ಬೆಂಗಳೂರು: ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯಲು ಹಲವು ದಾನಿಗಳು ಮುಂದೆ ಬಂದಿದ್ದು, ನಿಗದಿತ ಶುಲ್ಕ ಪಾವತಿಸಿ ವಿವಿಧ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕರೆಗೆ ಓಗೊಟ್ಟಿರುವ ಹಲವು ಅಭಿಮಾನಿಗಳು ಕೊರೊನಾ ಸಂಕಷ್ಟಕಾಲದಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಸ್ವೀಕಾರ ಯೋಜನೆಯಡಿ ಮೃಗಾಲಯದ ಪ್ರಾಣಿ ಪಕ್ಷಿಗಳನ್ನು ನಿಗಧಿಪಡಿಸಿರುವ ಶುಲ್ಕವನ್ನು ಪಾವತಿಸಿ ದತ್ತು ಪಡೆದಿರುವುದರ ಬಗ್ಗೆ ಮೃಗಾಲಯದ ಅಧಿಕಾರಿಗಳು ದೃಢಪಡಿಸಿದ್ದಾರೆ.
ಇಂಡಿಯನ್ ಘೇಂಡಾಮೃಗ ಮತ್ತು ಬ್ಲಾಕ್ ಪ್ಯಾಂಥರ್ ಅನ್ನು ಮೈಸೂರಿನ ಬಯೋಟೆಕ್ ಪ್ರೈವೇಟ್ ಲಿಮಿಟೆಡ್, ಯಲ್ಲೋ ಗೋಲ್ಡನ್ ಫೆಸೆಂಟ್ ನ್ನು ಮೈಸೂರಿನ ಎಂ.ಮಮತಾ, ಮ್ಯಾಂಡರಿನ್ ಡಕ್ ನ್ನು ಮೈಸೂರಿನ ಸಮ್ಮತಿ ಪೂರ್ವ.ಪಿ, ಹಸಿರು ಅನಕೊಂಡವನ್ನು ಬೆಂಗಳೂರಿನ ಪ್ರದೀಪ್ ದೋಡಯ್ಯ, ಇಂಡಿಯನ್ ಗ್ರೇ ವುಲ್ಫ್ ಅನ್ನು ಮೈಸೂರಿನ ಸುಧಾಕರ್.ಪಿ, ಬಿಳಿ ನವಿಲನ್ನು ಹಾಸನದ ಮನು ಬಸವರಾಜು, ಗೋಲ್ಡನ್ ಫೆಸೆಂಟ್ ಮತ್ತು ರೆಡ್ ಲೋರಿ ಅನ್ನು ಮೈಸೂರಿನ ಮೋಹನ್.ಎ, ಕಾಮನ್ ಕೆರೆ ಹಾವನ್ನು ಮೈಸೂರಿನ ಅಭಿಜಿತ್ ಎ.ಪಿ.ಸಿ, ಕಾಮನ್ ವುಡ್ ಗೂಬೆ, ಬ್ರೌನ್ ವುಡ್ ಗೂಬೆ ಮತ್ತು ಮೊಟ್ಟೆಡ್ ವುಡ್ ಗೂಬೆ ಅನ್ನು ಮೈಸೂರಿನ ಶ್ರೀವತ್ಸ ದತ್ತು ಪಡೆದಿದ್ದಾರೆ.
ಇನ್ನು ಬಿಳಿ ನವಿಲನ್ನು ಬೆಂಗಳೂರಿನ ರಮ್ಯ ಜಿ.ಎಸ್, ಲವ್ ಬರ್ಡ್ ಅನ್ನು ಬೆಂಗಳೂರಿನ ಕಾವ್ಯಶ್ರೀ, ರೂಡ್ಡಿ ಶೆಲ್ ಡಕ್ ಅನ್ನು ಮೈಸೂರಿನ ವಿಜಯ್. ಬಿ., ಆನೆ (ಗಜಲಕ್ಷ್ಮಿ) ಅನ್ನು ಬೆಂಗಳೂರಿನ ದೇವಭಾಗ್ಯ ಫೌಂಡೇಶನ್, ಜೀಬ್ರಾ ಚಾಮರಾಜನಗರದ ಬಿ.ಜಿ.ಗ್ರಾನೈಟ್ಸ್, ನೀಲಿ ಮತ್ತು ಹಳದಿ ಮೆಕಾವ್ ಅನ್ನು ಮೈಸೂರಿನ ಸುಹಾಸ್ ಪಿ ಕೌಶಿಕ್, ನಾಗರ ಹಾವು ಮತ್ತು ಕಾಳಿಂಗ ಸರ್ಪವನ್ನು ಮೈಸೂರಿನ ಹಿಮಾವಂತ್ ಎಂ ಮೈಸೂರು, ಬ್ರೌನ್ ಕಪುಚಿನ್ ಅನ್ನು ಮೈಸೂರಿನ ಎಂ.ಎನ್.ವರದರಾಜ್ ಅಯ್ಯಂಗಾರ್, ಬಿಳಿ ನವಿಲು ಅನ್ನು ಮೈಸೂರಿನ ಪದ್ಮಿನಿ ವರದರಾಜ್ ಪಡೆದಿದ್ದಾರೆ.
ಮಣಿಪುರ ಡೀರ್ ಅನ್ನು ಮೈಸೂರಿನ ಪಿ.ಎಸ್.ಕೃಷ್ಣ ಮಣಿ, ಸಾಲ್ಮನ್-ಕ್ರೆಸ್ಟೆಡ್ ಕಾಕಟೂಅನ್ನು ಬೆಂಗಳೂರಿನ ತೇಜಸ್ವಿನ್ ಮತ್ತು ದಿವ್ಯ, ಚಿರತೆ ಬೆಕ್ಕುಅನ್ನು ಮೈಸೂರಿನ ಜಯಂತ್ ಕೃಷ್ಣ, ಮಲಬಾರ್ ಜೈಂಟ್ ಅಳಿಲು ಅನ್ನು ಮೈಸೂರಿನ ಹೆಚ್.ಕೆ. ಕಮಲ, ಚುಕ್ಕೆ ಜಿಂಕೆ ಅನ್ನು ಬೆಂಗಳೂರಿನ ಕಲ್ಪನ ದಿಲೀಪ್ ಷಾ, ಚಿರತೆ ಬೆಕ್ಕು ಅನ್ನು ಮೈಸೂರಿನ ರಘು ಆಚಾರ್, ಗ್ರೀನ್ ಅನಕೊಂಡವನ್ನು ಬೆಂಗಳೂರಿನ ಆರ್.ವೀರಪ್ಪ, ನಾಗರ ಹಾವುಅನ್ನು ಮೈಸೂರಿನ ಎಂ.ಆರ್.ಕುಮಾರಸ್ವಾಮಿ, ಬ್ಲಾಕ್ ಬಕ್ ಅನ್ನು ಮೈಸೂರು ಜಿಲ್ಲಾ ದರ್ಶನ್ ತೂಗುದೀಪ ಪೌರ ಕಾರ್ಮಿಕರ ಅಭಿಮಾನಿ ಸಂಘ, ಮೈಸೂರು, ಹುಲಿ (ರಾಕಿ) ಯನ್ನು ಬೆಂಗಳೂರಿನ ಸೌಂದರ್ಯ ಜಗದೀಶ್, ಹುಲಿ (ದರ್ಶನ್)ಅನ್ನು ಬೆಂಗಳೂರಿನ ಡಿ ಬೀಟ್ಸ್, ಆನೆ (ಕೊಳೆಗಾಲ) ಯನ್ನು ಬೆಂಗಳೂರಿನ ಆದಿ ಹರಿ ಅವರು ದತ್ತು ಪಡೆದಿರುವುದಾಗಿ ತಿಳಿಸಿದ್ದಾರೆ.