ಹಾಳು ಹಂಪೆಯಂತಿದ್ದ ಪಿರಿಯಾಪಟ್ಟಣ ತಾಲ್ಲೂಕನ್ನುಅಭಿವೃದ್ಧಿಪಡಿಸಲು 5 ವರ್ಷ ಸಾಕಾಗೋದಿಲ್ಲ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದರೆ ಪಿರಿಯಾಪಟ್ಟಣ ತಾಲ್ಲೂಕನ್ನು ರಾಜ್ಯದಲ್ಲೇ ಮಾದರಿ ತಾಲ್ಲೂಕನ್ನಾಗಿ ಅಭಿವೃದ್ಧಿ ಮಾಡುವೆ ಎಂದು ಶಾಸಕ ಕೆ. ಮಹದೇವ್ ತಿಳಿಸಿದರು.
ಪಿರಿಯಾಪಟ್ಟಣ ತಾಲ್ಲೂಕಿನ ನಿಲವಾಡಿ ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು .
ಮಾಜಿ ಶಾಸಕರಿಗೆ ವಯಸ್ಸಾದರೂ ಚುನಾವಣೆಯ ಹಂಬಲ ಕಮ್ಮಿಯಾಗಿಲ್ಲ ,ವಯಸ್ಸಾದ ಮೇಲೆ ತಾಲ್ಲೂಕನ್ನು ಅಭಿವೃದ್ಧಿ ಪಡಿಸುವವರಿಗೆ ಸಹಕರಿಸಿ ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಸಲಹೆ ನೀಡಿದರು.ಮುಂದಿನ ಚುನಾವಣೆ ನನಗೆ ಕೊನೆಯ ಚುನಾವಣೆಯಾಗಿದ್ದು ಅನಂತರದಲ್ಲಿ ನಾನು ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ,ತಾಲ್ಲೂಕನ್ನು ಅಭಿವೃದ್ಧಿ ಪಡಿಸುವವರಿಗೆ ನಾನು ಸಹಾಯ ಮಾಡಿ ತಾಲ್ಲೂಕಿನ ಜನತೆಯ ಜೊತೆ ಇರುವೆ ಎಂದರು.
ನಿಲವಾಡಿ ಗ್ರಾಮದಲ್ಲಿ ಈಗಾಗಲೇ ಮುಖ್ಯ ರಸ್ತೆಗೆ 1 ಕೋಟಿ 10 ಲಕ್ಷ ರೂ ಮಂಜೂರಾಗಿ ಕೆಲಸ ಮುಗಿದಿದೆ. ಬಾಕಿ ಇರುವ ಸಣ್ಣ ಪುಟ್ಟ ಕೆಲಸಗಳ ಗಳನ್ನು ಗ್ರಾಮಸ್ಥರು ತಿಳಿಸಿದರೆ ತಕ್ಷಣದಲ್ಲಿ ಮಂಜೂರು ಮಾಡಿಸಿ ತಕ್ಷಣದಲ್ಲೇ ಕೆಲಸ ಪ್ರಾರಂಭಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಕೆ. ಚಂದ್ರಮೌಳಿ ,ಬೆಣಗಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ,ಹಾರಂಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ನವೀನ್ ಕುಮಾರ್ ,ಸಹಾಯಕ ಅಭಿಯಂತರ ಗೌತಮ್ , ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರ ಪ್ರಭು , ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮೈಲಾರಪ್ಪ, ಸುಂದ್ರೇಗೌಡ, ಮಂದಾರ ,ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದ ನಗರ ಗಣೇಶ್, ರಂಗನಾಥ್, ,ಚಂದ್ರಕಲಾ , ಮುಖಂಡರಾದ ನಂದೀಶ್ ,ಅಪ್ಪಾಜಿಗೌಡ ,ರಾಜು ,ಕಂದಾಯ ನಿರೀಕ್ಷಕ ಆನಂದ್ ,ಗ್ರಾಮಲೆಕ್ಕಿಗೆ ಚೈತ್ರಾ , ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.