ಚಾಮರಾಜನಗರ: ತಾಲೂಕಿನ ನಾಗವಳ್ಳಿ ಗ್ರಾಮದ ಸಮೀಪದ ಸುವರ್ಣಾವತಿ ನಾಲೆ ಅಚ್ಚುಕಟ್ಟು ವ್ಯಾಪ್ತಿಯ ಕುಂದುಕಟ್ಟೆ ಕೆರೆ ಕೋಡಿಯಿಂದ ನಲ್ಲೂರು ಮಲ್ಲದೇವನಹಳ್ಳಿ ಚಾನಲ್ ರಸ್ತೆಯು ಹದೆಗೆಟ್ಟ ಹಿನ್ನೆಲೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಚಾಮರಾಜನಗರ ವ್ಯಾಪ್ತಿಯಲ್ಲಿ ಅಧಿಕವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕೆಲ ಭಾಗಗಳಲ್ಲಿ ರಸ್ತೆಗಳು ಹಾಳಾಗಿದೆ.ಈ ಭಾಗದ ರಸ್ತೆ ಅಭಿವೃದ್ದಿಗೆ ಹಲವು ದಿನಗಳಿಂದ ಈ ಭಾಗದ ರೈತರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ಇಂದು ಖುದ್ದಾಗಿ ಪರಿಶೀಲಿಸಿದ್ದು ತಕ್ಷಣದಲ್ಲೆ ರಸ್ತೆ ಮೆಟ್ಲಿಂಗ್ ಮಾಡುವಂತೆ ಸ್ಥಳದಲ್ಲಿದ್ದ ಕಾವೇರಿ ನೀರಾವರಿ ನಿಗಮದ ಎಇಇ ಮಂಜುನಾಥ್ ಅವರಿಗೆ ಸಾಸಕರು ಸೂಚಿಸಿದರು.
ರಸ್ತೆ ಮಾಡುವ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬೇಲೆಗಳಿದ್ದು ಇದನ್ನು ತೆರವುಗೊಳಿಸಲು ಸಮೀಪದ ರೈತರು ಸಹ ಸಹಕರಿಸಿ ಉತ್ತಮ ರಸ್ತೆ ನಿರ್ಮಾಣಕ್ಕೆ ಸಹಕರಿಸಬೇಕೆಂದು ರೈತರಲ್ಲಿ ಶಾಸಕರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಾಗವಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಅಗತ್ಯ ಅನುದಾನವನ್ನು ನೀಡಿ ಭವನ ಪೂಗೊಳಿಸಿಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ನಾಗವಳ್ಳಿ ನಾಗಯ್ಯ, ಚಿಕ್ಕಮಹದೇವು,ರೈತರು ಹಾಜರಿದ್ದರು.
