ಚಾಮರಾಜನಗರ: ತಾಲೂಕಿನ ಕಾಡಂಚಿನ ಗ್ರಾಮ ಕುಳ್ಳೂರು ಗ್ರಾಮದಲ್ಲಿ ಭಾನುವಾರಸಂಜೆ ಸುರಿದ ಗಾಳಿಮಳೆ ಹಿನ್ನೆಲೆಯಲ್ಲಿ ಮನೆಗೆ ಸಿಡಿಲುಬಡಿದು ಗೋಡೆಕುಸಿತದಿಂದ ಮೃತಪಟ್ಟ ಸೋಲಿಗ ಮಹಾದೇವ ಅವರ ನಿವಾಸಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟುನೀಡಿ, ಕುಟುಂಬದವರಿಗೆ ಸಾಂತ್ವನ ಹೇಳುವ ಮೂಲಕ ವೈಯಕ್ತಿಕ ಪರಿಹಾರ ವಿತರಿಸಿದರು.
ಇದೇವೇಳೆ ಶಾಸಕರು ಸಿಡಿಲಿನಿಂದ ಗೋಡೆ ಕುಸಿದಿರುವುದನ್ನು ವೀಕ್ಷಿಸಿದರು.
ಸಂತ್ರಸ್ಥರಿಗೆ ಸರಕಾರದಿಂದ ಪರಿಹಾರ ಕೊಡಿಸಲು ಕ್ರಮವಹಿಸುವಂತೆ ತಹಸೀಲ್ದಾರರಿಗೆ ದೂರವಾಣಿ ಮೂಲಕ ಶಾಸಕರು ತಿಳಿಸಿದರು.
ಕುಳ್ಳೂರು ಗ್ರಾಮದಿಂದ ಬೇಡಗುಳಿ, ಬೇಡಗುಳಿಕಾಲೋನಿಗೆ ಭೇಟಿನೀಡಿ, ಸೋಲಿಗ ಕುಟುಂಬದವರ ಸಮಸ್ಯೆ ಆಲಿಸಿದರು. ಟಾರ್ಪಾಲ್ ಒದಗಿಸಬೇಕು,
ಸಾಮಾಜಿಕ ಭದ್ರತಾ ಯೋಜನೆಗಳ ಹಣಸಮರ್ಪಕವಾಗಿ ತಲುಪುತ್ತಿದೆಯೇ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಆಲಿಸಿದರು.
ಕೂಡಲೇ ಶಾಸಕರು ಪ್ರತಿಕ್ರಿಯಿಸಿ ತಮ್ಮ ಬೇಡಿಕೆಗಳ ಪರಿಹಾರಕ್ಕೆ ಸರಕಾರದ ಗಮನಸೆಳೆಯುವುದಾಗಿ ಭರವಸೆ ನೀಡಿದರು.
ಸೋಲಿಗರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಒದಗಿಸಬೇಕು, ಸಮಾಜದ ಉತ್ತಮಪ್ರಜೆಗಳನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಕಾಡಂಚಿನ ಗ್ರಾಮಗಳಾದ ಮಾರಿಗುಡಿಪೋಡು, ಎತ್ತೇಗೌಡನದೊಡ್ಡಿ ಗ್ರಾಮಗಳಲ್ಲಿ ನಡೆಯುತ್ತಿದ್ದ ಜಾತ್ರೆಯಲ್ಲಿ ಪಾಲ್ಗೊಂಡು, ದೇವರಿಗೆ ಪೂಜೆಸಲ್ಲಿಸಿದರು.
ಈ ವರ್ಷ ಜಿಲ್ಲೆಯಲ್ಲಿ ಉತ್ತಮಮಳೆಯಾಗಿ, ಜನರು ಸಮೃದ್ಧಿಯಿಂದ ಜೀವನ ನಡೆಸುವಂತಾಗಬೇಕು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಮಣಿನಾಯಕ, ಮಾಜಿಅಧ್ಯಕ್ಷೆ ಶಾಂತಮ್ಮ, ಮಾಜಿ ಉಪಾಧ್ಯಕ್ಷ ಶಿವನಾಯಕ ಸೇರಿದಂತೆ ಗ್ರಾಮದ ನಿವಾಸಿಗಳು ಹಾಜರಿದ್ದರು.