ಆರೋಗ್ಯಕರ ಗುಣಮಟ್ಟ ಶುಚಿ ಹಾಗೂ ರುಚಿಕರ ಪೌಷ್ಟಿಕ ಆಹಾರ ಪೂರೈಸುವಲ್ಲಿ  ಮೊದಲ ಮಹತ್ವ ನಮ್ಮ ಪ್ರೇಂಡ್ಸ್ ಗಾರ್ಡನ್ ಕೆಫೆ.ಇದು ಹೋಟೆಲ್ ಅಲ್ಲ ಮನೆರೆಸ್ಟೋರೆಂಟ್ ನ್ಯೂ ಸ್ಟೈಲ್. ಸಿದ್ದಮಾಡುವ ತಿನಿಸು ಹೆಚ್ಚು ಸ್ವಾಸ್ಥ್ಯ. ಇದನ್ನು ಹೆಚ್ಚು  ಯೋಗಪಟುಗಳು ಹಾಗೂ ಕ್ರೀಡಾಪಟುಗಳಿಗೆಂದೇ ತಯಾರಿಸಲಾಗುತ್ತಿದೆ.ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೋಸ್ಕರ ಕಡಿಮೆ ಹಣದಲ್ಲಿ ಈ ಕೆಲಸವನ್ನು ಸಚಿನ್ ಮಾಡುತ್ತಿರುವುದಾಗಿ ನಮ್ಮೊಂದಿಗೆ ವಿಷಯ ಹಂಚಿಕೊಂಡಿದ್ದಾರೆ.ನಮಗೆ ಗ್ರಾಹಕ ಸ್ನೇಹಿ ಮನೆ, ಆರೋಗ್ಯಕರ ಮನೆಯ ವಾತಾವರಣದಂತೆ ಕುಟಂಬದ ರೀತಿಯಲ್ಲಿ ನಾವು  ಗ್ರಾಹಕರನ್ನು  ಕಾಣುತ್ತೇವೆ ಸಚಿನ್ ಪವಾರ್ ತಮ್ಮ ಮನದಾಳದ ಇಚ್ಚೆಯನ್ನು ತಿಳಿಸಿದರು.
ಮೈಸೂರು ಚಾಮರಾಜಪುರಂ ವಿಷ್ಣುವರ್ಧನ ರಸ್ತೆಯಲ್ಲಿರುವ ಸಚಿನ್ ಪವಾರ್, ತಮ್ಮ ಮನೆಯನ್ನು ಯೋಗಾಪಟುಗಳಿಗೆ ಮೀಸಲಿರಿಸಿದ್ದಾರೆ‌.ಹಲವಾರು ಯೋಗಕೇಂದ್ರಗಳು ಹೆಚ್ಚಾಗಿ ಯೋಗ ನಗರಿ ಮೈಸೂರು ಆಗಿರುವುದರಿಂದ್ದ .ದಿನ ನಿತ್ಯ ಯೋಗಭ್ಯಾಸ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಸ್ಥಳೀಯರಿಗಿಂತ ವಿದೇಶಿಯರ ಆಗಮನ ಮೈಸೂರಿನೆಡೆಗೆ ಹೆಚ್ಚು. ಇವರ ಮನೆಯು ವಿದೇಶಿಯರಿಗೆ ಪ್ರಮುಖ ಆಶ್ರಯ ಪಾಕತಾಣವೆ ಆಗಿದೆ.
ಹಾಗೇಯೆ ಇಲ್ಲಿನ ಸ್ಥಳೀಯ ಕ್ರೀಡಾಪಟುಗಳು ಕೂಡ ಬಂದು ಆರೋಗ್ಯಕರ ತಿನಿಸು ಸ್ಮೂತಿ ಜ್ಯೂಸ್ ದೋಸೆ… ಗರಿ ಗರಿಯಾದ ಬಿಸಿ ಬಿಸಿ ದೋಸೆ. ಸ್ವಾದಿಷ್ಟ ರುಚಿ… ಗ್ರಾಹಕರ ಬೇಡಿಕೆಗೆ ತಕ್ಕಂತೆ ಬಗೆ ಬಗೆಯ ದೋಸೆ ತಯಾರಿಸಿಕೊಡುವಲ್ಲಿ ನಿಪುಣ ಸಚಿನ್ ಪವಾರ್,ಮುಂಜಾನೆ ಹಾಗೂ ಮುಸ್ಸಂಜೆ ವೇಳೆ ವ್ಯಾಯಮ ಮಾಡುವ   ದಣಿದವರ ಬಾಯಿ ರುಚಿ ತಣಿಸುವ ಜೊತೆಯಲ್ಲೇ,  ಆರೋಗ್ಯಕರ ಜೀವನ ಸಾಗಿಸುವ ಕ್ರೀಡಾ ಯುವಕರೇ ಹೆಚ್ಚು ಬರುತಿದ್ದಾರೆ.
ಬೆಳಗಿನ ಉಪಾಹಾರ ಇಲ್ಲಿಯೇ. ಉಳಿದಂತೆ ಖಾಯಂ ಗಿರಾಕಿಗಳು ಬೆಳಗಿನ ಉಪಾಹಾರಕ್ಕೆ ಇವರ ಮನೆಗೆ ಹಾಜರು.ಇವರು ಯಾವುದೇ ಪ್ರಚಾರ ಬಯಸದೇ ಯಾವ ನಾಮಪಲಕಗಳು ಮನೆಯ ಮುಂದೆಯು ಕೂಡ ಹಾಕಿಲ್ಲ.ಆದರೂ ಗುಣಮಟ್ಟದ ಆಹಾರದೊರಕುವುದರಿಂದ.ಬಹುದೂರದಿಂದ ಹುಡುಕಿ ಬರುತ್ತಾರೆ. ಮುಂಚಿತಾವಾಗಿಯೇ ಖಾಯಂ ಗಿರಾಕಿಗಳು ಇವರಿಗೆ ಕರೆಮಾಡಿ ಆಹಾರ ಸಿದ್ದತೆ ಮಾಡಿಸಿಕೊಳ್ಳತ್ತಾರೆ.
ನಮ್ಮಲ್ಲಿ ಸಿಗುವ ದಿನ ನಿತ್ಯದ ಮೆನು ಪ್ರೋಟಿನ್ ದೋಸೆ, ಮಸಾಲೆ ದೋಸೆ ಹರ್ಬಲ್ ದೋಸೆ ಡ್ರೈ.ಹರ್ಬದೋಸೆಯ ಚಪಾತಿ ಬೆಲೆ ೧೦೦ ರೂ ಇರುತ್ತದೆ. ಊಟವು ಅನಿಯಮಿತ ಇರುತ್ತದೆ.ವಿಶೇಷವಾಗಿ ಆರೋಗ್ಯ ದಾಯಕ ಸ್ಮೂತಿ ಜ್ಯೂಸ್ ಕೂಡ ದೊರೆಯುತ್ತದೆ.ಸ್ಮೂತಿಯ ಬೆಲೆ ೭೦ ರೂ ಗ್ರೀನ್ ಸ್ಮೂತಿ-೭೦ ಮಿಕ್ಸ್ ಡ್ರೆöÊ ಪ್ರೂಟ್ಸ್ ೭೦ ಹಾಗೂ ವಿಶೇಷವಾದ ಕ್ರೀಡಾಪಟುಗಳಿಗೆ ಹೆಚ್ಚು ಬಯಸುವ ಜ್ಯೂಸ್ ಅಂದರೆ ನಮ್ಮಲ್ಲಿಎ.ಬಿ.ಸಿ  ಅಂದರೆ ಅಪಲ್, ಬೀಟರೋಟ್, ಕ್ಯಾರೇಟ್. ಮಿಕ್ಸ್ ಅನ್ನುವ ಡ್ರಿಂಕ್ ಹೆಸುರುವಾಸಿ.
 ಇವರಿಗೆ ದೊಡ್ಡ ರೆಸ್ಟೋರೆಂಟ್ ಮಾಡುವ ಆಸೆ ಇದೆ.  ಆದರೆ ಸಾಲ ಮಾಡಲು ಭಯ. ಹೆಚ್ಚೆಚ್ಚು ಜನರು ಈಗ ಬರುತ್ತಿದ್ದು ನಮ್ಮ ಮನೆಯಲ್ಲಿ ಸ್ಥಳಾವಾಕಾಶ ಕಡಿಮೆ ಇರುವುದರಿಂದ್ದ ನಮಗೆ ಅಡಿಗೆ ಮಾಡಲು ಕಷ್ಟ ಆಗುತ್ತದೆ. ಮುಂದಿನ ದಿನಗಳಲ್ಲಿ ದೊಡ್ಡ ಆಸೆ ಇದೆ ಒಂದು ಯೋಗ ಸೆಂಟರ್ ಹಾಗೂ ಫುಡ್ ಸೆಂಟರ್ ಮಾಡುವ ಹಂಬಲ ಇದೆ. ನಾನು  ಈಗ ಕೇವಲ ನಮಗೆ ಬರುವ  ಖಾಯಂ ಗ್ರಾಹಕರನ್ನ ಉಳಿಸಿಕೊಂಡು ಅಡುಗೆ ತಯಾರಿಸಿ ವ್ಯಾಪಾರ ಮಾಡುತ್ತಾ ಬರುತ್ತೀದ್ದಿನಿ ಎಂದರು.ವಾರದ ಕೊನೆ ದಿನ ಅಡಿಗೆ ಬಗ್ಗೆ  ತರಬೇತಿಯು ಕೂಡ ನೀಡಲಾಗುತ್ತದೆ.ಕನಿಷ್ಟ ಎರಡು ಮೂರು ವಿಧವಾದ ಅಡುಗೆ ಬಗ್ಗೆ ವಿವರಣೆ ವಿಧಾನದ ಮನೆಯಲ್ಲಿ ಅಡುಗೆ ಕೋರ್ಸ್ ಆರಂಭಿಕರಿಗಾಗಿ ಅಡುಗೆ ಪಾಠಗಳು: ಸಚಿನ್ ಪವಾರ್  ಈ ಕ್ಷೇತ್ರದಲ್ಲಿ ಪರಿಣತರಾಗಲು ಮತ್ತು ನಿಮ್ಮ ಕುಟಂಬ ಮತ್ತು ಸ್ಣೇಹಿತರನ್ನು ಸೊಗಸಾದ ಮತ್ತು ರುಚಿಕರವಾದ ಬೋಜನ ಮುದ್ದಿಸು ಮೊದಲಿಂದನಲು ರುಚಿಕರವಾಗಿ ಮಾಡುವುದು ಹೇಗೆ ಮಸಾಲೆ ಹಾಕುವುದು ಎಲ್ಲಾ ರೀತಿಯ ಸಂಪೂರ್ಣವಾಗಿ ತರಗತಿಯಲ್ಲಿ ಹೇಳಿ ಕೊಡಲಾಗುವುದು.
ಅದಕ್ಕೆ  ಕನಿಷ್ಟ ನಿಗಧಿ ದರ ಮಾಡಲಾಗುವುದು.ಮನೆ ಆಗಿರುವುದರಿಂದ್ದ ತುಂಬಾ ಜನ ಬಂದರೆ ಕ್ವಾಲಿಟಿ ಕೊಡುವುದಕ್ಕೆ ಆಗಲ್ಲ ನಮಗೆ ೪೦ ರಿಂದ ೫೦ ಜನ ಬಂದರೆ ಸಾಕು ನಮಗೆ  ನಾನು ಯಾವ ಅಡಿಗೆ ಮಾಡಿರಿತ್ತೀನಿ ಅದನ್ನ ನನ್ನ ಮೊಬೈಲ್ ವಾಟ್ಸಪ್ ಸ್ಟೇಟ್‌ಸ್ ಹಾಕ್ತಿನಿ ಆಗ ನಮ್ಮ ಗ್ರಾಹಕರು ನೋಡಿ ಬರುತ್ತಾರೆ,ನಮ್ಮ ಗ್ರಾಹಕರು ನಮಗೆ ಕರೆ ಮಾಡುತ್ತಾರೆ  ಆಗ ಇನ್ನೂ ಏನಾದರೂ ಹೆಚ್ಚು ಬೇಕು ಅಂತ ಹೇಳಿದರೆ ನಾನು ಮತ್ತೆ ಹೆಚ್ಚು ಮಾಡುತ್ತೇನೆ,
ಶ್ರೀ.ಕಾ0ತ್ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳವುದೇ ದೊಡ್ಡ ಜವಾಬ್ದಾರಿಯಾಗಿದೆ.ಅದರಲ್ಲೂ ಕರೋನ ಸಮಯದಲ್ಲಿ ಭಯದ ವಾತವಾರಣದಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚಿಸಿಕೊಳ್ಳುಲು ಇಂತಹ ಆಹಾರ ಪ್ರಮುಖ ಪಾತ್ರ ವಹಿಸಲಿದೆ.ಅದರಿಂದ್ದ  ನಾನು ದಿನ ನಿತ್ಯ ಹೆಲ್ತಿ ಡ್ರಿಂಕ್ಸ್ ಕುಡಿದು ಹೋಗುತ್ತೀದ್ದಿನಿ…
ರವಿ.ಟಿ.ಎಸ್ ಸಹಾಯಕ ನಿದೇರ್ಶಕರು ದೈಹಿಕ ಶಿಕ್ಷಣ ವಿಭಾಗ ಮೈಸೂರು.ವಿ.ವಿ
ಕ್ರೀಡಾ ತರಬೇತುದಾರರು. ನಾನು ಒಬ್ಬ ಕ್ರೀಡಾಪಟು ಆಗಿರುವುದರಿಂದ್ದ ಕ್ರೀಡಾ ಉತ್ತಮ ಮಾರ್ಗದರ್ಶನ ತರಬೇತಿ ನೀಡುತ್ತೀನಿ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವ ಕ್ರೀಡಾ ಪ್ರಟುಗಳಿಗೆ ಪೌಷ್ಟಿಕ ಆಹಾರ ಆರೋಗ್ಯಕ್ಕಾಗಿ ಗುಣಮಟ್ಟದ ಆಹಾರದ ಬಗ್ಗೆ ಹೆಚ್ಚು ಪಾತ್ರವಹಿಸುತ್ತದೆ.ಆದರಿಂದ್ದ ನಾವು ದಿನ ನಿತ್ಯ ಸಚಿನ್ ಪವಾರ್ ಕಫೆಗೆ ಹೋಗಿ ಪ್ರೋಟಿನ್ ಯುಕ್ತ ಆಹಾರ ಸವಿದು ಬರುತ್ತೀವಿ,ಎಲ್ಲಾ ಬಗೆಯ ಹಣ್ಣುಗಳು ವಾತವರಣೆಕ್ಕೆ ತಕ್ಕಂತೆ ಬರುವ ಹಣ್ಣುಗಳು ,ಸಾಲಡ್‌ಗಳು ಸ್ಮೂತಿ ಅದನ್ನು  ಕುಡಿಯುವುದರಿಂದ್ದ ಪ್ರೋಟಿನ್, ನಾರಿನ ಅಂಶ, ಹಾಗೂ ವಿಟಮಿನ್ ಅಂಶ ಹೆಚ್ಚು ಸಿಗುವುದರಿಂದ್ದ ದೈಹಿಕ ಕಸರತ್ತು ಮಾಡುವ ಕ್ರೀಡಾಪಟುಗಳಿಗೆ ಉತ್ತಮ ಆಹಾರದಿಂದ ಕ್ರೀಡಾ ಪ್ರದರ್ಶನ ಹೆಚ್ಚಿಸಲು ಸಹಕಾರಿಯಾಗಿದೆ.

By admin