ಫ್ಲೋರಿಡಾ : ಮೆಕ್ಸಿಕೋದ 26 ರ ಹರೆಯದ ಚೆಲುವೆ ಆ್ಯಂಡ್ರಿಯಾ ಮೆಝಾ ನೂತನ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗಿದ್ದಾರೆ . ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಸ್ಪರ್ಧೆಯಲ್ಲಿ 69 ನೇ ವಿಶ್ವ ಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ . ಬ್ರೆಜಿಲ್ ನ ಜೂಲಿಯಾ ಗಾಮಾ ಫಸ್ಟ್ ರನ್ನರ್ ಅಫ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ . ಪೆರುವಿನ ಮಕೇಟಾ ದ್ವಿತೀಯ ರನ್ನರ್ ಅಫ್ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ . ಭಾರತದ ಸ್ಪರ್ಧಿ ಆಡಲೈನ್ ಕ್ಯಾಸ್ಟೆಲಿನೋ ಮೂರನೇ ಸ್ಥಾನದಲ್ಲಿ ಮಿಂಚಿದ್ದಾರೆ.