ಮದ್ದೂರು ತಾಲ್ಲೂಕಿನಲ್ಲಿ ನಡೆದ ಐತಿಹಾಸಿಕ ೧೫೦೦ ನೇ ಮದ್ಯವರ್ಜನ ಶಿಬಿರದಲ್ಲಿ ವರ್ಚುವಲ್ ಕಾನ್ಫರೆನ್ಸ್ ಮೂಲಕ ಸಂದೇಶ ನೀಡಿದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಯಾವುದೇ ಔಷಧಿ ಇಂಜೆಕ್ಷನ್ ಮದ್ದು ಮಾತ್ರೆಗಳಿಲ್ಲದೆ ಯಾವುದೇ ಅಡ್ಡ ಪರಿಣಾಮಗಳು ಮಾಡದೆ ನೇರವಾಗಿ ಮನ ಮುಟ್ಟುವ ಕೆಲಸ ಜನ ಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರಗಳಿಂದ ಆಗುತ್ತಿದೆ. ವ್ಯಸನಗಳಲ್ಲಿ ಒಳ್ಳೆಯ ವ್ಯಸನ ಒಳ್ಳೆಯ ಚಟುವಟಿಕೆಗಳು ಒಳ್ಳೆಯ ಸಂಸ್ಕಾರಗಳು ಇರುವ ಹಾಗೆ ಕೆಟ್ಟ ವ್ಯಸನ ಕೆಟ್ಟ ಚಟುವಟಿಕೆಗಳು ಕೆಟ್ಟ ಸಂಸ್ಕಾರ ಗಳಿರುತ್ತವೆ ,

ಇವುಗಳಲ್ಲಿ ಒಳ್ಳೆಯ ಉದ್ದೇಶ ಯಾವುದೇ ಕೆಟ್ಟ ಉದ್ದೇಶ ಯಾವುದು ಎಂಬುದನ್ನು ಗುರುತಿಸುವುದು ಅತಿ ಮುಖ್ಯವಾದ ವಿಚಾರ ಕೆಲವೊಮ್ಮೆ ಕೆಟ್ಟಅಭ್ಯಾಸಗಳನ್ನು ಉತ್ತಮ ಎಂಬುದಾಗಿ ತಿಳಿದಾಗ ಅಂಥವರಿಗೆ ಮನ ಪರಿವರ್ತನೆಯ ಜೊತೆಗೆ ದೈಹಿಕ ಮಾನಸಿಕ ಚಿಕಿತ್ಸೆಯನ್ನು ನೀಡಿ ಸನ್ಮಾರ್ಗದಲ್ಲಿ ನಡೆಸುವ ಪ್ರಯತ್ನ ಮಾಡಬೇಕಾಗುತ್ತದೆ ಶಾಶ್ವತ ಸಂತೋಷವನ್ನು ಬಯಸುವವರು ಧರ್ಮದ ದಾರಿಯಲ್ಲಿ ನಡೆಯಬೇಕು ಕ್ಷಣಿಕ ಸಂತೋಷಕ್ಕಾಗಿ ಮದ್ಯಪಾನ ಡ್ರಗ್ಸ್ ಮುಂತಾದ ವ್ಯಕ್ತಿತ್ವವನ್ನು ನಾಶ ಮಾಡುವ ಚಟ ಗಳಿಂದ ಹೊರಬಂದು

ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ದೃಢಚಿತ್ತದಿಂದ ಸಂಕಲ್ಪ ಶಕ್ತಿಯನ್ನು ಬೆಳೆಸಿ ಸತ್ಯ ಅಹಿಂಸೆ ಸತ್ಸಂಗ ದಂತಹ ವಿಶಿಷ್ಟ ವಿಚಾರಗಳನ್ನು ಮೈಗೂಡಿಸಿ ಕೊಂಡು ಸಂಸಾರದಲ್ಲಿ ನೆಮ್ಮದಿ ಸಾಮಾಜಿಕ ಗೌರವದೊಂದಿಗೆ ಆರ್ಥಿಕ ಸದೃಢತೆಯಿಂದ ಬಾಳಿದಾಗ ಕುಟುಂಬ ಮತ್ತು ಸಮಾಜ ಸುಭಿಕ್ಷ ಪಥದಲ್ಲಿ ಮುನ್ನಡೆಯಲು ಸಾಧ್ಯ ಇದಕ್ಕಾಗಿಯೇ ವ್ಯಸನಮುಕ್ತ ಕ್ಕಾಗಿ ಶಿಬಿರಗಳನ್ನು ಆಯೋಜನೆ ಮಾಡಿ ಕೆಟ್ಟ ಚಟುವಟಿಕೆಗಳಿಂದ ಮುಕ್ತಿ ಹೊಂದಲು ಯೋಜನೆಯ ಮೂಲಕ ಸತತ ಪ್ರಯತ್ನ ನಡೆಸಲಾಗುತ್ತಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳದಿಂದ ವರ್ಚುವಲ್ ಕಾನ್ಫರೆನ್ಸ್ ಮೂಲಕ ಸಂದೇಶ ನೀಡಿದರು.

 ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಜನಜಾಗೃತಿ ವೇದಿಕೆ ಮೂಲಕ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಶ್ರೀ ಸೋಮೇಶ್ವರ ಸಭಾ ಭವನ ಬೆಸಗರಹಳ್ಳಿ ಎಂಬಲ್ಲಿ ನಡೆದ ೧೫೦೦ನೇ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳು ಉದ್ದೇಶಿಸಿ ಮಾತನಾಡುತ್ತಿದ್ದದರು. ಶಿಬಿರವು ೧ವಾರಗಳ ಕಾಲ ನಡೆಯುತ್ತಿದ್ದು ಮಂಡ್ಯ ಜಿಲ್ಲೆಯ ವಿವಿಧೆಡೆಯಿಂದ ೬೧ ಮಂದಿ ಶಿಬಿರಾರ್ಥಿಗಳು ದಾಖಲಾಗಿದ್ದರು.

    ಇದೆ ಸಂದರ್ಭದಲ್ಲಿ ಮೈಸೂರು ಪ್ರಾದೇಶಿಕ ವಿಭಾಗದ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಪಿ ಗಂಗಾಧರ ರೈ ಸಭಾಭವನದ ಮಾಲೀಕರಾದ ಶ್ರೀ ಸೋಮೇಗೌಡ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ನಿಂಗೇಗೌಡ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಸಂದರ್ಶ ಪಿ ಮಂಡ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ವಿನಯ್ ಕುಮಾರ್ ಸುವರ್ಣ ಯೋಜನಾಧಿಕಾರಿ ಶ್ರೀ ಬಿ ಆರ್

ಯೋಗೀಶ್,ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್,ಶಿಬಿರಾಧಿಕಾರಿ ದಿವಾಕರ ಪೂಜಾರಿ, ಆರೋಗ್ಯ ಸಹಾಯಕಿ ಫಿಲೋಮಿನಾ ಡಿಸೋಜಾ, ಶಿಬಿರ ನಡೆಸುವಲ್ಲಿ ಸಹಕರಿಸಿರುತ್ತಾರೆ. ವರ್ಚುವಲ್ ಕಾನ್ಫರೆನ್ಸ್ ಸಭೆಯಲ್ಲಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಗಳಾದ ಅನಿಲ್ ಕುಮಾರ್ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಾಯಸ್ ಯೋಜನಾಧಿಕಾರಿ ಶ್ರೀ ಮೋಹನ್ ಉಪಸ್ಥಿತರಿದ್ದರು.