ಗುಂಡ್ಲುಪೇಟೆ: ಜನರ ಹಿತದೃಷ್ಟಿಯಿಂದ ಪಟ್ಟಣದ ಸಮೀಪವಿರುವ ಗುಮ್ಮಕಲ್ಲು, ಶ್ರೀರಾಮ ದೇವರ ಗುಡ್ಡ, ಜೇನುಕಲ್ಲು ಗುಡ್ಡ ಮತ್ತು ಕೂತನೂರು ಗುಡ್ಡದ ವ್ಯಾಪ್ತಿಯ 500 ಮೀಟರ್ ಗಣಿಗಾರಿಕೆ ನಿμÉೀಧಿತ ಪ್ರದೇಶ ಎಂದು ಘೋಷಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕರೆದಿದ್ದ ಸಭೆಯಲ್ಲಿ ಮನವಿ ಸಲ್ಲಿಸಿದ್ದು, ಗುಮ್ಮಕಲ್ಲು, ಶ್ರೀರಾಮ ದೇವರ ಗುಡ್ಡ, ಜೇನುಕಲ್ಲು ಗುಡ್ಡ ಮತ್ತು ಕೂತನೂರು ಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಪುರಸಭಾ ಅಧ್ಯಕ್ಷ ಪಿ.ಗಿರೀಶ್ ಹೇಳಿದರು.

ಮಡಹಳ್ಳಿ ಗುಮ್ಮಕಲ್ಲು ಗುಡ್ಡದಲ್ಲಿ ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹಾಗಾಗಿ ಪಟ್ಟಣದ ಬಳಿಯ ಶ್ರೀರಾಮದೇವರ ಗುಡ್ಡದ ಬಳಿ ಸರ್ಕಾರದ ಅನುದಾನದಲ್ಲಿ ಆಶ್ರಯ ನಿವೇಶನ ಬಡಾವಣೆ ನಿರ್ಮಾಣವಾಗಲಿದೆ. 1440 ಗುಂಪು ಮನೆಗಳನ್ನು ನಿರ್ಮಿಸಲು ಯೋಜನೆ ಸಿದ್ದವಾಗಿದೆ. ಅಲ್ಲದೆ ಪಟ್ಟಣದ ಸುತ್ತ ಮುತ್ತ ಖಾಸಗಿ ಬಡಾವಣೆಗಳು ತಲೆ ಎತ್ತುತ್ತಿವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪಟ್ಟಣದ ಹೊಂದಿಕೊಂಡಂತಿರುವ ಗುಮ್ಮಕಲ್ಲು, ಶ್ರೀರಾಮ ದೇವರ ಗುಡ್ಡ, ಜೇನುಕಲ್ಲು ಗುಡ್ಡ ಮತ್ತು ಕೂತನೂರು ಗುಡ್ಡದ 500 ಮೀಟರ್ ಸುತ್ತಮುತ್ತ ಪ್ರದೇಶ ಗಣಿಗಾರಿಕೆ ನಿಷೇಧಿತ ಪ್ರದೇಶ ಎಂದು ಘೋಷಿಸಿ ಪಟ್ಟಣದ ಜನರ ನೆಮ್ಮದಿಗೆ ಕಾರಣರಾಗಬೇಕು ಎಂದು ಸಚಿವರಲ್ಲಿ ಮನವಿ ಮಾಡಿದ್ದೇನೆ ಎಂದರು.

ಸಚಿವರಿಂದ ಗಣಿಗಾರಿಕೆ ನಿಲ್ಲಿಸುವ ಭರವಸೆ: ಪಟ್ಟಣದ ಜನರ ಹಿತದೃಷ್ಟಿಯಿಂದ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಗುಮ್ಮಕಲ್ಲು, ಶ್ರೀರಾಮ ದೇವರ ಗುಡ್ಡ,ಜೇನುಕಲ್ಲು ಗುಡ್ಡ ಮತ್ತು ಕೂತನೂರು ಗುಡ್ಡದಲ್ಲಿ ಗಣಿಗಾರಿಕೆ ನಿಲ್ಲಿಸುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ವರದಿ: ಬಸವರಾಜು ಎಸ್.ಹಂಗಳ