ರಿಟಿಷ್ ಅಧಿಕಾರಿ ಸರ್ ಇರ್ವಿನ್ ಉಸ್ತುವಾರಿಯಲ್ಲಿ [೧೮೯೭-೧೯೧೩] ೧೬ವರ್ಷ ನಿರ್ಮಿಸಲಾಯ್ತು! ಇವತ್ತಿಗೂ ಸುಟ್ಟುಹೋದ ಹಳೆಅರಮನೆಯ ತೈಲವರ್ಣ ಚಿತ್ರವನ್ನು ಅರಮನೆ ಉತ್ತರ ದ್ವಾರದ ಬಳಿಯಲ್ಲಿ ಕಾಣಬಹುದು!

Mysore Dasara Festival in Karnataka | Dates, significance, celebrations &  Location

ದುರ್ಗಾಷ್ಟಮಿಮಹಾನವಮಿವಿಜಯದಶಮಿ:- ೧೪ನೆ ಶತಮಾನದಲ್ಲಿ ವಿಜಯನಗರ ಚಕ್ರವರ್ತಿಗಳಿಂದ ಪ್ರಾರಂಭಗೊಂಡ ದಸರಾಚರಣೆ ಪದ್ಧತಿ ಮೈಸೂರು ಮಹಾರಾಜರುಗಳಿಂದ ೧೯೭೧ವರೆಗೆ ಆಚರಿಸಲ್ಪಟ್ಟಿತು. ೧೦ದಿನದ ದಸರ ಪ್ರತಿವರ್ಷ ಆಶ್ವೀಜ ಮಾಸ ಮಹಾಲಯ ಅಮಾವಾಸ್ಯೆದಿನ ಶಾಸ್ತ್ರೋಕ್ತವಾಗಿ ಪ್ರಾರಂಭವಾಗಿ, ಅಷ್ಟಮಿ ೮ದಿನ ಆದಿಶಕ್ತಿಯ ೮ಅವತಾರದ ದುರ್ಗೆ,ಲಕ್ಷ್ಮಿ,ಸರಸ್ವತಿ,ಚಂಡಿ,ಚಾಮುಂಡಿ,ಕಾಳಿ,ಗಾಯತ್ರಿ,ಭುವನೇಶ್ವರಿ, ಅಷ್ಟದೇವತೆ ಪೂಜಿಸಲಾಗುತ್ತಿತ್ತು. ನವರಾತ್ರಿ ೯ದಿನ ಪ್ರತಿಸಂಜೆ ೮ವರೆಗೆ ರಾಜದರ್ಬಾರಲ್ಲಿ ವಿಧವಿಧ ಸಂಗೀತ ನೃತ್ಯ ವಾದ್ಯ/ಕವಿಗೋಷ್ಠಿ ಕಾರ್ಯಕ್ರಮ ಜರುಗಿ, ಮಹಾನವಮಿ ಬೆಳಗ್ಗೆ ಆಯುಧಪೂಜೆ ನಡೆಯುತ್ತಿತ್ತು. ವಿಜಯದಶಮಿ ೧೦ನೇದಿನ ಜಂಬೂಸವಾರಿ ಮೆರವಣಿಗೆಯಲ್ಲಿ ನಂದಿಕಂಬ ನವಕುಂಭ ಅಷ್ಠಕಳಶ ನಿತ್ಯಮುತ್ತೈದೆಯರು ಷಷ್ಟ್ಯಾರ್ಚಕರು ಸಕಲಕಲಾಕೋವಿದರು ವಿದ್ಯಾಪಾರಂಗತರು ಶ್ರೇಷ್ಠಕವಿಗಳು ಜೇಷ್ಠಾವಧಾನಿಗಳು ಹೊಗಳುಭಟ್ಟರು ಶಿಸ್ತಿನಸಿಪಾಯಿಗಳು ಮಂತ್ರಿಮಾಂಡಲಿಕರು ಕುಲಬಾಂಧವರು ಸೇನಾಪತಿದಂಡು ಒಂಟೆದಳ ಅಶ್ವದಳ ಗಜದಳ ರಕ್ಷಕಭಟರದಳ ಶಸ್ತ್ರಾಸ್ತ್ರಮದ್ದುಗುಂಡಿನಗಾಡಿ ಆನೆಗಾಡಿ ಜೋಡಿಬಸವ ಪಟ್ಟದಾನೆ ಪಟ್ಟದಕುದುರೆ ಸಿಂಹವಾಹಿನಿರಥ ಚಿನ್ನದರಥ ಬೆಳ್ಳಿರಥ ರಾಣಿಮೇನೆ ಕರ್ನಾಟಕಸಂಗೀತವಾದ್ಯಗೋಷ್ಠಿ ಪೈಲ್ವಾನ್ತಂಡ ಜಾನಪದಕಲಾತಂಡ ಗೃಹರಕ್ಷಕದಳ ಅಗ್ನಿಶಾಮಕದಳ ಮರಗಾಲುಮನುಷ್ಯ ಭೂತಾಕಾರಬೊಂಬೆದಂಪತಿ ಡೊಳ್ಳುಕುಣಿತ ಕಿರುಬನಕುಣಿತ ಮಾರಿಕುಣಿತ ಸ್ಥಬ್ಧಚಿತ್ರ ಹುಲಿವೇಷ ಮುಂತಾದವು ಮೈಸೂರು ಸಂಸ್ಕೃತಿಇತಿಹಾಸ ನೆನಪಿಸುವಂತೆ ಸಾಲಂಕೃತವಾಗಿ ಅರಮನೆಯಿಂದ ಹೊರಟು ಶಿಸ್ತಿನಿಂದ ಸಯ್ಯಾಜಿರಾವ್ ರಸ್ತೆ ಮೂಲಕ  ೫ಕಿ.ಮೀ. ದೂರದ ಬನ್ನಿಮಂಟಪ ತಲುಪುತ್ತಿತ್ತುಮಹಾರಾಜರ ಜಂಬೂಸವಾರಿ ಕಣ್ತುಂಬಿಕೊಳ್ಳಲು ಪ್ರಪಂಚದ/ದೇಶದ/ರಾಜ್ಯದ ಎಲ್ಲಕಡೆ ಯಿಂದಬಂದ ಲಕ್ಷಾಂತರ ಮಂದಿ ಬೆಳಗ್ಗೆಯಿಂದಲೆ ರಸ್ತೆವೃತ್ತಮರಕಟ್ಟಡಎಲ್ಲೆಡೆ ಜಮಾವಣೆಯಾಗಿ ಎಳ್ಳು ಎರಚಿದರೆ ನೆಲಕ್ಕೆ ಬೀಳದಷ್ಟು ಜನಜಂಗುಳಿ ಇರುತ್ತಿತ್ತುಎಲ್ಲೆಲ್ಲು ಹೊಸಬಟ್ಟೆ ಹೊಸತಿಂಡಿ ಹೊಸನೋಟ ಹೊಸಜೋಡಿ ಇಡೀಪರಿಸರ ಜಾತ್ರೆಯ ವಾತಾವರಣದಿಂದ ತುಂಬಿ ತುಳುಕುತ್ತಿತ್ತು! ಯುದ್ಧಪೂರ್ವದಯುದ್ಧನಂತರದ ವಿಜಯೀಯಾತ್ರೆ ಪದ್ಧತಿಯಂತೆ ಮಹಾರಾಜರು ಶಮೀವೃಕ್ಷಕ್ಕೆ ಪೂಜೆ ಮಾಡಿದ ನಂತರ ಬನ್ನಿಮಂಟಪದ ವೇದಿಕೆಯಲ್ಲಿ ಅರ್ಹರಿಗೆ ಬಿರುದು ಬಹುಮಾನ ಪ್ರಶಸ್ತಿ ತಾಮ್ರಪತ್ರಗಳನ್ನು ಕೊಡಮಾಡುತ್ತಿದ್ದರು, ಜಯಚಾಮರಾಜ ಒಡೆಯರ್ ಕಾಲದಲ್ಲೂ ದತ್ತಿ ದಾನ ಧರ್ಮ ಮುಂತಾದ ಪ್ರಜಾ ಸತ್ಕಾರ್ಯಗಳು ನಡೆದು ಭವ್ಯಪರಂಪರೆಯ ಮೈಸೂರು ದಸರ ವಿಜೃಂಭಣೆಯಿಂದ ಮುಕ್ತಾಯವಾಗುತ್ತಿತ್ತು! ಮೈಸೂರುವಾಸುದೇವಾಚಾರ್ಯ ಜಯಚಾಮರಾಜಒಡೆಯರ್ ರಚಿಸಿದ ಶ್ರೀಚಾಮುಂಡೇಶ್ವರಿಮುಂತಾದ ಗೀತಗಾಯನದ ಮೂಲಕ ವಿಪ್ರೋತ್ತಮರು ಮಂಗಳ ಹಾಡುತ್ತಿದ್ದರುಕಾಲಕ್ರಮೇಣ ಬ್ರಿಟಿಷ್ ಆಡಳಿತದಲ್ಲಿ ಟಾರ್ಚ್ಲೈಟ್ ಪರೇಡ್ ಎಗ್ಜಿಬಿಶನ್ ಫ಼್ಲವರ್ಶೋ ಇಂಗ್ಲಿಷ್ಬ್ಯಾಂಡ್ ಆರ್ಕೆಷ್ಟ್ರ ರಿಸರ್ವ್ಪೊಲೀಸ್ ಲ್ಯಾಂಡ್ಆರ್ಮಿ ಎನ್ಸಿಸಿ ಸ್ಕೌಟ್&ಗೈಡ್ ಇತ್ಯಾದಿಗಳು ಪ್ರಾರಂಭವಾದವು?!

10 Key Attractions of Mysore Dasara Which Makes it the Best Of All World  Festivals - MetroSaga

ಮೈಸೂರು ಸಾಮ್ರಾಜ್ಯದ ಇಪ್ಪತ್ತೆಂಟು ಮಹಾರಾಜರು:-

ಕ್ರ.ಸಂ. ಇಂದ ವರೆಗೆ ಮಹಾರಾಜರ ಹೆಸರು
1 1399 1423 ಯದುರಾಯರು [ಪ್ರಪ್ರಥಮ ಮಹಾರಾಜ]
2 1423 1459 ಒಂದನೇ ಹಿರಿಯ ಬೆಟ್ಟದ ಚಾಮರಾಜ ಒಡೆಯರ್
3 1459 1478 ಒಂದನೇ ತಿಮ್ಮರಾಜ ಒಡೆಯರ್
4 1478 1513 ಇಮ್ಮಡಿ ಹಿರಿಯ ಬೆಟ್ಟದ ಚಾಮರಾಜ ಒಡೆಯರ್
5 1513 1553 ಮುಮ್ಮಡಿ ಹಿರಿಯ ಬೆಟ್ಟದ ಚಾಮರಾಜ ಒಡೆಯರ್
6 1553 1572 ತಿಮ್ಮರಾಜ ಒಡೆಯರ್
7 1572 1576 ಬೋಳುತಲೆ ನಾಲ್ವಡಿ ಚಾಮರಾಜ ಒಡೆಯರ್
8 1576 1578 5ನೇ ಬೆಟ್ಟದ ಚಾಮರಾಜ ಒಡೆ
ಯರ್
9 1578 1617 ಒಂದನೇ ರಾಜ ಒಡೆಯರ್
10 1617 1637 6ನೇ ಚಾಮರಾಜ ಒಡೆಯರ್
11 1637 1638 ಇಮ್ಮಡಿ ರಾಜ ಒಡೆಯರ್ (ಅಲ್ಪಾವಧಿ ಆಳ್ವಿಕೆ)
12 1638 1659 [ರಣಧೀರ] ಕಂಠೀರವ ನರಸರಾಜ ಒಡೆಯರ್
13 1659 1673 ದೊಡ್ಡ ದೇವರಾಜ ಒಡೆಯರ್
14 1673 1704 ಚಿಕ್ಕ ದೇವರಾಜ ಒಡೆಯರ್
15 1704 1714 ಕಂಠೀರವ ಮಹಾರಾಜ ಒಡೆಯರ್
16 1714 1732 ದೊಡ್ಡ ಕೃಷ್ಣರಾಜ ಒಡೆಯರ್
17 1732 1760 7ನೇ ಚಾಮರಾಜ ಒಡೆಯರ್
19 *1761 1766 ಇಮ್ಮಡಿ ಕೃಷ್ಣರಾಜ ಒಡೆಯರ್
20 1766 1770 ನಂಜರಾಜ ಬಹಾದ್ದೂರ್ ಒಡೆಯರ್
21 1770 1776 8ನೇ-ಬೆಟ್ಟದ ಚಾಮರಾಜ ಒಡೆಯರ್
22 1776 1796 9ನೇ-ಖಾಸಾ ಚಾಮರಾಜ ಒಡೆಯರ್
23 *1797 1868 ಮುಮ್ಮಡಿ ಕೃಷ್ಣರಾಜ ಒಡೆಯರ್ (72ವರ್ಷ ಧೀರ್ಘಾವಧಿ ಆಳ್ವಿಕೆ)
24 1868 1894 10ನೇ ಚಾಮರಾಜೇಂದ್ರ ಒಡೆಯರ್
25 1894 1940 ನಾಲ್ವಡಿ ಕೃಷ್ಣರಾಜ ಒಡೆಯರ್ (46ವರ್ಷ ಆಳ್ವಿಕೆ)
26 1940 1947/1970@ ಜಯಚಾಮರಾಜ ಒಡೆಯರ್ (23.9.1974 ನಿಧನ)
27 1974 2013 ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (10.12.2013 ನಿಧನ)
28 2015$ — ಶ್ರೀಯದುವೀರ ಕೃಷ್ಣದತ್ತ
ಚಾಮರಾಜ ಒಡೆಯರ್

Mysore dasara, Royalty-free Mysore dasara Vector Images & Drawings |  Depositphotos®

  ೧೭೬೧-೧೭೯೭ವರೆಗೆ ಹೈದರಾಲಿ-ಟಿಪ್ಪುಸುಲ್ತಾನ್ ಆಡಳಿತ ಜಾರಿಯಲ್ಲಿದ್ದು, ಒಡೆಯರ್‌ಗಳು ಸಾಮಂತರಾಗಿ ಆಳ್ವಿಕೆ ನಡೆಸಿದ್ದರು!

       @ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಮಹಾರಾಜರನ್ನು ‘ಸಾಮಾನ್ಯಪ್ರಜೆ’ ಯನ್ನಾಗಿಸಿ ‘ರಾಜಧನ’ ಜಾರಿಗೊಳಿಸಲಾಯ್ತು!

       $ಶ್ರೀಕಂಠದತ್ತನರಸಿಂಹರಾಜಒಡೆಯರ್ ೧೦.೧೨.೨೦೧೩ರಂದು ವಿಧಿವಶರಾದರು. ಕೆಲವೇ ದಿನದ ಮುನ್ನ ಕೆ.ಎಸ್.ಸಿ.ಎ.ಅಧ್ಯಕ್ಷರಾಗಿ

       ಚುನಾವಣೆ ಗೆದ್ದಿದ್ದರು. ೧೯೯೪ ಮತ್ತು ೧೯೯೯ರಲ್ಲಿ ೨ಬಾರಿ ಮೈಸೂರು ಲೋಕಸಭಾ ಸದಸ್ಯರಾಗಿದ್ದರು. ವಿಪರ್ಯಾಸವೆಂಬಂತೆ,

           ಇತಿಹಾಸದ ಅಲಮೇಲಮ್ಮನ ಶಾಪದಂತೆ? ಒಡೆಯರ್ ದಂಪತಿಗೆ ಸಂತಾನ ಪ್ರಾಪ್ತಿಯಾಗಲೇ ಇಲ್ಲ.  ಇದು ಮೈಸೂರು             

           ಚರಿತ್ರೆಯಲ್ಲಿ ಅತ್ಯಂತ ವಿಷಾದನೀಯ! ಕಡೆಗೆ, ಶ್ರೀಮತಿ ಪ್ರಮೋದಾದೇವಿ ಒಡೆಯರ್ ೨೮.೫.೨೦೧೫ರಂದು ಅವರ ಸಂಬಂಧಿ

           ಗೋಪಾಲರಾಜೆ ಅರಸ್ ದತ್ತುಪುತ್ರನನ್ನು ಮಹಾರಾಜನನ್ನಾಗಿ ಪಟ್ಟಾಭಿಷೇಕ ಮಾಡಿಸಿದರು?!  

ದಸರಾ ಅಂದು-ಇಂದು

       ಆ ಕಾಲದಲ್ಲಿ ಪ್ರತಿಸಂಜೆ ೭ಗಂಟೆಗೆ ಸರಿಯಾಗಿ ಸಂಪ್ರದಾಯಬದ್ಧ ಮಹಾರಾಜರು ಸಕಲವೈಭವದಿಂದ ರತ್ನಖಚಿತ ಸಿಂಹಾಸನದಲ್ಲಿ ಕುಳಿತಾಕ್ಷಣ ದಿಗ್ಗನೆ ಹೊತ್ತಿಕೊಳ್ಳುತ್ತಿದ್ದ ೯ಲಕ್ಷ ಬಲ್ಬುಗಳು ಇಡೀ ಅರಮನೆಯನ್ನು ೯ಗಂಟೆವರೆಗೆ ಬೆಳಗುತ್ತಿದ್ದವು.  ಆಸ್ಥಾನ ವಿದ್ವಾಂಸರು ಮಾಂಡಲೀಕರು ಬಂಧುಮಿತ್ರರು ಸಖಿಸೈನಿಕರು ಮುಂತಾದವರ ಉಪಸ್ಥಿತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ರಾಜದರ್ಬಾರು ಜಬರ್ರಾಗಿ ಜರುಗುತ್ತಿತ್ತು.  ೧೯೭೦ವರೆಗೂ ಜಂಬೂಸವಾರಿ ಮೆರವಣಿಗೆ ಚಿನ್ನದಂಬಾರಿಯೊಳಗೆ ಮುಂದುಗಡೆ ಮಹಾರಾಜರು ಹಿಂದುಗಡೆ ಅವರ ಸೋದರಮಾವ ಕುಳಿತಿರುತ್ತಿದ್ದರು. ಅನಿರೀಕ್ಷಿತವಾಗಿ ೧೯೭೧ರಿಂದ ಕೇಂದ್ರಸರ್ಕಾರವು ರಾಜದರ್ಬಾರ್ ರದ್ದುಪಡಿಸಿ ಮಹಾರಾಜರನ್ನು ಶ್ರೀಸಾಮಾನ್ಯನೆಂದು ಪರಿಗಣಿಸಿ ರಾಜಧನ ಜಾರಿಗೊಳಿಸಿ ರಾಜಪ್ರಭುತ್ವದ ಆಳ್ವಿಕೆ ಮುಗಿಸಿತು!  ೧೯೭೨ರಿಂದ ಪ್ರಜಾಪ್ರಭುತ್ವದ ಜನತಾದಸರ ಪ್ರಾರಂಭವಾಗಿ ರಾಜ್ಯಸರ್ಕಾರದ ಜಂಬೂಸವಾರಿ ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ಅಂಬಾರಿ, ಮೇಯರ್ ಕುದುರೆಸವಾರಿ, ರಾಜಕಾರಣಿಗಳ ತಂಡ, ಟ್ಯಾಬುಲೊ, ಗೋಲ್ಡನ್/ಸಿಲ್ವರ್‌ಕಾರ್ಡ್, ವಿ.ಐ.ಪಿ.ಟಿಕೆಟ್, ಲೈವ್‌ಟೆಲಿಕಾಸ್ಟ್ ವೀಕ್ಷಕವಿವರಣೆ, ಮುಂತಾದ ಅ[ನಾ]ವಶ್ಯಕತೆಗಳು ಸೇರಿಸಲ್ಪಟ್ಟವು? ಹತ್ತುದಿನ ಪರ್ಯಂತ ಮೈಸೂರುನಗರವು ಮದುಮಗನಂತೆ ಸಿಂಗಾರಗೊಂಡು ನೋಡುಗರ ಕಣ್ಮನ ಸೂರೆಗೊಳ್ಳುವಂತೆ ಇರುತ್ತದೆ.   

Dasara, the day the world comes to Mysuru to live its dream

ಸ್ತುಪ್ರದರ್ಶನ:- ಎಲ್ಲರ ಅಚ್ಚುಮೆಚ್ಚಿನ ದಸರಾ ವಸ್ತುಪ್ರದರ್ಶನ ಪ್ರತಿವರ್ಷ ಸುಮಾರು ೩-೪ ತಿಂಗಳು ಇರುತ್ತದೆ.  ಬೆಳಗ್ಗೆ ೧೧ಗಂಟೆಯಿಂದ ಪ್ರಾರಂಭವಾದರೂ ಜನಜಂಗುಳಿಯಿಂದ ಕಳೆಕಟ್ಟುವುದು ಮಧ್ಯಾಹ್ನದ ನಂತರ. ಸಂಜೆಗತ್ತಲಲ್ಲಿ ಸಡಗರ ಪ್ರತಿಬಿಂಬಿಸುವ ರಂಗುರಂಗಿನ ದೀಪಾಲಂಕಾರ ಬಣ್ಣಬಣ್ಣದ ಉಡುಗೆತೊಡುಗೆ ಬಾಯಿಚಪ್ಪರಿಸುವಂಥ ತಿಂಡಿತಿನಿಸು ಕಣ್ಮನಸೆಳೆವ ವಸ್ತು-ವಸ್ತ್ರರಾಶಿ ಇವಕ್ಕೆಲ್ಲ ಪೂರಕವಾದಂತೆ ಕಲಾಕ್ಷೇತ್ರ್ರದ ಮನರಂಜನಾ/ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲ ವಯಸ್ಸಿನವರ ತನುಮನ ಸೆಳೆಯುತ್ತವೆ.

ಫಲಪುಷ್ಪಪ್ರದರ್ಶನ:- ಅಂಬಾವಿಲಾಸ ಅರಮನೆ ಪಕ್ಕದ ‘ಲಾರ್ಡ್‌ಕರ್ಜ಼ನ್’ ಪಾರ್ಕ್‌ನಲ್ಲಿ ೯-೧೦ದಿವಸ ಫಲಪುಷ್ಪ ಪ್ರದರ್ಶನವನ್ನು ಕರ್ನಾಟಕ ಸರ್ಕಾರ ತೋಟಗಾರಿಕಾ ಇಲಾಖೆ ಏರ್ಪಡಿಸಿರುತ್ತೆ. ತರಾವರಿ ಹಣ್ಣುಗಳ ಮತ್ತು ಹೂವುಗಳ ಪ್ರದರ್ಶನ-ಮಾರಾಟ ಇರುತ್ತದೆ. ಇದಕ್ಕೆ ಮೆರುಗು ನೀಡುವಂತೆ ಪ್ರತಿಸಂಜೆ ಹಳೇ-ಹೊಸಾ ಎರಡೂಬಗೆ ಆರ್ಕೆಷ್ಟ್ರಾ(ವಾದ್ಯಗೋಷ್ಥಿ) ನೃತ್ಯ ಸಂಗೀತ ಮುಂತಾದ ಆಕರ್ಷಣೀಯ ಮನರಂಜನಾ ಕಾರ್ಯಕ್ರಮ ಏರ್ಪಡಿಸಿರುತ್ತಾರೆ. ದಸರವೈಭವದ [ಪ್ರ]ದರ್ಶನಗಳು ವಿವಿಧ ದೇಶ ಭಾಷೆ ಜಾತಿ ಮತ ಪಂಡಿತ ಪಾಮರ ಮಗು ವೃದ್ಧ ಆದಿಯಾಗಿ ಪ್ರತಿಯೊಬ್ಬರನ್ನು ಕೈಬೀಸಿ ಕರೆಯುತ್ತವೆ. ರಾಷ್ಟ್ರಕವಿ ಕುವೆಂಪುರವರ ವಿಶ್ವಮಾನವ ಸಂದೇಶ ಸಾರುತ್ತವೆ!

ಕ್ರೀಡಾಸ್ಫರ್ಧೆ:- ಸಾವಿರಾರು ವರ್ಷದಿಂದ ಪ್ರಸಿದ್ಧವಾಗಿರುವ ಮೈಸೂರು ಜಂಗೀಕುಸ್ತಿ ಸಾಂಪ್ರದಾಯಿಕ ಕ್ರೀಡೆ ಸೇರಿದಂತೆ ಅನೇಕ ರೀತಿಯ ಆಟೋಟ ಸ್ಫರ್ಧೆಗಳು ಇರುತ್ತದೆ. ರಾಜ್ಯ ರಾಷ್ಟ್ರ ಅಂತರ್‌ರಾಷ್ಟ್ರ ಕ್ರೀಡಾಪಟುಗಳು ಪಾಲ್ಗೊಂಡು ದಸರಾಕೇಸರಿ, ದಸರಾಕುಮಾರ, ದಸರಾಶ್ರೀ ಕಪ್/ಟ್ರೋಪಿ/ಪ್ರಶಸ್ತಿಗಳಿಸಿ ಕ್ರೀಡಾಭಿಮಾನಿಗಳನ್ನು ಉಲ್ಲಾಸಪಡಿಸುವರು. ಇಲ್ಲಿವಿಜೇತರಾದ/ಗುರುತಿಸಿಕೊಂಡ ಅನೇಕ ಪ್ರತಿಭೆಗಳು ಪ್ರಖ್ಯಾತ ಕ್ರೀಡಾ ಪಟುವಾದ ಸಾವಿರಾರು ಉಧಾಹರಣೆಇವೆ.

ಲನಚಿತ್ರೋತ್ಸವ:- ನಗರ ಚಿತ್ರಮಂದಿರಗಳಲ್ಲಿ ಕಡಿಮೆ ಪ್ರವೇಶ ದರವಿದ್ದು [ವಿ]ದೇಶಗಳ ರಾಷ್ಟ್ರ-ಅಂತರ್ರಾಷ್ಟ್ರ ಪ್ರಶಸ್ತಿ ವಿಜೇತ ವಿವಿಧ ಭಾಷೆಯ ಜತೆಗೆ ಕನ್ನಡದ ಹಳೆ/ಹೊಸ ಚಲನಚಿತ್ರಗಳ ಪ್ರದರ್ಶನ ಇರುತ್ತದೆ. ಕೆಲವು ವರ್ಷದಿಂದ ಮಕ್ಕಳ ಚಿತ್ರೋತ್ಸವವನ್ನೂ ಆಯೋಜಿಸಲಾಗುತ್ತಿದೆ.  ಎ[ಗೆ]ಳೆಯರ ತನುಮನ ಮುದಗೊಳಿಸುವ, [ವಿ]ಜ್ಞಾನ ವೃದ್ಧಿಗೊಳಿಸುವ, ಚಲನಚಿತ್ರ ಪ್ರದರ್ಶನವಿರುತ್ತೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗುತ್ತೆ. ಆ ಮೂಲಕ ಕನ್ನಡದವರಿಗೆ ಇತರ ದೇಶ-ಜನ-ಸಂಸ್ಕೃತಿ-ನಾಗರಿಕತೆ ಪರಿಚಯವಾಗುತ್ತದೆ.  ಕನ್ನಡ ಚಿತ್ರೋದ್ಯಮಿಗಳಿಗೆ ಅನ್ಯಭಾಷೆ [ಪ್ರ]ದೇಶಗಳ ಚಿತ್ರನಿರ್ಮಾಣ ತಾಂತ್ರಿಕತೆಗಳ ಬಗ್ಗೆ ಅರಿವುಂಟಾಗುತ್ತೆ. ಭಾರತವು ವೈವಿಧ್ಯತೆಯಲ್ಲಿ ಏಕತೆ ಕಾಪಾಡಿಕೊಂಡಿದೆ ಎಂದು ಸಾಬೀತು ಪಡಿಸುವಂತೆ ಮತ್ತು ಚಿತ್ರರಸಿಕರ ತನುಮನ ಸೂರೆಗೊಳ್ಳುವಂತೆ ದಸರಾ ಚಲನ ಚಿತ್ರೋತ್ಸವ ಜರುಗುತ್ತದೆ.

ಯುವದಸರ:- ಎಲ್ಲರಿಗಾಗಿಒಬ್ಬರು-ಒಬ್ಬರಿಗಾಗಿಎಲ್ಲರೂ ನಾಣ್ಣುಡಿಗೆ ಒತ್ತುಕೊಡುವಂತೆ ಯುವದಸರಾ ಕಾರ್ಯಕ್ರಮಗಳು ಆರಂಭಗೊಂಡವು. ಹೊಸ ಪ್ರತಿಭೆಗಳನ್ನು ಗುರ್ತಿಸಲು ವೇದಿಕೆಯಾಗಿದೆ. ಯುವಪೀಳಿಗೆಗೆ ಮೀಸಲಾದ ಇಲ್ಲಿ ನವಯುವಕರು ವಿಶೇಷವಾಗಿ ಕಾಲೇಜು ವಿದ್ಯಾರ್ಥಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಸಾರ್ಥಕತೆ ಪಡೆಯುತ್ತಾರೆ.  ಕಲೆ ಸಾಹಿತ್ಯ ನಟನೆ ನಾಟ್ಯ ಮುಂತಾದ ನೂರಾರು ವಿಭಾಗದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಯಶಸ್ವಿಯಾಗುತ್ತಾರೆ. ಯುವಕರಲ್ಲಿ ಭಾರತೀಯ[ಐಕ್ಯ]ತೆ ಮೈಗೂಡಿಸಿಕೊಳ್ಳಲು ನೆರವಾಗುವಂಥ ವಿಚಾರ ಸಂಕಿರಣ, ವಿಶೇಷ ಉಪನ್ಯಾಸ ಇತ್ಯಾದಿ ಶೈಕ್ಷಣಿಕ, ಸಾಂಸ್ಕೃತಿಕ ಮೂಲದ ಸರ್ವಭಾಷಾ ಗೋಷ್ಠಿಗಳು ಇರುತ್ತವೆ. ಈ ಮೂಲಕ ಅನೇಕ ಯುವ ಪ್ರತಿಭೆಗಳು ಹೊರಬಂದು ರಾಷ್ಟ್ರ-ಅಂತರ್‌ರಾಷ್ಟ್ರ ಮಟ್ಟದ ಸ್ಫರ್ಧೆಯಲ್ಲಿ ಭಾಗವಹಿಸಿ ನಾಡಿಗೆ ಕೀರ್ತಿ ತಂದಿರುವ ಉಧಾಹರಣೆಗಳಿವೆ.

ಸರ್ಕಸ್:- ಎಲ್ಲ ವಯಸ್ಸಿನವರನ್ನೂ ಆಕರ್ಷಿಸಿ ಖುಷಿ ಕೊಡುವ ಸಹಜ ಕಲಾವಿದರ ನೈಜ ಪ್ರದರ್ಶನವೆ ಸರ್ಕಸ್!  ಇದೊಂದು ಅಧ್ಭುತ ಚಾಕ ಚಕ್ಯತೆಯ ಸಾಹಸ ಗಾಥೆ! ಇಂಥ ಮನರಂಜನೆ ಆಟದಿಂದ ನೂರಾರು ಮನುಷ್ಯ/ಪ್ರಾಣಿ/ಪಕ್ಷಿಗೆ ಸಾಕಷ್ಟು ನೋ[ನಲಿ]ವು ಇರುತ್ತದೆ.  ಕೆಲವು ವ್ಯಾಯಾಮಗಳು ಅಚ್ಚರಿಗೊಳಿಸಿದರೂ ಇನ್ನುಕೆಲವು ಉಸಿರುಕಟ್ಟಿಸುತ್ತವೆ.  ಪ್ರತಿವರ್ಷ ಮೊಕ್ಕಾಂ ಹೂಡುತ್ತಿದ್ದ ಕಮಲ/ಜೆಮಿನಿ/ರಾಜಾ ಸರ್ಕಸ್ ಕಂಪನಿಗಳು ಅವಸಾನದತ್ತ ಸಾಗಿ ೨/೩ ವರ್ಷಕ್ಕೊಮ್ಮೆ/ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುತ್ತಿವೆ. ಭವಿಷ್ಯದಲ್ಲಿ ಪೂರ್ಣ ಮಾಯವಾಗುವುದರಲ್ಲಿ ಸಂಶಯವಿಲ್ಲ.  ಆ ಕಾಲದಲ್ಲಿ ಪ್ರಾಣಿ-ಮನುಷ್ಯರ ಸಾಹಸ ಕ[ವ್ಯ]ಥೆ ಎದ್ದು ಕಾಣುತ್ತಿತ್ತು, ಈ ಕಾಲದಲ್ಲಿ ಸಾಹಸಿ ಮನುಷ್ಯರಿಲ್ಲ ಪ್ರಾಣಿಯಂತೂ ಇಲ್ಲವೇ ಇಲ್ಲ.  ಆಧುನಿಕತೆ ಹೆಸರಲ್ಲಿ ಯಂತ್ರ-ತಂತ್ರ-ಮಂತ್ರದ ಢೋಂಗಿ ಪ್ರದರ್ಶನ ನೀಡುತ್ತಾರೆ.  ಆದ್ದರಿಂದ ಅಂದಿನ ಸರ್ಕಸ್ ನವರಸ! ಇಂದಿನ ಸರ್ಕಸ್ ನೀರಸ?

ಬೊಂಬೆಕೂರಿಸುವುದು ಮುಂತಾದ ಮಹಿಳೆ-ಮಕ್ಕಳ ವಿಶೇಷ [ಪ್ರ]ದರ್ಶನ:- ಮೈಸೂರು ನಗರದಲ್ಲಿ ಮಾತ್ರವಲ್ಲದೆ ಹಳೇ ಮೈಸೂರು ರಾಜ್ಯದ ಎಲ್ಲ ಭಾಗದಲ್ಲು ಮನೆಮನೆಯಲ್ಲಿ ದಸರಾಬೊಂಬೆ ಕೂರಿಸುವ ಸಂಪ್ರದಾಯ/ಪದ್ಧತಿ ಇವತ್ತಿಗೂ ರೂಢಿಯಲ್ಲಿದೆ! ಪ್ರತಿಯೊಂದು ಮನೆಯಲ್ಲು ವಿಶೇಷತೆ ಎದ್ದು ಕಂಡು ಕಣ್ಮನ ಸೆಳೆಯುತ್ತದೆ. ಮಹಿಳಾ ವಿಶೇಷದ ಮೋಟಾರ್ ಕಾರ್ ರೇಸ್, ಕುದುರೆ ರೇಸ್, ಕರಕುಶಲ/ಲಲಿತ/ ರಂಗೋಲಿ/ಕುಂಚ/ಚಿತ್ರ/ಕಲಾ/ಪ್ರತಿಭಾ ಪ್ರದರ್ಶನ/ಸ್ಫರ್ಧೆ ಇರುತ್ತದೆ! ಸೌಂದರ್ಯಸ್ಪರ್ಧೆ [ಮಿಸ್‌ದಸರಾ,ಮಿಸೆಸ್‌ದಸರಾ,ಇತ್ಯಾದಿ] ನಾಡಕ್ರೀಡೆ,  ಸ್ಥಳೀಯಕ್ರೀಡೆ, ಗ್ರಾಮೀಣಕ್ರೀಡೆ-ಸ್ಪರ್ಧೆ ನಾಟಕ, ನೃತ್ಯ, ಸಂಗೀತ, ಗಾಯನ, ವಾದನ, ಜಾನಪದ, ಮುಂತಾದ ಗೋಷ್ಠಿ/ಸ್ಫರ್ಧೆ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಎಂಥವರನ್ನೂ ಆಕರ್ಷಿಸುತ್ತೆ.  ಚಿಣ್ಣರಿಗೆ ಮೀಸಲಿರುವ ಮಕ್ಕಳಲೋಕ, ಬಾಲೋದ್ಯಾನ, ಮಿನಿಆಟೋಟ ಸ್ಪರ್ಧೆ, ಬುದ್ದಿಗೆಗುದ್ದು, ಜ್ಞಾಪಕಶಕ್ತಿ, ಸಾಮಾನ್ಯಜ್ಞಾನ ಪ್ರದರ್ಶನ/ಸ್ಫರ್ಧೆ/ಪರೀಕ್ಷೆ ಮುಂತಾದವು ಪುಟಾಣಿಗಳಿಗೆ ಅದ್ಭುತ ಮನರಂಜನೆ ನೀಡಿ ಅರೆಕ್ಷಣ ಆನಂದಲೋಕಕ್ಕೆ ಕರೆದೊಯ್ಯುತ್ತದೆ.  ಇಡೀ ಕುಟುಂಬಕ್ಕೆ ಅಪರೂಪದ ಅಪರಿಮಿತ ಆನಂದ ನೀಡುತ್ತದೆ.   

ದಸರಾ ಸುತ್ತಮುತ್ತ

ಸಹಾಯವಾಣಿ/ಧರ್ಮಛತ್ರ:- ದಸರಾ ಉತ್ಸವಕ್ಕೆ ವಿಶ್ವದಾದ್ಯಂತದಿಂದ ಬರುವ ಪ್ರವಾಸಿಗರನ್ನು ಅತಿಥಿದೇವರು ಎಂದು ಸತ್ಕರಿಸುವವರು, ಪ್ರತಿಯೊಬ್ಬ ಯಾತ್ರಿಕರನ್ನು ಪ್ರೀತಿವಿಶ್ವಾಸ ಗೌರವಾದರಗಳಿಂದ ಕಂಡು ಸಚ್ಚಾರಿತ್ರ್ಯದ ಸಂಪ್ರದಾಯಕ್ಕೆ ಚ್ಯುತಿಬಾರದಂತೆ ಎಚ್ಚರವಹಿಸುವವರು, ಟಾಂಗ ಆಟೊರಿಕ್ಷ ಟ್ಯಾಕ್ಸಿ ಬಸ್ ಡ್ರೈವರ್-ಗೈಡ್ ಆದಿಯಾಗಿ ಪ್ರತಿಯೊಬ್ಬರು ಸುಸಂಸ್ಕೃತರಾಗಿ ವರ್ತಿಸುವವರು, ದಸರಾ ವೀಕ್ಷಣೆಗೆ ಬಂದವರು ವಿ(ಸ್ವ)ದೇಶಿ ಯಾರೇಇರಲಿ ಅದರಲ್ಲೂ ಮಹಿಳಾಪ್ರವಾಸಿಗರನ್ನು ಮಾತೆ/ಸೋದರಿಯಂತೆ ಭಾವಿಸಿ ಶೋಷಣೆಮಾಡದೆ ಜವಾಬ್ಧಾರಿ ನಾಗರಿಕರಂತೆ ನಡೆದುಕೊಳ್ಳುವವರು, ಅರಮನೆಗಳ ನಗರದ ಮೈಸೂರಿಗರ ಬಗ್ಗೆ ಇರುವ ಗೌರವ ನಂಬಿಕೆ ಉಳಿ[ಬೆಳೆ]ಸಿಕೊಳ್ಳುವವರು, ಇವತ್ತಿಗೂ ಇದ್ದಾರೆ. ಅನೇಕ ಸರ್ಕಾರಿ-ಖಾಸಗಿ ಸಹಾಯವಾಣಿ, ಮಾರ್ಗದರ್ಶನ, ಊಟವಸತಿ, ಕೇಂದ್ರ[ಧರ್ಮಛತ್ರ]ಗಳು ಇವೆ?!

ಪ್ರೇಕ್ಷಣೀಯಸ್ಥಳ:- ಮೈಸೂರಿನಲ್ಲಿರುವ ೯ಅರಮನೆಗಳು; ಅಂಬಾವಿಲಾಸಪ್ಯಾಲೆಸ್ ಜಗನ್ಮೋಹನಪ್ಯಾಲೆಸ್ ವಸಂತಮಹಲ್ ಲಲಿತಮಹಲ್ ಚಿತ್ತರಂಜನಮಹಲ್ ಜಯಲಕ್ಷ್ಮಿವಿಲಾಸ ರಾಜೇಂದ್ರವಿಲಾಸ ಚೆಲುವಾಂಬವಿಲಾಸ ಅಲೋಕ! ಇದಲ್ಲದೆ ಪ್ರಖ್ಯಾತ ಸಂತಫಿಲೋಮಿನಚರ್ಚ್ ಚಾಮರಾಜೇಂದ್ರಮೃಗಾಲಯ,ರೇಷ್ಮೆಕಾರ್ಖಾನೆ,ಗಂಧದಣ್ಣೆಕಾರ್ಖಾನೆ,ರೈಲುಮ್ಯೂಸಿಯಂ,ಪ್ರೀಮಿಯರ್‌ಸ್ಟುಡಿಯೊ, ಇಂದಿರಾಗಾಂಧಿ ರಾಷ್ಟ್ರೀಯ ಮಾನವಸಂಗ್ರಹಾಲಯ, ಮೈ.ವಿ.ವಿ, ಕ.ರಾ.ಮು.ವಿ., ಗಂಗೂಬಾಯಿಹಾನಗಲ್‌ಸಂಗೀತ ವಿ.ವಿ, ಜೆಎಸ್‌ಎಸ್‌ವಿ.ವಿ, ಪ್ರಜಾಪಿತಬ್ರಹ್ಮಕುಮಾರಿವಿ.ವಿ, ಇನ್ಫೋಸಿಸ್ ಚಾಮುಂಡಿಬೆಟ್ಟ-ನಂದಿ, ನಂಜನಗೂಡು ಶ್ರೀರಂಗಪಟ್ಟಣ ಕೃಷ್ಣರಾಜಸಾಗರ ರಂಗನತಿಟ್ಟುಪಕ್ಷಿಧಾಮ ಶಿವನಸಮುದ್ರ-ಗಗನಚುಕ್ಕಿ ಭರಚುಕ್ಕಿ ಜಲಪಾತ ಮುಂತಾದ ಪ್ರವಾಸಿ ತಾಣಗಳು ನೋಡಲೇಬೇಕಾದವು!

Kamat Research Database - Mysore Dasara Procession
[ಉಪ]ಸಮಿತಿಗಳ ಉದ್ಘಾಟನೆ:- ಹೆಲಿಕಾಪ್ಟರ್‌ಬಳಸಿ ಕೇವಲ೪ಗಂಟೆಯೊಳಗೆ ಮುಖ್ಯಮಂತ್ರಿ ಜಿಲ್ಲಾಉಸ್ತುವಾರಿಮಂತ್ರಿ ಪ್ರವಾಸೋದ್ಯಮ ಮಂತ್ರಿ ಕನ್ನಡಸಂಸ್ಕೃತಿಮಂತ್ರಿ ಸೇರಿ, ಅಂದಾಜು ೪ಡಜ಼ನ್[ಮರಿ]ಸಚಿವರು ಹಾಗೂ[ಉಪ]ಸಮಿತಿ ಪದಾಧಿಕಾರಿಗಳು ಡಜ಼ನ್‌ಗಟ್ಟಲೆ ಸರಣಿ ಉದ್ಘಾಟನ ಕಾರ್ಯಕ್ರಮ ಮುಗಿಸಿ ತಂತಮ್ಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ನೂರಾರು ದಸರಾ[ಉಪ]ಸಮಿತಿ ಅಸ್ತಿತ್ವಕ್ಕೆ ಬರುತ್ತವೆ. ಯಾವುದೆ ವಿಭಾಗದ [ಉಪ]ಸಮಿತಿಗೆ ಸೇರ್ಪಡೆಯಾಗಲು ಅಥವಾ ಗೋಷ್ಠಿಯಲ್ಲಿ ಭಾಗವಹಿಸಲು ಉನ್ನತಮಟ್ಟದ ಶಿಫಾರಸ್ಸು ಬೇಕೇಬೇಕು? ಏಕೆಂದರೆ, ರಾಮ[ಕೃಷ್ಣ]ನ ಲೆಕ್ಕ ತೋರಿಸಿ ಆರ್ಥಿಕ ಸ್ವಅಭಿವೃದ್ಧಿ ಪಡಿಸಿಕೊಳ್ಳಲು, ಅನರ್ಹರೂ ಅರ್ಹತಾಪತ್ರ ಪಡೆಯಲು ಅಥವಾ ‘ದಸರಾ[ಸ್ವಾರ್ಥ]ಶ್ರೀ’ ಪ್ರಶಸ್ತಿಗೆಲ್ಲಲು ಇದು ಸುವರ್ಣಾವಕಾಶ.  ಯಾರ್ದೊದುಡ್ಡು ಯಲ್ಲಮ್ಮನಜಾತ್ರೆ, ಬೆಂದಮನೇಲಿ ಇರಿದಷ್ಟೆಲಾಭ, ನಾಮುಂದು ತಾಮುಂದು ಲಾಭಿ, ಯಾರಖಾತೆಗೆಎಷ್ಟು ಒಂದೇರಾತ್ರಿ[ಅವೇಳೆ]ಯಲ್ಲಿ ತೀರ್ಮಾನಿಸಿ ಸರ್ವರಿಗೂಸಮಪಾಲು ಮೀರದಂತೆ ಹಂಚಿಕೊಳ್ಳುವರು, ಅ-ನ್ಯಾಯ ಅ-ನೀತಿ ಅ-ಧರ್ಮ ಅ-ಪ್ರಾಮಾಣಿಕತೆ ಕಾಪಾಡಿಕೊಳ್ಳುವರು?ಇಂಥ ಅ-ಶಿಸ್ತಿನಸಿಪಾಯಿಗಳಿಗೆ ಅ-ಮಾನುಷಶಕ್ತಿಗಳಿಗೆ ಜೈಅನ್ನೋಣ? ಪಾ[ಪಿ]ಪ!

ಗಂಡುಭೇರುಂಡ-ಕರ್ನಾಟಕ:-೧೩೯೯-೧೯೪೭ವರೆಗೆ ಯದುಕುಲದ ೨೬ಮಹಾರಾಜರು ಗಂಡುಭೇರುಂಡ ಲಾಂಛನದಿಂದ ಮೈಸೂರು ಸಾಮ್ರಾಜ್ಯ ಆಳಿದರು. ಸಂಸ್ಥಾನ-ಪ್ರಾಂತ್ಯವಾಗಿತ್ತು, ೯ಜಿಲ್ಲೆಗಳ ಮೈಸೂರುರಾಜ್ಯ ೨೬-೧-೧೯೫೦ರಲ್ಲಿ ಭಾರತದ ರಾಜ್ಯಗಳ ಪುನರ್ ವಿಂಗಡಣೆ ಆದಾಗ ೧.೧೧.೧೯೫೬ರಲ್ಲಿ ೧೮ಜಿಲ್ಲೆಗಳಿಂದ ವಿಶಾಲಮೈಸೂರುರಾಜ್ಯ(ನ್ಯೂಮೈಸೂರ್‌ಸ್ಟೇಟ್) ಉದಯವಾಯ್ತು. ಮುಖ್ಯಮಂತ್ರಿ ಡಿ.ದೇವರಾಜಅರಸು ಕಾಲದಲ್ಲಿ ದಿ.೧.೧೧.೧೯೭೩ರಿಂದ ಕರ್ನಾಟಕ ರಾಜ್ಯ ಎಂದು ಪುನರ್‌ನಾಮಕರಣಗೊಂಡಿತು.

ಯದುವನ/ಮಧುವನ:- ನಗರದ ದಕ್ಷಿಣಕ್ಕೆ ನಂಜನಗೂಡು ರಸ್ತೆಬಳಿ ರಾಜಕುಟುಂಬಕ್ಕೆ ಮೀಸಲಾದ ಸ್ಮಶಾನವಿದೆ. ಪ್ರಾರಂಭಕ್ಕೆ ಯದುವನ/ ಮನುವನ ಎಂದಿದ್ದುದು ಕಾಲಕ್ರಮೇಣ ಮಧುವನವೆಂದಾಯ್ತು? ಇದರ ಪಕ್ಕದಲ್ಲೆ ಸಾರ್ವಜನಿಕ ಸ್ಮಶಾನವಿದೆ. ಇವೆರಡರಮಧ್ಯೆ ಸತ್ಯಹರಿಶ್ಚಂದ್ರ ಮತ್ತು ಸ್ಮಶಾನರುದ್ರನ ದೇವಾಲಯಗಳಿದ್ದು, ಹೊಂದಿಕೊಂಡಂತೆ ಅನೇಕ ದೇವಸ್ಥಾನ-ಮಠಗಳೂ ಇವೆ. ಸಾಮಾನ್ಯವಾಗಿ ಭಾರತ/ಕರ್ನಾಟಕ ರಾಜ-ಮಹಾರಾಜರ ಸಮಾಧಿಗಳು ಸ್ಮಾರಕವಾಗಿರುವುದು ಸತ್ಯ? ಆದರೆ ಮೈಸೂರು ದೊರೆಗಳ ಮಧುವನ ಕಡೆಗಣಿಸಲ್ಪಟ್ಟಿದೆ. ರಾಜ ಕುಟುಂಬದವರಾಗಲೀ ರಾಜಕಾರಣಿಗಳಾಗಲೀ ಇತ್ತ ಗಮನಹರಿಸದೆ ಕಾಗೆಗೂಬೆಗಳ ನೆಲೆಬೀಡಾಗಿದ್ದು ಮೈಸೂರು ನಾಗರಿಕರಾದಿ ಎಲ್ಲರೂ ವಿಷಾದ ಪಡುವಂತಾಗಿದೆ. ಈಗಲಾದರೂ ಮಧುವನದ ನಿರ್ವಹಣೆ ಜವಾಬ್ಧಾರಿಯನ್ನು ಸಂಬಂಧಪಟ್ಟವರು ತೆಗೆದುಕೊಳ್ಳುವರೇ? ೧೦.೧೧.೨೦೧೩ ರಂದು ವಿಧಿವಶರಾದ ಯದುವಂಶದ ಕೊನೆಯಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಂತಿಮ ಸಂಸ್ಕಾರವು ಮಧುವನದಲ್ಲಿ ಜರುಗಿದಾಗ ಅದರ ಅವನತಿ ಕಂಡು ಹಿರಿತಲೆಗಳು ಮಮ್ಮಲ ಮರುಗಿ ಕಣ್ಣೀರು ಸುರಿಸಿದರು!  ಶ್ರೀರಂಗಪಟ್ಟಣದ ಹೈದರಾಲಿ-ಟಿಪ್ಪುಸುಲ್ತಾನ್ ಗೋರಿಗಳ ಗುಂಬಜ಼್ ತರಹವೇ ಮೈಸೂರು ಮಹಾರಾಜರುಗಳನ್ನು ನೆನಪಿಸುವ ಸಮಾಧಿಗಳನ್ನು ಇಲ್ಲಿ ನಿರ್ಮಿಸಿ ಪ್ರತಿಯೊಂದಕ್ಕು ಮಾಹಿತಿ ಫಲಕ ಹಾಕಿ ಐತಿಹಾಸಿಕ ಸ್ಮಾರಕವನ್ನಾಗಿಸಲಿ! ಇದು ಯಾರಹೊಣೆ ಎಂಬುದೆ ಯಕ್ಷಪ್ರಶ್ನೆ?

                                 

 ಕುಮಾರಕವಿ ನಟರಾಜ್[೯೦೩೬೯೭೬೪೭೧]

        ಬೆಂಗಳೂರು-೫೬೦೦೭೨