ಮೈಸೂರು-೮ ಚೆನೈನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿಯ ಈ ಸಾಲಿನ ಗೌರವ ಡಾಕ್ಟರೇಟ್ ಪದವಿಗೆ ಮೈಸೂರು ಮೆಡಿಕಲ್ ಸಿಸ್ಟಂನ ಶ್ರೀ ಎಸ್. ಪ್ರಭುಶಂಕರ ಭಾಜನರಾಗಿದ್ದಾರೆ.

ಇತ್ತೀಚಿಗೆ ನೆಡೆದ ಚೆನ್ನೆನ ಭಾರತೀಯ ವಿದ್ಯಾಭವನದ ಕೇಂದ್ರದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಭುಶಂಕರ ಅವರು ಚೆನ್ನೆನ ಲೋಕ್ ಅದಾಲತ್ ಹೈಕೋರ್ಟ್ನ ನ್ಯಾಯಮೂರ್ತಿ ಶ್ರೀ ಎಸ್.ಕೆ ಕೃಷ್ಣನ್ ಅವರಿಂದ ಗೌರವ ಡಾಕ್ಟರೇಟ್ ಆಫ್ ಬಿಜಿನೆಸ್ ಪಡೆದರು.ಪ್ರಭುಶಂಕರ ಅವರು ಕಳೆದ ೧೨ ವರ್ಷಗಳಿಂದ ಮೈಸೂರಿನಲ್ಲಿ ಮೈಸೂರು ಮೆಡಿಕಲ್ ಸಿಸ್ಟಂ ಮೂಲಕ ಶ್ವಾಸಕೋಶದ ಸಮಸ್ಯೆ ಇರುವ ರೋಗಿಗಳಿಗೆ ಬಳಸುವ ಯಂತ್ರಗಳಾದ ನೆಬಲೈಸರ್, ಪಲ್ಸ್ ಆಕ್ಸಿಮೀಟರ್, ಸಿಪಿಎಪಿ, ಬಿಐಪಿಎಪಿ, ಆಕ್ಸಿಜನ್ ಕಾನ್ಸನ್‌ಟ್ರೇಟರ್ ಹೀಗೆ ಅನೇಕ ವೈದ್ಯಕೀಯ ಉಪಕರಣಗಳನ್ನು ಆಸ್ಪತ್ರೆಗಳಿಗೆ ಇಲ್ಲವೆ ರೋಗಿಗಳಿಗೆ ಒದಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಆ ರೋಗಿಗಳ ಪಾಲಿನ ಬಂಧುವಿನ0ತೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಾಣಿಜ್ಯ ಮನೋಭಾವಕ್ಕಿಂತ ಸೇವಾ ಮನೋಭಾವನೆಯಿರಿಸಿ ಕೊಂಡಿರುವುದರಿ0ದಲೆ ಇವರ ಉದ್ಯಮ ಯಶಸ್ಸಿನತ್ತ ಶರವೇಗದಲ್ಲಿ ಸಾಗುತ್ತಿದೆ.ಇವರ ಈ ಔದ್ಯಮಿಕ ಸೇವೆಯನ್ನು ಪರಿಗಣಿಸಿ ಈಗಾಗಲೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ, ಗೌರವಿಸಿವೆ. ವಿಜಯ ಕರ್ನಾಟಕ ದಿನಪತ್ರಿಕೆಯ ವಿ.ಕೆ.ಸೂಪರ್ ಸ್ಟಾರ್, ಕರ್ನಾಟಕ ಎಮ್.ಎಸ್.ಎಮ್.ಈ. ಅವಾರ್ಡ್–೨೦೧೯ ಲಭ್ಯವಾಗಿದೆ. ಈ ಪ್ರಶಸ್ತಿಗೆ ಮೈಸೂರು ಜಿಲ್ಲೆಯಿಂದ ಇವರನ್ನು ಆಯ್ಕೆ ಮಾಡಿರುವುದು ಗಮನಾರ್ಹ. ಹಾಗೆಯೇ ಹಿಮಾಲಯ ಫೌಂಡೇಷನ್‌ನಿ0ದ ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ, ಯೋಗ ದಸರಾ ಕೇಸರಿ ಪ್ರಶಸ್ತಿ, ವಾಸುದೇವ ಮಹಾರಾಜ್ ಫೌಂಡೇಷನ್‌ನ ಶ್ರೀ ವಾಸುದೇವ ಮಹಾರಾಜ್ ಪ್ರಶಸ್ತಿ, ಭಾವೈಕ್ಯ ಪೀಠದಿಂದ ಶ್ರೀಬಸವ ಭಾವೈಕ್ಯ ಪ್ರಶಸ್ತಿ, ಜಗಜ್ಯೋತಿ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಬಸವ ಭೂಷಣ ಪ್ರಶಸ್ತಿ ಪ್ರಮುಖವಾದುವುಗಳು.ಇದೀಗ ಚೆನೈನಲ್ಲಿ ಉದ್ಯಮ ಕ್ಷೇತ್ರದ ಸಾಧನೆಗಾಗಿ ಗೌರವ ಡಾಕ್ಟರೇಟ್ ಆಫ್ ಬಿಸಿನೆಸ್‌ಗೆ ಭಾಜನರಾಗಿರುವುದು ವಿಶೇಷವಾಗಿದೆ.

By admin