ಮೈಸೂರು, ಡಿಸೆಂಬರ್ 14 -ಮೈಸೂರಿನ ರಮ್ಮನಹಳ್ಳಿ ಗ್ರಾಮದ ಸಂತೋಷ್ ಅವರು ಡಿಸೆಂಬರ್ 7 ರಂದು ಕಾಣೆಯಾಗಿದ್ದು, ರಾತ್ರಿ 9-30 ಗಂಟೆ ಸಮಯದಲ್ಲಿ ಯಾವುದೋ ಫೋನ್ ಕಾಲ್ ಬಂದಿದ್ದು ಫೋನಿನಲ್ಲಿ ಮಾತನಾಡಿಕೊಂಡು ಮನೆಯಿಂದ ಹೊರಗೆ ಹೋದವನು ಇದುವರೆವಿಗೂ ವಾಪಸ್ಸು ಬಂದಿರುವುದಿಲ್ಲ.

ಕಾಣೆಯಾದವರ ಚಹರೆ ಇಂತಿದೆ: 35 ವರ್ಷ, ಸಾಧರಣ ಮೈಕಟ್ಟು, ಎಣ್ಣೆಗಂಪು ಬಣ್ಣ ಹೊಂದಿದ್ದಾರೆ. ಬಿಳಿ ಬಣ್ಣದ ಬನಿಯನ್ ಮತ್ತು ಮರೂನ್ ಬಣ್ಣದ ಚಡ್ಡಿಯನ್ನು ಧರಿಸಿರುತ್ತಾರೆ. ಎತ್ತರ ಸುಮಾರು 5.4 ಅಡಿ. ಕನ್ನಡ ಭಾಷೆ ಮಾತನಾಡುತ್ತಾರೆ.
ಕಾಣೆಯಾದವರ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ:0821-2444955, ಎಸ್‍ಪಿ ಅವರ ದೂ.ಸಂ. 0821-2520040 ಹಾಗೂ ಮೈಸೂರು ಜಿಲ್ಲಾ ಕಂಟ್ರೋಲ್ ರೂಂ ದೂ.ಸಂ. 0821-2444800ನ್ನು ಸಂಪರ್ಕಿಸುವಂತೆ ಮೈಸೂರು ದಕ್ಷಿಣ ಪೊಲೀ ಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.