ಚಾಮರಾಜನಗರ: ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಅಭಿವೃದ್ದಿಯಾದರೆ ಅದು ಪ್ರಗತಿಯ ಸಂಕೇತವಾಗಿದ್ದು ,ನಾಗರೀಕರ ಸಂಚಾರಕ್ಕೆ ಅಗತ್ತವಾಗಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ಅವರು ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಎಸ್ ಇ ಪಿ ಯೋಜನೆಯಡಿ ರಿಶಿಷ್ಟ ಜಾತಿಯ ಹೊಸ ಬಡಾವಣೆಯಲ್ಲಿ ೨೦ಲಕ್ಷರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.
ಸಿದ್ದಯ್ಯನಪುರ ಗ್ರಾಮಕ್ಕೆ ಅಗತ್ಯವಾಗಿ ಬೇಕಾದ ರಸ್ತೆ,ಚರಂಡಿ,ಸಮುದಾಯ ಭವನ,ಕುಡಿಯುವ ನೀರು ,ಗಂಗ ಕಲ್ಯಾಣ ಯೀಜನೆ, ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆ, ನಿವೇಶನ, ಸೇರಿದಂತೆ ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳನ್ನು ಸಮಗ್ರವಾಗಿ ಕಲ್ಪಿಸಿದ್ದು, ಇಂದು ರಿಶಿಷ್ಟ.ಜಾತಿಯ ಹೊಸ ಬಡಾವಣೆಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ್ದು ಅಗತ್ಯವಿರುವೆಡೆ ರಸ್ತೆ ಅಭಿವೃದ್ದಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾಮಗಾರಿ ನಿರ್ವಹಿಸುತ್ತಿರುವ ಇಂಜಿನಿಯರ್ ಗುತ್ತಿಗೆದಾರರು ಗುಣಮಟ್ಟದಿಂದ ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಸಿದ್ದಯ್ಯನಪುರ ಭಾಗದಲ್ಲಿ ನೆನೆಗುದಿಗೆ ಬಿದ್ದಿದ್ದ ಸೇತುವೆ ಸಂಪರ್ಕಗಳಿಲ್ಲದೆ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಲು ಕಷ್ಟಕರವಾಗಿತ್ತು,ಇಲ್ಲಿನ ಜನರ ಬೇಡಿಕೆಯಂತೆ ಈಗಾಗಲೇ೭. ಕೋಟಿಗೂ ಹೆಚ್ಚು ವೆಚ್ಚದಲ್ಲಿ ಸಿದ್ದಯ್ಯನಪುರ ಗ್ರಾಮದಿಂದ ಅಟ್ಟುಗುಳಿಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಖ್ಯ ರಸ್ತೆ ಅಭಿವೃದ್ದಿ ಕಾಮಗಾರಿ ಬಹುತೇಕ ಕಾಮಗಾರಿ ಮುಗಿದಿದ್ದು ತಮ್ಮ ಕ್ಷೇತ್ರ ವ್ಯಾಲ್ತಿಯಲ್ಲಿ ಎಸ್ ಇಪಿ ,ಟಿಎಸ್ ಪಿ ಯೋಜನೆಯಡಿ ಪ.ಜಾತಿ ಹಾಗೂ ಪ.ಪಂಗಡದವರು ವಾಸಿಸುವ ಬಡಾವಣೆಗಳಲ್ಲಿ ರಸ್ತೆ,ಚರಂಡಿಗಳನ್ನು ಅಭಿವೃಧ್ಧಿಪಡಿಸಲಾಗಿದ್ದು ಅಗತ್ಯವಿರುವೆಡ ಅಭಿವೃದ್ಧಿ ಪಡಿಸಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಶೈಲಜಾ ಗೋವಿಂದರಾಜು ಗ್ರಾ.ಪಂ ಸದಸ್ಯ ಬಸವಣ್ಣ ಮಹದೇವಮ್ಮಸಿದ್ದರಾಜು ಯಜಮಾನರಾದ ನಂಜುಂಡಯ್ಯ ದೂಡ್ಡಮಹದೇವಯ್ಯ ಪಾಪು ಹೊಂUಲವಾಡಿ ಮಾಜಿ ಗ್ರಾ.ಪಂ ಅಧ್ಯಕ್ಷ ಶಿವಮಾದಯ್ಯ ಮಾಜಿ ಸದಸ್ಯ ಎಂ.ನಂಜುಂಡಸ್ವಾಮಿ ಮುಖಂಡರಾದ ಹನುಮಂತು ಶ್ರೀಕಂಠಮೂರ್ತಿ ಬೇಕಾರಿ ಕುಮಾರ್ ಗೋವಿಂದರಾಜು ರಾಚಯ್ಯ ಅಂಕಯ್ಯ ಪ್ರಕಾಶ್ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಮಹದೇವ ಸ್ವಾಮಿ ರತೀಶ್ ಸೇರಿದಂತೆ ಗ್ರಾಮಸ್ಥರುಇದ್ದರು.