ಮೈಸೂರು:  ಮಿಹಜ್ ಇಂಟಫೇತ್ ವೆಲ್ ಫೇರ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ನಗರದ ಮಂಡಿ ಸಾತಗಳ್ಳಿ ಡಿಪೋ ಬೀಡಿಕ್ವಾಟ್ರಸ್ ಸಾತಗಳ್ಳಿ ಡಿಪೋ ಪುಲಕೇಶಿ ರಸ್ತೆ ವ್ಯಾಪ್ತಿಯಲ್ಲಿ ಬಡ ಕುಟುಂಬಗಳಿಗೆ  ಆಹಾರವನ್ನು ವಿತರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಮೈಸೂರು ಸಿಟಿ ಯೂತ್ ಪ್ರೆಸಿಡೆಂಟ್ ಮಹಮದ್ ಸಿಪ್ಟಿನ್ ಅವರು, ಬಹಳಷ್ಟು ಮಂದಿ ಕೊರೊನಾದಿಂದ ಸಂಕಷ್ಟಕ್ಕೊಳಗಾಗಿದ್ದು, ಜನ ಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗಿದೆ. ಇಂತಹ ಸಂದರ್ಭ ಆರ್ಥಿಕವಾಗಿ ಹಿಂದುಳಿದ ದಿನಗೂಲಿ 500 ಕುಟುಂಬಗಳಿಗೆ ಆಹಾರ ವಿತರಿಸುವ ಮೂಲಕ ಹಸಿದ ಹೊಟ್ಟೆಗೆ ಅನ್ನ ನೀಡುವ ಪುಣ್ಯ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಇದು ಸಮಾಜಕ್ಕೆ ಮಾಡಬಹುದಾದ ಅಳಿಲು ಸೇವೆಯಾಗಿದೆ. ಮುಂದಿನ ದಿನಗಳಲ್ಲಿ  ಈ ಸಂಕಷ್ಟ ದೂರವಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಇಬ್ರಾಹಿಂ ಖಾನ್, ಅಲಹಜ್ ಅಪ್ರೋಜ್ ಖಾನ್, ಮಹಮದ್ ಆಜರ್ ಮಿಹಜ್, ಇಂಟಫೇತ್ ವೆಲ್ ಫೇರ್ ಫೌಂಡೇಷನ್ ನ ಸದಸ್ಯರು ಸೇರಿದಂತೆ ಹಲವರು ಇದ್ದರು.

By admin