ಮೈಸೂರು-27 ಪ್ರಗತಿ ಪರಿಶೀಲನಾ ಸಭೆಯನ್ನು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ 3ನೇ ಅಲೆಯನ್ನು ತಡೆಗಟ್ಟುವ ಕುರಿತು ಕಾರ್ಯಾಗಾರ ಏರ್ಪಡಿಸಲಾಯಿತು.ಕಾರ್ಯಕ್ರಮ ಉದ್ಘಾಟನೆಯನ್ನು ಸನ್ಮಾನ್ಯ ಜಿ.ಟಿ ದೇವೆಗೌಡರು,ಅಧ್ಯಕ್ಷರು ,ಕೆ.ಡಿ.ಪಿ ಸಭೆ ಮತ್ತು ಶಾಸಕರು,ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಮತ್ತು ಸನ್ಮಾನ್ಯ ಶ್ರೀ ಡಾ.ಯತೀಂದ್ರ ಸಿದ್ದರಾಮಯ್ಯ ಶಾಸಕರು ವರುಣಾ ವಿಧಾನಸಭಾ ಕ್ಷೇತ್ರ.ಇನ್ನಿತರ ವೈದ್ಯಾಧಿಕಾರಿಗಳು ಮತ್ತು ಗಣ್ಯರು ನೆರವೇರಿಸಿದರು. ಇದರ ವಿಚಾರವಾಗಿ ಮೂರನೇ ಅಲೆಯಲ್ಲಿ ಮಕ್ಕಳಿಗೆ ಕರೋನಾ ರೂಪಾಂತರ ವೈರಸ್ ಆದ ಮಿಸ್ಸಿಯಾ ಕಂಡುಬರುವುದಾಗಿದೆ.

ಇದು ಕರೋನಾ ಲಕ್ಷಣದ ಜೊತೆಗೆ ಪ್ರತ್ಯೇಕ ಲಕ್ಷಣಗಳನ್ನು ಒಳಗೊಂಡು ಹೆಚ್ಚಿನದಾಗಿ ಕಂಡುಬರುವ ಸಾಧ್ಯತೆ ಇದೆ ಹಾಗಾಗಿ ಪೋಷಕರು ಮಕ್ಕಳ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದರು.ಹಾಗೂ ಮಕ್ಕಳ ಲಾಲನೆ ಪಾಲನೆಯಲ್ಲಿ ತಂದೆ ತಾಯಿಯರ ಪ್ರೀತಿ ಕಾಳಜಿ ಹೆಚ್ಚಿರಬೇಕು ಜೊತೆಗೆ ತಾಯಿಯ ಎದೆಯ ಹಾಲು ಮಕ್ಕಳಿಗೆ ತುಂಬಾ ಒಳ್ಳೆಯದು ಹಾಗಾಗಿ ಆಗ ಹುಟ್ಟಿದ ಮಗುವಿಗೆ ಅಥವಾ ತಾಯಿಗೆ ಕರೋನಾ ಲಕ್ಷಣ ಬಂದಿದೆ ಎಂದು ಭಯಬಿದ್ದು ಎದೆಹಾಲು ಕುಡಿಸದಿರುವ ದಡ್ಡ ಕೆಲಸಮಾಡಬೇಡಿ ಅದರ ಬದಲು ತಾಯಿಹಾಲು ಕೊಡುವುದು ಮಕ್ಕಳಿಗೆ ಹೆಚ್ಚಿನ ರೋಗನಿರೋಧಕ ಶಕ್ತಿಗೆ ಕಾರಣವಾಗಿರುವುದರಿಂದ ತಾಯಿ ಎದೆಹಾಲು ಕುಡಿಸುವುದು ಅಗತ್ಯ ಮತ್ತುಉತ್ತಮ ಎಂದರು.

ಹಾಗೂ ಐದರಿಂದ ಹತ್ತರ ವಯಸ್ಸಿನ ಮಕ್ಕಳಿಗೆ ಶುಚಿತ್ವ ,ಉತ್ತಮ ಆಹಾರ ಪದ್ಧತಿಯನ್ನು ಹೊಂದುವ ರೀತಿ ನೋಡಿಕೊಳ್ಳಬೇಕೆಂದು ಇನ್ನೂ ಹೆಚ್ಚಿನ ಮಾಹಿತಿಯನ್ನು ಚೆಲುವಾಂಬ ಆಸ್ಪತ್ರೆಯ ಪ್ರೊಫೆಸರ್ ಆದ ಡಾ.ಸವಿತಾ ಅವರು ತುಂಬಾ ಸೂಕ್ಷ್ಮವಾಗಿ ಮಾಹಿತಿ ತಿಳಿಸಿದರು.
ನಂತರ ಮಾತನಾಡಿದ ಕೆ.ಎಚ್.ಪ್ರಸಾದ್(ಡಿ.ಎಚ್.ಒ)ಅವರು ಮೂರನೇ ಅಲೆಯಲ್ಲಿ ಮಕ್ಕಳ ಜೊತೆಗೆ ಪೋಷಕರಿಗೂ ಈ ಕರೋನಾ ರೂಪಾಂತರ ವೈರಸ್ ಲಕ್ಷಣ ಹೆಚ್ಚಿಗೆ ಕಂಡುಬರುವ ಸಾಧ್ಯತೆ ಇದೆ.ಈ ಹಿಂದೆ ಮಕ್ಕಳಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ.ಆದರೆ ಮುಂಬರುವ ದಿನಗಳಲ್ಲಿ ಯಾವ ರೀತಿಯ ಬದಲಾವಣೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಹಾಗಾಗಿ ಮಂದಾಲೋಚಿತವಾಗಿ ಎಚ್ಚರಿಕೆ ವಹಿಸುವುದು ಸೂಕ್ತ ಮತ್ತು ಆರೋಗ್ಯ ಇಲಾಖೆಯು ಸಹ ಇದಕ್ಕೆ ಮುಂಜಾಗ್ರತವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.ಈ ಕೋವಿಡ್ 19 ಮೂರನೇ ಅಲೆಯ ಮುಂಜಾಗ್ರತಾ ಮಾಹಿತಿಯ ನಂತರ ಮೈಸೂರು ತಾಲ್ಲೂಕಿನ ಎಲ್ಲಾ ಪಿ.ಡಿ.ವೋ. ಮುಡಾ ಅಧಿಕಾರಿಗಳು ಗ್ರಾಮ ಪಂಚಾಯಿ ಅಧ್ಯಕ್ಷರು ಸದ್ಯರುಗಳ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಕರೆದು ಪ್ರಗತಿ ಪರ ವಿಚಾರಗಳ ಸ್ಪಷ್ಟತೆ ಪಡೆದುಕೊಂಡರು ಹಾಗೂ ಮುಂದಾಗಬೇಕಾದ ಒಳ್ಳೆಯ ಕೆಲಸಗಳ ಕುರಿತಾಗಿ ಯೋಜಿಸಿಕೊಂಡರು.

ವರದಿ:-ಮಂಜುನಾಥ ಬಿ.ಆರ್(ಚಿ.ಮ.ಬಿ.ಆರ್)

 

 

 

By admin