ಚಾಮರಾಜನಗರ: ತಾಲೂಕಿನ ಅಮಚವಾಡಿ ಹಾಗೂ ಹೆಗ್ಗೊಠಾರ ಗ್ರಾಮದ ಶಾಲೆಯ ಹೆಚ್ಚುವರಿ ಕೊಠಡಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಅಮಚವಾಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿ ಕಾಮಗಾರಿಗೆ ೧೦.೬೦ ಲಕ್ಷ ರೂ, ಅದೇ ಗ್ರಾಮದ ಹೊಸಬಡಾವಣೆ ಶಾಲೆಗೆ ೨೧.೨೦ ಲಕ್ಷ, ಹೆಗ್ಗೊಠಾರ ಗ್ರಾಮದ ಸರಕಾರಿ ಪ್ರೌಡಶಾಲೆಯ ಹೆಚ್ಚುವರಿ ಶಾಲಾ ಕೊಠಡಿ ಕಾಮಗಾರಿಗೆ ೧೫.೭೫ ಲಕ್ಷ ರೂ.ವೆಚ್ಚ ಮಾಡಲಾಗುತ್ತಿದೆ. ಸರಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಸರಕಾರ ಅಗತ್ಯ ಅನುದಾನ ನೀಡುತ್ತಿದೆ. ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳನ್ನು ಪಡೆದು, ಸಮಾಜದ ಉತ್ತಮಪ್ರಜೆಗಳಾಗುವಂತೆ ಸಲಹೆ ನೀಡಿದರು.
ಹೆಗ್ಗೊಠಾರ ಗ್ರಾಮಪಂಚಾಯಿತಿ ಅಧ್ಯಕ್ಷ ಬಸವಣ್ಣ, ಸದಸ್ಯ ಪ್ರಭುಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಬಸವಣ್ಣ, ಉಪಾಧ್ಯಕ್ಷೆ ಪ್ರಮೀಳಾ, ಅಮಚವಾಡಿ ಗ್ರಾಪಂ ಅಧ್ಯಕ್ಷ ಮಹೇಂದ್ರ,ಆರ್. ಸದಸ್ಯ ರಾಜು, ಜ್ಯೋತಿ, ಸಿದ್ದಶೆಟ್ಟಿ, ಪುಟ್ಟಸ್ವಾಮಿ, ಮುಖಂಡರಾದ ಶಿವಣ್ಣ. ಶೇಷನಾಯಕ್ ರಾಜಣ್ಣ ಮಹೇಶ್ ಕುಮಾರ್, ಮಹದೇವು, ಹೆಗ್ಗೊಠಾರ ಸಂತೋಷ್, ರವೀಶ್ ಮೂರ್ತಿ ಸೇರಿದಂತೆ ಗ್ರಾಮದ ಯಜಮಾನರು ಮುಖಂಡರು ಬಿಇಒ ಸೋಮಣ್ಣೇಗೌಡ, ಸಹಾಯಕ ಎಂಜಿನಿಯರ್ ನಂಜುಂಡಯ್ಯ ಹಾಜರಿದ್ದರು.