ಚಾಮರಾಜನಗರ: ನಗರದ ಸಾರ್ವಜನಿಕರ ಸಮಸ್ಯೆ, ಅಹವಾಲು ಸ್ವೀಕಾರಸಂಬಂಧ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುರುವಾರ ನಗರಸಭೆಗೆ ಭೇಟಿನೀಡಿದ್ದರು.
ಇದೇವೇಳೆ ಸಾರ್ವಜನಿಕರು ನಗರಸಭೆಯಲ್ಲಿ ತಮ್ಮ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ ಸೇರಿದಂತೆ ಅನೇಕ ದೂರುಗಳನ್ನು ಶಾಸಕರ ಬಳಿ ಹೇಳಿಕೊಂಡರು.
ಶಾಸಕರು ಮಾತನಾಡಿ, ಸಾರ್ವಜನಿಕರ ಕೆಲಸಗಳನ್ನು ಸಮರ್ಪಕವಾಗಿ ಮಾಡಿಕೊಡುವ ಜವಾಬ್ದಾರಿ ನಗರಸಭೆ ಅಧಿಕಾರಿಗಳದ್ದಾಗಿದೆ. ದಾಖಲಾತಿಗಳು ಸಮರ್ಪಕವಾಗಿದ್ದರೆ, ಅವರ ಕೆಲಸವನ್ನು ಸಕಾಲದಲ್ಲಿ ಮಾಡಿಕೊಡಬೇಕು, ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಅಲೆದಾಡಿಸುವ ಕಾರ್ಯಕ್ಕೆ ಅಧಿಕಾರಿಗಳಿಂದ ಆಗಬಾರದು ಎಂದರು.
ನಗರಸಭೆ ಆಯುಕ್ತ ಕರಿಬಸವಯ್ಯ, ನಗರಸಭೆ ಸದಸ್ಯ ಬಸವಣ್ಣ, ಕಂದಾಯವಿಭಾಗದ ನಾರಾಯಣ್, ಜೆಇ ಶಿವಶಂಕರ ಆರಾಧ್ಯ ಹಾಜರಿದ್ದರು.