ನಮ್ಮ ಹೆಮ್ಮೆಯ ಮಾನ್ಯ ಪ್ರಧಾನ ಮಂತ್ರಿಗಳಾದ  ನರೇಂದ್ರ ಮೋದಿ ಅವರ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ… ಟೀ ಮಾರುವ ಹುಡಗನಿಂದ ದೇಶದ ಅತ್ಯುನ್ನತ ಹುದ್ದೆ ಪ್ರಧಾನಮಂತ್ರಿ ಸ್ಥಾನಕ್ಕೆ ಏರುವಲ್ಲಿ ಮೋದಿಜಿ ಪಟ್ಟ ಶ್ರಮ ಹಾಗೂ ಮೂಡಿಸಿದ ಹೆಜ್ಜೆಗುರುತು ಸಾಮಾನ್ಯದ್ದೇನಲ್ಲ. ಅವರ ರಾಜಕೀಯ ಹಾದಿ ಸುಲಭವಾಗೇನೂ ಇರಲಿಲ್ಲ. ಆದರೆ, ಅವರು ಎಂದೂ ಎದೆಗುಂದದೇ ತಮ್ಮ ಗುರಿಯನ್ನಷ್ಟೇ ನೋಡಿ ಕಾರ್ಯನಿರ್ವಹಿಸಿದ್ದರ ಪರಿ ಇಂದು ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.

ಗುಜರಾತ್ ನಂತಹ ರಾಜ್ಯದಲ್ಲಿ ಸತತವಾಗಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದು, ಮತ್ತೆ ಮತ್ತೆ ಮೋದಿಜಿ ಅವರನ್ನು ಹಾಗೂ ಬಿಜೆಪಿಯನ್ನು ಮತದಾರರು ಆರಿಸಿ ಕಳುಹಿಸುತ್ತಾರೆಂದರೆ ಅವರ ಸಾಮಾಜಿಕ ಕಳಕಳಿ, ಅಭಿವೃದ್ಧಿ ಹಾಗೂ ಜನಪರ ನಿಲುವಿನ ಬಗ್ಗೆ ಸಾರ್ವಜನಿಕರಿಗೆ ಇರುವ ಪ್ರೀತಿಯನ್ನು ತೋರಿಸುತ್ತದೆ.

ಇಂದು ವಿಶ್ವವೇ ನಮ್ಮ ಹೆಮ್ಮೆಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುತ್ತಿದೆ. ನರೇಂದ್ರ ಮೋದಿಯವರಿಗೆ ನರೇಂದ್ರ ಮೋದಿಯವರೇ ಸಾಟಿ. ಅವರ ಕಠಿಣ ನಿಲುವುಗಳಿಂದ ಭಾರತ ಇಂದು ಸಶಕ್ತವಾಗಿ ಬೆಳೆದಿದೆ ಹಾಗೂ ಬೆಳೆಯುತ್ತಿದೆ. ಶತ್ರು ರಾಷ್ಟ್ರಗಳ ಸಹಿತ ಹಲವು ದೊಡ್ಡ ದೊಡ್ಡ ರಾಷ್ಟ್ರಗಳೂ ಸಹ ಇಂದು ಭಾರತದ ವಿಚಾರದ ಬಗ್ಗೆ ತಲೆ ಹಾಕಬೇಕೆಂದರೆ ಹತ್ತು ಬಾರಿ ಯೋಚಿಸುವಂತಹ ಸ್ಥಿತಿಯನ್ನು ನಮ್ಮ ಪ್ರಧಾನಿಯವರಾದ ಮೋದಿಯವರು ನಿರ್ಮಾಣ ಮಾಡಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಮೋದಿಜಿ ಅವರ ವೀಸಾವನ್ನೇ ರದ್ದುಪಡಿಸಿ, ತನ್ನ ದೇಶಕ್ಕೆ ಪ್ರವೇಶ ನಿಷೇಧಿಸಿದ್ದ ವಿಶ್ವದ ದೊಡ್ಡಣ್ಣ ಅನ್ನಿಸಿಕೊಂಡಿರುವ ಅಮೆರಿಕ ಸಹ ಮೋದಿಯವರು ಪ್ರಧಾನಮಂತ್ರಿಗಳಾಗುತ್ತಿದ್ದಂತೆ ತಮ್ಮ ದೇಶಕ್ಕೆ ಕರೆಸಿಕೊಂಡು ಕಾರ್ಯಕ್ರಮ ನಡೆಸಿಕೊಟ್ಟಿತು. ಇದು ಮೋದಿಯವರೊಬ್ಬರ ಜಯವಲ್ಲ. ಇಡೀ ಭಾರತೀಯರ ಗೆಲುವಾಗಿದೆ.

ದೇಶ, ದೇಶಪ್ರೇಮದ ವಿಷಯಕ್ಕೆ ಬಂದಾಗ ಸದಾ ಮುಂದಾಗಿರುವ ಮೋದಿಜಿ, ಪಾಕಿಸ್ತಾನಕ್ಕೂ ಸಹ ತಕ್ಕ ಪಾಠವನ್ನು ಕಲಿಸಿದ್ದಾರೆ. ಇನ್ನು ಪಕ್ಕದ ಚೀನಾ ಕ್ಯಾತೆಗೂ ಸೊಪ್ಪು ಹಾಕದೆ, ಕೆಲವು ದೇಶಕ್ಕೆ ಧಕ್ಕೆ ತರುತ್ತಿರುವ ಆ್ಯಪ್ ಗಳನ್ನು ಬ್ಯಾನ್ ಮಾಡುವ ಮೂಲಕ ದಿಟ್ಟ ಹೆಜ್ಜೆಯನ್ನಿಟ್ಟು, ಭಾರತ ಅಂದರೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಅಭಿವೃದ್ಧಿ ವಿಚಾರದಲ್ಲಿಯೂ ಸಹ ಮೋದಿಯವರದ್ದು ಎತ್ತಿದ ಕೈ. ಹಿಂದಿನ ಕಾಲದ, ಈ ಜಮಾನಕ್ಕೆ ಉಪಯೋಗಕ್ಕೆ ಬಾರದ ಹಾಗೂ ಅಭಿವೃದ್ಧಿಗೆ ತೊಡಕಾಗುವ ಅದೆಷ್ಟೋ ಕಾನೂನುಗಳ ರದ್ದತಿ ಹಾಗೂ ತಿದ್ದುಪಡಿಗಳನ್ನು ತರುವ ಮೂಲಕ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡರು. ಕೊರೋನಾದಂತಹ ಭೀಕರ ಕಾಲದಲ್ಲಿ ಇಡೀ ವಿಶ್ವವೇ ಆರ್ಥಿಕ ಹಿಂಜರಿತದಿಂದ ತತ್ತರಿಸಿದ್ದರೂ, ಭಾರತಕ್ಕೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡರು. ಇದರ ಸಲುವಾಗಿಯೇ ಬರೋಬ್ಬರಿ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಅನ್ನು ದೇಶದ ಸಮಗ್ರ ಅಭಿವೃದ್ಧಿಗೆ ಹಾಗೂ ಅಭ್ಯುದಯಕ್ಕೆ ಘೋಷಿಸಿದರು.

ಇದೇ ಆರ್ಥಿಕ ಪ್ಯಾಕೇಜ್ ಮೂಲಕ “ಆತ್ಮನಿರ್ಭರ ಭಾರತ” ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿದರು. ಈ ಮೂಲಕ ದೇಶೀ ಉತ್ಪನ್ನಗಳಿಗೆ ಹೆಚ್ಚಿನ ಒತ್ತುಕೊಡುವುದು, ನಾಗರಿಕರೂ ಸಹ ದೇಶಿ ವಸ್ತುಗಳನ್ನೇ ಕೊಂಡು ಸಹಕರಿಸುವುದು ಹಿಂದಿನ ಉದ್ದೇಶವಾಗಿತ್ತು. ಇದಲ್ಲದೆ, ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡುವುದು, ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡುವ ಗುರಿಯನ್ನು ಹೊಂದಲಾಗಿದೆ. ಆತ್ಮನಿರ್ಭರ ಯೋಜನೆಯಡಿ ಕರ್ನಾಟಕಕ್ಕೆ ಒಟ್ಟು 39,300 ಕೋಟಿ ರೂಪಾಯಿ ಪ್ಯಾಕೇಜ್ ಲಭಿಸಿದೆ. ಇದರ ಅನುಷ್ಠಾನದಲ್ಲಿ ಕರ್ನಾಟಕವೇ ಮುಂದಿದೆ ಎಂದು ಹೇಳಲು ನಾನು ಈ ಸಂದರ್ಭದಲ್ಲಿ ಹೆಮ್ಮೆ ಪಡುತ್ತೇನೆ. ಅಲ್ಲದೆ, ಇನ್ನೂ ಹೆಚ್ಚಿನ ಜನರಿಗೆ ಸಹಕಾರ ಇಲಾಖೆ ಮೂಲಕ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಾವು ಹೆಚ್ಚುವರಿ 600 ಕೋಟಿ ರೂಪಾಯಿಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಒಟ್ಟಿನಲ್ಲಿ ಪ್ರಧಾನಿ ಮೋದಿಯವರ ಕನಸನ್ನು ಸಾಕಾರಗೊಳಿಸುವಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು, ಮಾನ್ಯ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಹಾಗೂ ನಾನೂ ಸಹ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದೇವೆ.

ಇದೀಗ ಮೋದಿಜಿ ಅವರ ಬಗ್ಗೆ ಜಿ.ಎಸ್.ಭಟ್ಟ ಅವರು ರಚಿಸಿರುವ “ಮೋದಿ ಎಂಬ ವಿಸ್ಮಯ” ಕೃತಿ ಅತಿ ಹೆಚ್ಚು ಜನರನ್ನು ತಲುಪಲಿ, ಮೋದಿಯವರ ಬಗ್ಗೆ ಇನ್ನೂ ತಿಳಿದಿಲ್ಲದ ಹಲವಾರು ಕೌತುಕಗಳ ಬಗ್ಗೆ ಎಲ್ಲರಿಗೂ ತಿಳಿಯುವಂತಾಗಲಿ .

*

By admin