
ಚಾಮರಾಜನಗರ: ತಾಲೂಕಿನ ಉತ್ತವಳ್ಳಿ, ಶಿವಪುರ, ಯಡಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೩೧.೮೦ ಲಕ್ಷ ರೂ.ವೆಚ್ಚದ ಮೂರು ಹೆಚ್ಚುವರಿ ಶಾಲಾಕೊಠಡಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಅವರು ಮಾತನಾಡಿ, ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಶಿಕ್ಷಣ, ಸರಕಾರಿ ಎಂಜಿನಿಯರಿಂಗ್ ಕಾಲೇಜು, ಕೃಷಿಕಾಲೇಜು, ಪದವಿ, ಸ್ನಾತಕೋತ್ತರ ಕೇಂದ್ರ ಸ್ಥಾಪನೆಯಾಗಿದೆ, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಸರಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಕ್ಷೇತ್ರ ವ್ಯಾಪ್ತಿಯ ಗ್ರಾಮಾಂತರದ ಶಾಲೆಗಳಿಗೆ ಕುಡಿಯುವ ನೀರು, ಶಾಲಾಕೊಠಡಿನಿರ್ಮಾಣದಂತಹ ಮೂಲಸೌಕರ್ಯಗಳಿಗೆ ಒತ್ತು ನೀಡಲಾಗುತ್ತಿದೆ, ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಭೂತ ಸಮಸ್ಯೆ ಇದ್ದರೂ, ತಕ್ಷಣ ಪರಿಹರಿಸಲು ಕ್ರಮವಹಿಸುವುದಾಗಿ ಶಾಸಕರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮೂರು ಗ್ರಾಮಗಳ ಗ್ರಾಮಸ್ಥರು ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಪತ್ರವನ್ನು ಶಾಸಕರಿಗೆ ಸಲ್ಲಿಸಿದರು.
ಕಾಮಗಾರಿ ನಿರ್ವಹಣೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆಧ್ಯತೆ ನೀಡಬೇಕು, ನಿಗಧಿತ ಅವಧಿಯಲ್ಲಿ ಕೊಠಡಿಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಕಾರ್ಮಿಕ ಕನಿಷ್ಠ ಸಲಹಾವೇತನ ಮಂಡಳಿ ಮಾಜಿಅಧ್ಯಕ್ಷ ಉಮೇಶ್, ಶಿವಪುರ ಗ್ರಾಪಂ ಅಧ್ಯಕ್ಷೆ ಎಂ.ಸಿ,ಮಹಾದೇವಮ್ಮ, ಉಪಾಧ್ಯಕ್ಷ ಕುಮಾರಸ್ವಾಮಿ, ಸದಸ್ಯರಾದ ಮಹದೇವಸ್ವಾಮಿ, ಪ್ರಮೋದ್, ನಾಗಮಣಿ, ರಂಗಸ್ವಾಮಿ, ಶಿವಕುಮಾರ್, ಜಯಮ್ಮ,. ರಾಮು, ಶಕುಂತಳ ಪ್ರಭುಸ್ವಾಮಿ, ತುಂಗಾಕುಮಾರ್, ಮುಖಂಡರಾದ ಕುದೇರು ಲಿಂಗಣ್ಣ, ಎಂಜಿನಿಯರ್ ನಂಜುಂಡಯ್ಯ, ಬಿಇಒ ಸೋಮಣ್ಣೇಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಗ್ರಾಮಸ್ಥರು, ಶಾಲಾಮುಖ್ಯಶಿಕ್ಷಕರು, ಸಹಶಿಕ್ಷಕರು ಹಾಜರಿದ್ದರು.
