
ಚಾಮರಾಜನಗರ: ತಾಲೂಕಿನ ಆಲೂರು ಮತ್ತು ಕೂಡ್ಲೂರು ಗ್ರಾಮದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿ, ಗ್ರಾಮಗಳಲ್ಲಿ ಸ್ವಚ್ಛತೆ ನೆಲೆಸಬೇಕಾದರೆ ಸೂಕ್ತ ಚರಂಡಿಸೌಲಭ್ಯವು ಅಗತ್ಯ, ಹಾಗೆಯೇ ಜನರಸುಗಮಸಂಚಾರಕ್ಕೆ ಉತ್ತಮರಸ್ತೆ ನಿರ್ಮಾಣದ ಅವಶ್ಯವಿದೆ. ಆನಿಟ್ಟಿನಲ್ಲಿ ಕ್ಷೇತ್ರವ್ಯಾಪ್ತಿಯ ಆಲೂರು ಗ್ರಾಮದ ಪರಿಶಿಷ್ಟ ಜಾತಿ ಬೀದಿಯಲ್ಲಿ ಎಸ್‌ಇಪಿ ಯೋಜನೆಯಡಿ ೨೦ ಲಕ್ಷ, ಕೂಡ್ಲೂರು ಗ್ರಾಮದ ಪರಿಶಿಷ್ಟ ಪಂಗಡದವರು ವಾಸಿಸುವ ಬೀದಿಯಲ್ಲಿ ೧೧ ಲಕ್ಷ ರೂ.ವೆಚ್ಚದಲ್ಲಿ ಸಿಮೆಂಟ್ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗುತ್ತಿದೆ. ಗ್ರಾಮಸ್ಥರು ಮುಂದೆನಿಂತು ತಮ್ಮ ಬೀದಿಗಳಲ್ಲಿ ಗುಣಮಟ್ಟದ ರಸ್ತೆ,ಚರಂಡಿ ನಿರ್ಮಿಸಿಕೊಳ್ಳಬೇಕು, ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ತಮ್ಮ ಕ್ಷೇತ್ರವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವನೀರು, ರಸ್ತೆ ಸೇರಿದಂತೆ ಇತರೇ ಮೂಲಭೂತ ಸೌಕರ್ಯ ಕಲ್ಪಿಸುವ ದಿಕ್ಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ಕೂಡ್ಲೂರು ಗ್ರಾಪಂ ಅಧ್ಯಕ್ಷೆ ಯೋಗೇಶ್ವರಿ, ಸದಸ್ಯ ನಾರಾಯಣಸ್ವಾಮಿ, ಆಲೂರು ಗ್ರಾಪಂ ಅಧ್ಯಕ್ಷ ಎ.ಎಸ್.ಮಹದೇವಸ್ವಾಮಿ, ಸದಸ್ಯರಾದ ಆಶಾಲತಾ, ನಳಿನಿ,ನಂದಿನಿ, ಮುಖಂಡರಾದ ಎ.ಎಸ್.ಮಲ್ಲಣ್ಣ, ಬಿ.ಮಹದೇವಯ್ಯ, ರಮೇಶ್, ಕೂಡ್ಲೂರು ಗ್ರಾಮದ ಮುಖಂಡರಾದ ಮಂಜು, ಶಿವಣ್ಣ, ಕೃಷ್ಣ, ಮುತ್ತು, ಲೋಕೋಪಯೋಗಿ ಇಲಾಖೆ ಎಇಇಗಳಾದ ಕೆಂಪರಾಜು, ಶಾಂತಮ್ಮ ಹಾಜರಿದ್ದರು.
