ಮಹಮದ್‌ರಾಖಿಬ್‌ಕುಟುಂಬದವರನ್ನುಕರ್ನಾಟಕರಾಜ್ಯರೈತಕಲ್ಯಾಣ ಸಂಘದಅಧ್ಯಕ್ಷಚಂದನ್‌ಗೌಡ ಭೇಟಿ ಮಾಡಿ ಅಭಿನಂದಿಸಿದರು.ಶಾಲೆಗೆ ಭೂಮಿದಾನ-ರೈತಕಲ್ಯಾಣ ಸಂಘದಿಂದಅಭಿನಂದನೆ ಮೈಸೂರು:ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲೆಂದು ಶಾಲೆಗಾಗಿ ಎರಡುಎಕರೆ ಭೂಮಿಯನ್ನುದಾನವಾಗಿ ನೀಡಿದ ಮುಸ್ಲಿಂ ಸಮುದಾಯದ ಮಹಮದ್‌ರಾಖಿಬ್‌ಕುಟುಂಬದವರನ್ನುಕರ್ನಾಟಕರಾಜ್ಯರೈತಕಲ್ಯಾಣ ಸಂಘದ ಅಧ್ಯಕ್ಷ ಚಂದನ್‌ಗೌಡ ಭೇಟಿ ಮಾಡಿ ಅಭಿನಂದಿಸಿದರು.

ಹಂಪಾಪುರದಲ್ಲಿ ವಾಸಮಾಡುತ್ತಿರುವ ಮಹಮದ್‌ರಾಖಿಬ್‌ಮತ್ತುಅವರಕುಟುಂಬದವರನ್ನು ಭೇಟಿಯಾಗಿ ಅಭಿನಂದಿಸಿ ಮಾತನಾಡಿದಚಂದನ್‌ಗೌಡಅವರು, ಇಂದಿನ ಸಂದಿಗ್ನ ಪರಿಸ್ಥಿತಿಯಲ್ಲಿ ಎಚ್.ಡಿ.ಕೋಟೆತಾಲ್ಲೂಕು ಹಂಪಾಪುರ ಹೋಬಳಿ ಬಾಚೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎರಡುಎಕರೆ ಭೂಮಿಯನ್ನುದಾನವಾಗಿ ನೀಡಿದ ಮುಸ್ಲಿಂ ಬಾಂಧವರಾದ ಮಹಮದ್‌ರಾಖಿಬ್ ನಿರ್ಧಾರ ನಿಜಕ್ಕೂ ಶ್ಲಾಘನೀಯಎಂದರು.

60ರಿಂದ 80 ಲಕ್ಷ.ರೂ ಬೆಲೆಬಾಳುವ ಭೂಮಿಯನ್ನು ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿಉದಾರ ಮನಸ್ಸಿನಿಂದ ದಾನ ಮಾಡಿರುವುದುಇಡೀ ಮನುಕುಲವೇ ಪ್ರಶಂಸೆ ಪಡುವ ವಿಚಾರ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಓದುತ್ತಿರುವರೈತರ ಮಕ್ಕಳಿಗೆ ಅನುಕೂಲವಾಗಲೆಂಬ ಉದ್ದೇಶದಿಂದಇಂತಹಉತ್ತಮಕಾರ್ಯಕ್ಕೆ ಮುಂದಾಗಿರುವ ಮಹಮದ್‌ರಾಖಿಬ್‌ಅವರಿಗೆರಾಜ್ಯರೈತಕಲ್ಯಾಣ ಸಂಘಬೆಂಬಲ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಸಂಘದ ವತಿಯಿಂದಅಗತ್ಯವಿರುವ ಸಹಾಯ ಹಸ್ತ ಚಾಚಲು ಬದ್ದವಿರುವುದಾಗಿ ಭರವಸೆ ನೀಡಿದರು.
ಸಂಘದ ಪದಾಧಿಕಾರಿಗಳು ಹಾಗೂ ಹಂಪಾಪುರದ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.