ಮೈಸೂರು, ಜನವರಿ 27 – ಮೈಸೂರು ಜಿಲ್ಲೆಯ ಲಲಿತಾದ್ರಿಪುರ ಗ್ರಾಮದ ನಾಗೇಶ ಅವರು ಜನವರಿ 25ರಂದು ಮದ್ಯಾಹ್ನ 1:30 ಗಂಟೆಗೆ ಕಾಣೆಯಾಗಿದ್ದು, ಮೈಸೂರಿಗೆ ಹೋಗಿ ಬರುತ್ತೇನೆಂದು ಹೇಳಿ ತನ್ನ ಆಕ್ಸಿಸ್ ಬೈಕ್ ಅನ್ನು ತೆಗೆದುಕೊಂಡು ಹೋದವರು ಇದುವರೆಗೂ ಹಿಂದುರಿಗಿರುವುದಿಲ್ಲ ಎಂದು ತಾಯಿ ಮಂಜುಳ ಅವರು ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಾಣೆಯಾದ ನಾಗೇಶ ಅವರಿಗೆ 24 ವರ್ಷವಾಗಿದ್ದು, 5.9 ಅಡಿ ಎತ್ತರವಿರುತ್ತಾರೆ. ಗೋಧಿ ಮೈ ಬಣ್ಣ, ಸಾಧರಣ ಮೈಕಟ್ಟು ಹೊಂದಿರುತ್ತಾರೆ.ಕತ್ತಿನ ಮಧ್ಯಭಾಗದಲ್ಲಿ ಒಂದು ಕಾರೆ ಹರಳು ಇರುತ್ತದೆ. ಮನೆಯಿಂದ ಹೊರಡುವಾಗ ನೀಲಿ ಬಣ್ಣದ ಟಿ-ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಕಾಣೆಯಾದವರ ಬಗ್ಗೆ ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ದೂ.ಸಂ. 0821-2520040, ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: 0821-2444800 ಮತ್ತು ಮೈಸೂರು ಸೌತ್ ಪೊಲೀಸ್ ಠಾಣೆಯ ದೂ.ಸಂ. 0821-2444955 ಅನ್ನು ಸಂಪರ್ಕಿಸಬಹುದು ಎಂದು ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.