
ಚಾಮರಾಜನಗರ: ಸಹಕಾರ ಸಂಘಗಳ ಸದಸ್ಯರು ಒಗ್ಗಟ್ಟಿನಿಂದ ಕರ್ತವ್ಯ ನಿರ್ವಹಿಸಿದಾಗ ಅವುಗಳ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ರಕ್ಷಿತಾಮಹಲ್ ಸಭಾಂಗಣದಲ್ಲಿ ನಡೆದ ಮೈಸೂರು-ಚಾಮರಾಜನಗರ ಜಿಲ್ಲಾ ಉಪ್ಪಾರ ನೌಕರರ ಅಭಿವೃದ್ಧಿ ಸಹಕಾರ ಸಂಘದ ೨೧-೨೨ ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ಸಂಘದ ೪ ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗಿಡಕ್ಕೇ ನೀರಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಸಹಕಾರಸಂಘವನ್ನು ಮುನ್ನಡೆಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ. ಸಂಘದ ಸದಸ್ಯರಲ್ಲಿ ಹೊಂದಾಣಿಕೆ ಇರಬೇಕು, ಸಂಘವು ನಾಲ್ಕನೇ ವಾರ್ಷಿಕ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ಸಂತಸದ ಸಂಗತಿ. ಸಂಘದ ಸದಸ್ಯತ್ವ ಹೆಚ್ಚಳವಾಗುವುದರೊಂದಿಗೆ ಸಂಘಗಳು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು-ಚಾಮರಾಜನಗರ ಜಿಲ್ಲಾ ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಕೆ.ರವಿ ಮಾತನಾಡಿ, ಸಂಘವು ನಾಲ್ಕುವರ್ಷದಲ್ಲಿ ೨೯,೮.೧೩೩ ಲಕ್ಷ ರೂ. ವಹಿವಾಟು ನಡೆಸಿದ್ದು, ೨೦-೨೧ ನೇ ಸಾಲಿನಲ್ಲಿ ೧.೮೦ ಲಕ್ಷ, ೨೧-೨೨ ನೇಸಾಲಿನಲ್ಲಿ ೨.೫೨ ಲಕ್ಷ ನಿವ್ವಳ ಲಾಭಗಳಿಸಿದೆ ಎಂದರು.
ಸರಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಟಿ.ಎಂ.ರಂಗಸ್ವಾಮಿ ಮಾತನಾಡಿ, ಸಮುದಾಯದ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರುವ ಸಂಬಂಧ ಐಎಎಸ್, ಐಪಿಎಸ್, ಐಎಫ್‌ಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಕೊಡಿಸಲು ಚಿಂತನೆ ನಡೆಸಲಾಗದೆ. ಶಾಸಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದೇವೇಳೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ ೮೦ ಕ್ಕಿಂತ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡುವ ಮೂಲಕ ನೌಕರಿಯಲ್ಲಿ ಬಡ್ತಿಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಬಿ.ಮಹದೇವ, ಕೆನರಾಬ್ಯಾಂಕ್ ವ್ಯವಸ್ಥಾಪಕ ನಂಜುಂಡಸ್ವಾಮಿ, ಪ್ರಾಂಶುಪಾಲರಾದ ಸೋಮಣ್ಣ, ಚಿಕ್ಕಣ್ಣಸ್ವಾಮಿ, ಪ್ರಿಯಾಶಂಕರ್, ತೋಟಗಾರಿಕೆ ಇಲಾಖೆಯ ಎಸ್.ಕುಮಾರ್, ಕಳಸೇಗೌಡ, ಕೆಪಿಟಿಸಿಎಲ್
ವೆಂಕಟೇಶ್ ಕುಮಾರ್, ಸೆಸ್ಕ್ ಎಇಇ ಮಹೇಶ್, ಸರ್ಕಲ್ ಇನ್ಸ್‌ಪೆಕ್ಟರ್ ಮಹದೇವಶೆಟ್ಟಿ, ರಾಮಸಮುದ್ರ ಸೋಮಣ್ಣ, ರೇಚಣ್ಣ, ಉಪನ್ಯಾಸಕ ಗೋವಿಂದರಾಜ್, ಬಾಗಳಿಮಹದೇವಸ್ವಾಮಿ, ಕಾರ್ಯಕಾರಿ ಆಡಳಿತಮಂಡಳಿ ನಿರ್ದೇಶಕರು ಹಾಜರಿದ್ದರು.
