ಮೈಸೂರು ನಗರವನ್ನು ಆಧುನಿಕ ನಗರವನ್ನಾಗಿ ರೂಪಿಸುವ ಹುಮ್ಮಸ್ಸಿನಿಂದ ಮೈಸೂರು ನಗರದ ಹಲವು ಕಡೆಗಳಲ್ಲಿ ಆಧುನಿಕ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಯಿತು. ಪ್ರಾರಂಭದ ಒಂದೆರಡು ವರ್ಷಗಳಲ್ಲಿ ಖಾಸಗಿ ಕಂಪನಿಯು ಮೈಸೂರು ಮಹಾ ನಗರ ಪಾಲಿಕೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಂತೆ ಆಧುನಿಕ ಬಸ್ ನಿಲ್ದಾಣವನ್ನು ಅಚ್ಚುಕಟ್ಟಾಗಿ ನಿರ್ವಹಿಸಿತು. ನಂತರ ಇದರ ನಿರ್ವಹಣೆ ಹೊಣೆಯನ್ನು ಮಹಾ ನಗರ ಪಾಲಿಕೆ ವಹಿಸಿಕೊಂಡಿತ್ತು.‌

ಮಹಾ ನಗರ ಪಾಲಿಕೆಯ ಅಧಿಕಾರಿಗಳು, ಜನ ಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ ಈ ಆಧುನಿಕ ಬಸ್‌ ನಿಲ್ದಾಣಗಳು ಅವನತಿಯತ್ತ ಸಾಗುತ್ತಿವೆ. ನಿಲ್ದಾಣದ ಫಲಕಗಳು, ಕುರ್ಚಿಗಳು ಕಿತ್ತು ಹೋಗಿವೆ. ಎಲ್ಲವೂ ಅಸ್ಥಿಪಂಜರದಂತೆ ಕಾಣುತ್ತಿವೆ. ನಗರ ಪಾಲಿಕೆಯ ಬೇಜವಾಬ್ದಾರಿಯನ್ನು ತೋರಿಸುತ್ತಿವೆ. ಇನ್ನಾದರೂ ಇವುಗಳಿಗೆ ಕಾಯಕಲ್ಪ ನೀಡುವರೇ…?‌

..ಟಿ.ಎಂ.ಚಂದ್ರಶೇಖರ, ಪತ್ರಕರ್ತ
ಮನೆ ಸಂಖ್ಯೆ ೬೦೮, ೩ನೇ ತಿರುವು
ಕುಂಬಾರಗೇರಿ ಚಾಮರಾಜ ಮೊಹಲ್ಲ
ಮೈಸೂರು

ಸಂಚಾರಿ ದೂರವಾಣಿ
೯೦೦೮೦೦೫೨೩೫

By admin