ಗುಂಡ್ಲುಪೇಟೆ: ತಾಲೂಕಿನ ತೊರವಳ್ಳಿ ಗ್ರಾಮದ ಕುರುಬ ಸಮುದಾಯದ ಸುಮಾರು 50ಕ್ಕು ಅಧಿಕ ಮಂದಿ ಮುಖಂಡರು, ಯಜಮಾನರು, ಯುವಕರು ಕಾಂಗ್ರೆಸ್ ಪಕ್ಷ ತೊರೆದು ಶಾಸಕ ಸಿ.ಎಸ್.ನಿರಂಜನಕುಮಾರ್ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಈ ವೇಳೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ತೊರವಳ್ಳಿ ಗ್ರಾಮದ ಗ್ರಾಪಂ ಸದಸ್ಯ ಮಾದೇಗೌಡ, ಟೈಲರ್ ಮಾದಪ್ಪ, ಸ್ವಾಮಿ, ಸಿದ್ದರಾಜು, ಕೃಷ್ಣ, ಮಹದೇವು, ಶಿವಲಿಂಗ, ಸ್ವಾಮಿ, ಸತೀಶ, ಮಹೇಶ, ರವಿ, ಪ್ರವೀಣ್, ಪ್ರದೀಪ್, ಶರತ್, ನಾಗರಾಜು, ಮಹದೇವಸ್ವಾಮಿ, ರಮೇಶ್, ಪ್ರಸಾದ್, ನಾಗರಾಜು, ಬಸವರಾಜು, ಕುಮಾರಸ್ವಾಮಿ, ಲೋಕೇಶ್, ಮಂಜು, ಸುರೇಶ್ ಸೇರಿದಂತೆ ಇತರರಿಗೆ ಶಾಸಕ ನಿರಂಜನಕುಮಾರ್ ಪಕ್ಷದ ಶಲ್ಯ ಹಾಗೂ ಬಾವುಟ ನೀಡಿ ಬರಮಾಡಿಕೊಂಡರು.

ನಂತರ ಮಾತನಾಡಿದ ಶಾಸಕ ಸಿ.ಎಸ್.ನಿರಂಜನಕುಮಾರ್, ತಮ್ಮ ಆಡಳಿತಾವಧಿಯಲ್ಲಾದ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಕ್ಷೇತ್ರದ ಅಧಿಕ ಮಂದಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಹಲವು ಗ್ರಾಮದ ಅಧಿಕ ಮಂದಿ ಬಿಜೆಪಿ ಸೇರಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಹೊರೆಯಾಲ ಮಹೇಶ್, ಎಪಿಎಂಸಿ ಸದಸ್ಯ ಕಮರಹಳ್ಳಿ ರವಿ, ನಿಟ್ರೆ ನಾಗರಾಜಪ್ಪ, ಕಮರಹಳ್ಳಿ ಶ್ರೀಕಂಠಪ್ಪ, ಬೆಳಚಲವಾಡಿ ರಾಜಶೇಖರಪ್ಪ, ಚಿಕ್ಕಾಟಿ ಬಸವರಾಜು, ಮಹದೇವೇಗೌಡ, ತೊರವಳ್ಳಿ ರಾಜಪ್ಪ, ನಿಟ್ರೆ ಶೇಖರ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

ವರದಿ: ಬಸವರಾಜು ಎಸ್.ಹಂಗಳ