ಗಣರಾಜ್ಯೋತ್ಸವ ನಿಮಿತ್ತ ದೇಶಭಕ್ತಿ ಹಾಗೂ ರಾಷ್ಟ್ರ ನಿರ್ಮಾಣದ ಭಾಗವಾಗಿ ಪರಿಸರ ಸ್ನೇಹಿ ತಂಡ ಮತ್ತು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ನಮ್ಮ ಸಂವಿಧಾನ- ಅಭಿವೃದ್ಧಿಗೆ ಸೋಪಾನ ಭಾರತದ ಸಂವಿಧಾನ ಕುರಿತು 8ವರ್ಷದಿಂದ 18ವರ್ಷದ ಯುವಕ ಯುವತಿಯರಿಗೆ   ಆನ್ ಲೈನ್ ಭಾಷಣ ಸ್ಪರ್ಧೆಯಲ್ಲಿ 3ನಿಮಿಷದ ವಿಡಿಯೋಗಳನ್ನು ಸಂಘಟನೆಯ ಸದಸ್ಯರುಗಳಿಗೆ ಕಲಿಸುವ ಮೂಲಕ 80ಯುವಕ ಯುವತಿಯರು ಭಾಗಿಯಾಗಿದ್ದರು ಸ್ಪರ್ಧೆಗಳ ಭಾಷಾಶೈಲಿ, ಸಂವಹನ ಕೌಶಲ್ಯ, ಸ್ಪಷ್ಟತೆಯ ಆಧಾರದ ಮೇಲೆ 

ಚಾಮುಂಡಿಪುರಂ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆ ಸಲಾಯಿತು.

ಬಹುಮಾನ ವಿತರಿಸಲಾಯಿತು ವಿಜೇತರಾದ ಮೊದಲನೇ ಬಹುಮಾನ ಸರಗೂರಿನ  ವಿದ್ಯಾರ್ಥಿ  ಚಿನ್ಮಯಿ ದ್ವಿತೀಯ ಬಹುಮಾನ ಕೆ ಆರ್ ನಗರದ ಸುಚಿತ್ರ ತೃತೀಯ ಬಹುಮಾನ ಮೈಸೂರಿನ ದೀಪಾ ನಗರದ  ಅರ್ಜುನ್ ಎಂ ಸಮಾಧಾನಕರ ಬಹುಮಾನ ಪಿರಿಯಾಪಟ್ಟಣದ ಅಪೂರ್ವ

ವಿಜೇತರಿಗೆ ಟ್ರೋಫಿ ಹಾಗೂ ಭಾಗವಹಿಸಿದ ಇತರೆ ಎಲ್ಲ 80 ಮಂದಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ  ವಿತರಿಸಲಾಯಿತು.

ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದ 

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡಿಕೇರಿ ಗೋಪಾಲ್  ಅವರು, ಗಣರಾಜ್ಯೋತ್ಸವ ಪ್ರಯುಕ್ತ 8ರಿಂದ 18 ವರ್ಷದೊಳಗಿನ ಯುವ ಜನರಿಗೆ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರ ನಗದು  ಬಹುಮಾನ ರೂಪದಲ್ಲಿ  ನೇರವಾಗಿ ಕ್ರಮವಾಗಿ 3,000 ರೂ., 2,000 ರೂ. ಹಾಗೂ 1,000 ರೂ. ನಗದು ಬಹುಮಾನ ವಿತರಿಸಲಾಯಿತು 

ಕೌಶಲ, ನಾಯಕತ್ವ ಪ್ರದರ್ಶಿಸಲು ಯುವಕರಿಗೆ ಅವಕಾಶ ಒದಗಿಸುವುದು ಹಾಗೂ ರಾಷ್ಟ್ರ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದು ಭಾಷಣ ಸ್ಪರ್ಧೆಯ ಉದ್ದೇಶವಾಗಿದೆ. ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

‘ಸಂವಿಧಾನದ ಆಶಯದಿಂದ ಪ್ರಗತಿ’

ಸಮಾನತೆ, ಭ್ರಾತೃತ್ವ ಮತ್ತು ಜಾತ್ಯಾತೀತ ರಕ್ಷಿಸುವುದು ಸಂವಿಧಾನದ ಮುಖ್ಯ ಆಶಯವಾಗಿದೆ. ಇವುಗಳು ಸಂಪೂರ್ಣ ಜಾರಿಗೆ ಬಂದಲ್ಲಿ ಮಾತ್ರ ದೇಶ ಪ್ರಗತಿಪಥದಲ್ಲಿ ಮುನ್ನಡೆಯಲು ಸಾಧ್ಯ ಎಂದು

 ಹೇಳಿದರು 

ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರಾದ ಡಾಕ್ಟರ್ ವೈ ಡಿ ರಾಜಣ್ಣ 

ಸಂವಿಧಾನದ ಆಶಯ ಈಡೇರಿಸಿ ಸಮಪಾಲು, ಸಮಬಾಳು ಆಶಯದೊಂದಿಗೆ ಜಾತ್ಯತೀತ ಪರಿಕಲ್ಪನೆ, ಸಮಾನತೆ ಹಾಗೂ ಮೂಲಭೂತ ಹಕ್ಕು ನೀಡಿರುವ ಸಂವಿಧಾನ ಗೌರವಿಸುವ ಮೂಲಕ ಅದರ ಆಶಯಗಳಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ರೂಪುಗೊಂಡ ಬಗೆ ಮತ್ತು ಭಾರತೀಯ ಸಂವಿಧಾನದ ರೂಪುರೇಷೆ, ವೈಶಿಷ್ಟ್ಯ ಕುರಿತು ಮಾಹಿತಿ ನೀಡಿದ ಅವರು, ಜಗತ್ತಿನಲ್ಲಿಯೇ ಶ್ರೇಷ್ಠ ಲಿಖಿತ ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ನಾಯಕತ್ವದಲ್ಲಿ ಅತ್ಯುತ್ತಮ ಸಂವಿಧಾನ ರಚಿಸಲಾಯಿತು. ಜ.26 ಪ್ರತಿಯೊಬ್ಬ ಭಾರತೀಯನ ಹೆಮ್ಮೆ ದಿನ. ಅಂತೆಯೇ ಮತದಾನದ ಜಾಗೃತಿ ಮೂಡಿಸಲು ಜ.25ರಂದು ಆಚರಿಸುವ ರಾಷ್ಟ್ರೀಯ ಮತದಾರರ ದಿನಾಚರಣೆ ಸಹ ಪ್ರಜಾಪ್ರಭುತ್ವದಲ್ಲಿ ಪ್ರಮುಖ ಎಂದರು.

ನಂತರ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಮಾತನಾಡಿ 

ಭಾರತೀಯ ಸಂವಿಧಾನಕ್ಕೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ನೀಡಿ ಜಗತ್ತೇ ಭಾರತದ ಸಂವಿಧಾನದತ್ತ ಹಿಂತಿರುಗಿ ನೋಡುವಂತೆ ಮಾಡಿದವರು ಡಾ.ಬಿ.ಆರ್.ಅಂಬೇಡ್ಕರ್. ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ ದೇಶಕ್ಕೆ ನಾವು ಏನು ಮಾಡಿದ್ದೇವೆ ಎನ್ನುವುದನ್ನು ಅರಿಯಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ,ಮಾಜಿ ಅಧ್ಯಕ್ಷರಾದ ಡಾ ವೈ ಡಿ ರಾಜಣ್ಣ ,ಕಾಂಗ್ರೆಸ್ ಯುವ ಮುಖಂಡ ಎನ್  ಎಂ ನವೀನ್ ಕುಮಾರ್ ,ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿ ಜಿ ಗಂಗಾಧರ್ , , ಚಕ್ರಪಾಣಿ,ರಾಕೇಶ್ ಕುಂಚಿಟಿಗ ,ಮಂಜುನಾಥ್ ,ಹಾಗೂ ಇನ್ನಿತರರು ಹಾಜರಿದ್ದರು