ಸ್ಥಗಿತಗೊಂಡ ಬೆಟ್ಟದಪುರ ರಾಗಿ ಖರೀದಿ ನೋಂದಣಿ ಕೇಂದ್ರಕ್ಕೆ ಶಾಸಕ ಕೆ.ಮಹದೇವ್ ಭೇಟಿ ಎಲ್ಲಾ ರೈತರು 3ನೇ ಬಾರಿಗೆ ರಾಗಿ ಬಿಡಲು ಮುಖ್ಯಮಂತ್ರಿ ಜೊತೆ ಚರ್ಚಿಸುವೆ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ಗುರಿ ಮುಗಿದಿದೆಯೆಂದು ರೈತರ ನೋಂದಣಿಯನ್ನು ಸರ್ಕಾರವು ಸ್ಥಗಿತ ಮಾಡಿದ್ದರಿಂದ ಆಕ್ರೋಶಗೊಂಡ ರೈತರು   ಶಾಸಕ ಕೆ. ಮಹದೇವ್ ರವರಿಗೆ ದೂರವಾಣಿ ಕರೆ ಮಾಡಿದರೆ ಸಮಸ್ಯೆ ತಿಳಿಸಿದರು.

ತಕ್ಷಣ ಶಾಸಕ ಕೆ. ಮಹದೇವ್ ಬೆಟ್ಟದಪುರ ಎಪಿಎಂಸಿ ರಾಗಿ ಖರೀದಿ ಕೇಂದ್ರಕ್ಕೆಸಂಜೆ ಭೇಟಿ ನೀಡಿ ರೈತರ ಅಹವಾಲುಗಳನ್ನು ಸ್ವೀಕರಿಸಿ ಶಾಸಕ ಕೆ ಮಹದೇವ್ ಮಾತನಾಡಿ ಸರ್ಕಾರವು ಈ ಹಿಂದೆ 2 ಲಕ್ಷದ 40 ಸಾವಿರ ಮೆಟ್ರಿಕ್ ಟನ್ ರಾಗಿ ಖರೀದಿಸಿತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರವು ರಾಗಿ ಖರೀದಿಸಲು ಸಣ್ಣ ಹಿಡುವಳಿ ರೈತರಿಗೆ ಅವಕಾಶ ಮಾಡಿಕೊಟ್ಟಿದೆ ಇದು ಅವೈಜ್ಞಾನಿಕ ನಮ್ಮ ತಾಲ್ಲೂಕಿನಲ್ಲಿ ರಾಗಿ ಬೆಳೆದಿರುವ ಎಲ್ಲಾ ರೈತರ ರಾಗಿಯನ್ನು ಸರ್ಕಾರವು ಮೂರನೇ ಬಾರಿಗೆ ಖರೀದಿಸಬೇಕು. ತಕ್ಷಣವೇ ಕೃಷಿ ಸಚಿವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ರೈತರು ರಾಗಿ ಬಿಡಲು ಹೆಸರನ್ನು ನೋಂದಾಯಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ ರೈತರು ಧೃತಿಗೆಡಬಾರದು ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಬೆಟ್ಟದಪುರ ಕೇಂದ್ರದ ರಾಗಿ ಖರೀದಿ ಅಧಿಕಾರಿ ರವಿ. ಪಿ ಆಂದೋಲನ ದಿನ ಪತ್ರಿಕೆಯೊಂದಿಗೆ ಮಾತನಾಡಿ ಕರ್ನಾಟಕದಲ್ಲಿ 1.14 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ರೈತರು ಹೆಸರು ನೋಂದಾಯಿಸಿದ್ದಾರೆ .ಮೈಸೂರು ಜಿಲ್ಲೆಯಲ್ಲಿ 8700 ಜನರು ಹೆಸರು ನೋಂದಾಯಿಸಿಕೊಂಡಿದ್ದು .ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 4000 ಅತಿ ಹೆಚ್ಚು ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಮೌಳಿ,ಆಹಾರ ನಾಗರಿಕ ಸರಬರಾಜು ಇಲಾಖೆಯ ಶಿರಸ್ತೇದಾರ್ ಸಣ್ಣಸ್ವಾಮಿ , ಆಹಾರ ನಿರೀಕ್ಷಕ ಮಂಜುನಾಥ್ ,ಬೆಟ್ಟದಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಾಶ ಯತ್ತಿಮನಿ ಖರೀದಿ ಕೇಂದ್ರದ ಅಧಿಕಾರಿ ರವಿ ಪೊಲೀಸ್ ರೈತ ಮುಖಂಡರಾದ ಭುವನಹಳ್ಳಿ ಗಿರೀಶ್ ಬಿಸಿ ,ರಾಜೇಂದ್ರ ಬಿ ಎಸ್ ಮಹದೇವಪ್ಪ, ಹರೀಶ್ ಬ್ಯಾಡರ ಬೆಳಗುಲಿಯ’ ಜಗದೀಶ್ ಕುಮಾರ್, ರಾಮೇಗೌಡ, ಉಮೇಶ್, ಸತೀಶ’ ಹೊನ್ನೇಗೌಡ ,ಕುಮಾರ್ ಸೇರಿದಂತೆ ದೊಡ್ಡೆಕೊಪ್ಪಲು ಮಧು ,   ರಾಜ ಶೇಖರ್ ಲೋಕೇಶ್ ಹಾಜರಿದ್ದರು.