ಮೈಸೂರು -30 ಮೈಸೂರು ಮೆಡಿಕಲ್ ಸಿಸ್ಟಂನ ಡಾ.ಎಸ್.ಪ್ರಭುಶಂಕರ್ ಅವರಿಗೆ ಕರ್ನಾಟಕ ಟ್ರೇಡರ್ಸ್ ಚೇಂಬರ್ ಆಫ್ ಕಾಮರ್ಸ್(ಕೆಟಿಸಿಸಿ) ವತಿಯಿಂದ ಕರ್ನಾಟಕ ಬಿಸಿನೆಸ್ ಅವಾರ್ಡ್ ನೀಡಲಾಗಿದೆ. ಶನಿವಾರ ಬೆಂಗಳೂರಿನ ಮನ್ಯತಾ ಟೆಕ್ ಪಾರ್ಕ್ ಬಳಿ ಇರುವ ಮ್ಯಾನ್‌ಪೋ ಕೇಂದ್ರದಲ್ಲಿ ನೆಡೆದ ವರ್ಣ ರಂಜಿತ ಸಮಾರಂಭದಲ್ಲಿ ಮೈಸೂರಿನ ಉದ್ಯಮಿ ಡಾ.ಎಸ್.ಪ್ರಭುಶಂಕರ್ ರವರಿಗೆ ಕರ್ನಾಟಕ ಬಿಸೆನೆಸ್ ಅವಾರ್ಡ್‌ನ್ನು ನೀಡಿ ಗೌರವಿಸಿದೆ. ಕಳೆದ 13 ವರ್ಷ ಗಳಿಂದ ಮೈಸೂರು ಮೆಡಿಕಲ್ ಸಿಸ್ಟಂ ಮೂಲಕ ಶ್ವಾಸಕೋಶದ ಸಮಸ್ಯೆ ಇರುವ ರೋಗಿಗಳಿಗೆ ಬಳಸುವ ಯಂತ್ರಗಳಾದ ನೆಬುಲೈಸರ್,ಪಲ್ಸ್ ಆಕ್ಸಿಮೀಟರ್.ಸಿಪಿಎಪಿ, ಬಿಐಪಿಎಪಿ, ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್, ಹೀಗೆ ಅನೇಕ ವೈದೈಕೀಯ ಉಪಕರಣಗಳು ಆಸ್ಪತ್ರೆಗಳಿಗೆ, ರೋಗಿಗಳಿಗೆ ಒದಗಿಸುವ  ಸೇವೆಯಲ್ಲಿ ತೊಡಗಿಕೊಂಡಿದ್ದು ಇವರ ಸೇವೆಯನ್ನು ಗುರುತಿಸಿ ಈಗಾಗಲೇ ಗೌರವ ಡಾಕ್ಟರೇಟ್ ಆಫ್ ಬಿಸೆನೆಸ್ 2021 ರಲ್ಲಿ ಲಭಿಸಿದೆ ಹಾಗೂ ಹಲವಾರು ಸಂಘ ಸಂಸ್ಥೆಗಳಿಂದ 10 ಕ್ಕು ಹೆಚ್ಚು ಪ್ರಶಸ್ತಿಗಳು ಇವರಿಗೆ ದೂರಕಿದೆ.